ಐಪಿಎಲ್ 2019 : ಜೈಪುರದಲ್ಲಿ 346 ಕ್ರಿಕೆಟರ್ಸ್ ಹರಾಜಿಗೆ

ಬೆಂಗಳೂರು, ಡಿಸೆಂಬರ್ 11: ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಹರಾಜು ಪ್ರಕ್ರಿಯೆಗೆ ಒಳಪಡುವ ಆಟಗಾರರ ಅಂತಿಮ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯು ಮಂಗಳವಾರ(ಡಿಸೆಂಬರ್ 11)ದಂದು ಪ್ರಕಟಿಸಿದೆ.
ಐಪಿಎಲ್ 2019ರಲ್ಲಿ ಆಡಲಿರುವ 8 ಫ್ರಾಂಚೈಸಿಗಳು ಸುಮಾರು 1003 ಆಟಗಾರರನ್ನು ಆಯ್ಕೆಮಾಡಿ ಬಿಸಿಸಿಐಗೆ ಸಲ್ಲಿಸಿದ್ದವು, ಈ ಪೈಕಿ 346 ಕ್ರಿಕೆಟರ್ ಗಳ ಅಂತಿಮ ಪಟ್ಟಿಯನ್ನು ತಯಾರಿಸಿ, ಪಟ್ಟಿ ಬಹಿರಂಗಪಡಿಸಲಾಗಿದೆ.
ಜೈಪುರದಲ್ಲಿ ಡಿಸೆಂಬರ್ 18,2018ರಂದು 346 ಕ್ರಿಕೆಟರ್ಸ್ ಹರಾಜಿಗೆ ಒಳಪಡಲಿದ್ದಾರೆ. 2 ಕೋಟಿ ರು ಮೂಲಬೆಲೆ ಎಂದು ನಿಗದಿ ಪಡಿಸಲಾಗಿದೆ.
2 ಕೋಟಿ ಮೂಲಬೆಲೆ : ಬ್ರೆಂಡನ್ ಮೆಕಲಮ್, ಕ್ರಿಸ್ ವೋಕ್ಸ್, ಲಸಿತ್ ಮಾಲಿಂಗ, ಶಾನ್ ಮಾರ್ಷ್, ಕಾಲಿನ್ ಇನ್ಗ್ರಾಮ್, ಕೋರಿ ಆಂಡರ್ಸನ್, ಏಂಜೆಲೋ ಮ್ಯಾಥ್ಯೂಸ್, ಡ್ಯಾನ್ಸಿ ಶಾರ್ಟ್ ಈ ಪಟ್ಟಿಯಲ್ಲಿರುವ ವಿದೇಶಿ ಆಟಗಾರರಾಗಿದ್ದಾರೆ.
ಕಳೆದ ಬಾರಿ 11.5 ಕೋಟಿ ರುಗೆ ಸೇಲ್ ಆಗಿ ಅಚ್ಚರಿ ಮೂಡಿಸಿದ್ದ ವೇಗಿ ಜಯದೇವ್ ಉನದ್ಕತ್ ಈ ಬಾರಿ 1.5 ಕೋಟಿ ರು ಮೂಲ ಬೆಲೆ ಪಡೆದುಕೊಂಡಿದ್ದಾರೆ. ಕಿಂಗ್ಸ್ ಎಲೆವನ್ ಆಲ್ ರೌಂಡರ್ ಆಗಿದ್ದ ಯುವರಾಜ್ ಸಿಂಗ್, ಅಕ್ಷರ್ ಪಟೇಲ್ ಅವರಿಗೆ 1 ಕೋಟಿ ರು ಮೂಲ ಬೆಲೆ ನಿಗದಿಯಾಗಿದೆ.
12ನೇ ಆವೃತ್ತಿಯಲ್ಲಿ ಆಡಲು ಉತ್ಸುಕರಾಗಿರುವ ದಕ್ಷಿಣ ಆಫ್ರಿಕಾದ ವೇಗಿಗಳಾದ ಡೇಲ್ ಸ್ಟೈನ್ ಹಾಗೂ ಮಾರ್ನೆ ಮಾರ್ಕೆಲ್ ಗೆ 1.5 ಕೋಟಿರು ನಿಗದಿಯಾಗಿದೆ. ಮೊಹಮ್ಮದ್ ಶಮಿಗೆ 1 ಕೋಟಿ ರು ಹಾಗೂ ಇಶಾಂತ್ ಶರ್ಮಗೆ 75 ಲಕ್ಷ ರು ಫಿಕ್ಸ್ ಮಾಡಲಾಗಿದೆ.
2 ಕೋಟಿ ರು ಮೂಲ ಬೆಲೆಯನ್ನು 9 ಆಟಗಾರರು ಪಡೆದುಕೊಂಡಿದ್ದಾರೆ. 1.5 ಕೋಟಿ ರು ಬೆಲೆ 10, 1 ಕೋಟಿ ರು ಬೆಲೆ 19, 75 ಲಕ್ಷ ರು ಬೆಲೆ 18 ಹಾಗೂ 50 ಲಕ್ಷ ರು ಬೆಲೆ 62 ಆಟಗಾರರಿಗೆ ನಿಗದಿಯಾಗಿದೆ.
ಮೊದಲ ಬಾರಿಗೆ ಆಡಲಿರುವ ಆಟಗಾರರ ಪೈಕಿ 40 ಲಕ್ಷ ರು ಬೆಲೆಯಲ್ಲಿ 7, 30 ಲಕ್ಷ ರು ಬೆಲೆಯಲ್ಲಿ 8 ಮತ್ತು 20 ಲಕ್ಷ ರು ಬೆಲೆಯಲ್ಲಿ 213 ಆಟಗಾರರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications