ರಾಜ್ ಕೋಟ್, ಅ.18: ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ನೀಡಿದ್ದ ಗೆಲುವಿನ ಗುರಿ ಮುಟ್ಟಲಾಗದೆ ಟೀಂ ಇಂಡಿಯಾ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಬಿಡಿ ಪಡೆ ಭಾರತಕ್ಕೆ ಗೆಲ್ಲಲು 271 ರನ್ ಗುರಿ ನೀಡಿತ್ತು. ಧೋನಿ ಪಡೆ 6 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಸೊಲೊಪ್ಪಿಕೊಂಡಿತು.
ಕಾನ್ಪುರದಲ್ಲಿ ದಕ್ಷಿಣ ಆಫ್ರಿಕಾ ತಂಡ 5 ರನ್ ಗಳ ರೋಚಕ ಜಯ ದಾಖಲಿಸಿದರೆ, ಇಂದೋರ್ ನಲ್ಲಿ ಧೋನಿ ಆಟದ ಮೂಲಕ ಟೀಂ ಇಂಡಿಯಾ 22 ರನ್ ಗಳ ಗೆಲುವು ಸಾಧಿಸಿತು. ನಾಲ್ಕನೇ ಏಕದಿನ ಪಂದ್ಯ ಚೆನ್ನೈನಲ್ಲಿ ಅಕ್ಟೋಬರ್ 22 (ಗುರುವಾರ) ನಡೆಯಲಿದೆ.
ಭಾರತದ ರನ್ ಚೇಸ್: ವಿರಾಟ್ ಕೊಹ್ಲಿ ಹಾಗೂ ಧೋನಿ ಇರುವ ತನಕ ಭಾರತದ ಗೆಲುವಿನ ಆಸೆ ಇತ್ತು. ರೋಹಿತ್ ಎಂದಿನಂತೆ ಉತ್ತಮ ಆಟ. ರೈನಾ ಮತ್ತೆ ಟುಸ್, ಕೆಳ ಕ್ರಮಾಂಕದಲ್ಲಿ ಬಂದ ರಹಾನೆಗೆ ದಿಕ್ಕು ತೋಚಲಿಲ್ಲ. ಮೇಲಾಗಿ ಮಾರ್ನೆ ಮಾರ್ಕೆಲ್ ಮಾರಕ ಬೌಲಿಂಗ್ ದಾಳಿ ಟೀಂ ಇಂಡಿಯಾ ವನ್ನು ಸರಣಿಯಲ್ಲಿ 1-2 ಹಿಂದೆ ಉಳಿಯುವಂತೆ ಮಾಡಿತು.
* ರೋಹಿತ್ ಶರ್ಮ 65 (74 , 7x4, 2x6) ಗಳಿಸಿದರೆ, ಶಿಖರ್ ಧವನ್ 13 ರನ್ ಗಳಿಸಿ ನಿರಾಶೆ ಮೂಡಿಸಿದರು.
* ಸುರೇಶ್ ರೈನಾ ಶೂನ್ಯ, ರಹಾನೆ 4 ರನ್ ರನ್ ಚೇಸ್ ಮಾಡುವ ಮೂಡ್ ನಲ್ಲಿರಲಿಲ್ಲ.
* ವಿರಾಟ್ ಕೊಹ್ಲಿ 77 (99 ಎಸೆತ, 5x4), ಧೋನಿ 47 (61 ಎಸೆತ, 5x4) ಉತ್ತಮ ಜೊತೆಯಾಟ ರನ್ ಚೇಸ್ ನ ಮುಖ್ಯಾಂಶವಾಗಿತ್ತು.
* ಅಕ್ಷರ್ ಪಟೇಲ್ 15, ಹರ್ಭಜನ್ 20 ರನ್ ಪ್ರಯೋಜನಕ್ಕೆ ಬರಲಿಲ್ಲ. 50 ಓವರ್ ಗಳಲ್ಲಿ ಭಾರತ 252/6.
* ಮಾರ್ನೆ ಮಾರ್ಕೆಲ್ 10 ಓವರ್ ಗಳಲ್ಲಿ 1 ಮೇಡನ್ ಸಹಿತ 39 ಕ್ಕೆ 4 ಗಳಿಸಿ ಪಂದ್ಯ ಶ್ರೇಷ್ಠ ಎನಿಸಿದರು.

* ಮಧ್ಯಮ ಕ್ರಮಾಂಕದಲ್ಲಿ ಫಾಫ್ ಡು ಪ್ಲೆಸಿಸ್ 63 ಎಸೆತಗಳಲ್ಲಿ 60 ರನ್ ಗಳಿಸಿ, ಡಿಕಾಕ್ ಗೆ ಉತ್ತಮ ಸಾಥ್ ನೀಡಿದರು.
* ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದ ಹಶೀಂ ಅಮ್ಲಾ 5 ರನ್ ಗಳಿಸಿ ಮಿಶ್ರಾ ಸ್ಪಿನ್ ಅರಿಯದೆ ಸ್ಟಂಪ್ ಔಟ್ ಆದರು.
* ಕೊನೆ ಹಂತದಲ್ಲಿ ಬೆಹರ್ದಿನ್ 33 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
* ಇನ್ನಿಂಗ್ಸ್ ನ ಸ್ಟಾರ್ ಆಟಗಾರ ಕ್ವಿಂಟಾನ್ ಡಿ ಕಾಕ್ 103 ರನ್ (118 ಎಸೆತ , 11x4, 1x6)
* ಭಾರತದ ಪರ ಮೋಹಿತ್ ಶರ್ಮ 2, ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಪಿಚ್ ರಿಪೋರ್ಟ್: ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಉಮೇಶ್ ಯಾದವ್ ಬದಲಿಗೆ ಅಮಿತ್ ಮಿಶ್ರಾ ಆಡುತ್ತಿದ್ದಾರೆ.ಗುಜರಾತಿನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಈಗ ಕ್ರಿಕೆಟ್ ಪಿಚ್ ಗೂ ಕಾಲಿರಿಸುತ್ತಿದ್ದು, ಭಾನುವಾರದ ಪ್ರತಿಭಟನೆಯ ಭೀತಿಯಲ್ಲೇ ಪಂದ್ಯ ಆಯೋಜನೆಗೊಂಡಿದೆ.

ತಂಡಗಳು:
ಭಾರತ: ಶಿಖರ್ ಧವನ್, ರೋಹಿತ್ ಶರ್ಮ, ಅಜಿಂಕ್ಯರಹಾನೆ, ವಿರಾಟ್ ಕೊಹ್ಲಿ, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ಸುರೇಶ್ ರೈನಾ, ಅಕ್ಷರ್ ಪಟೇಲ್, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಮೋಹಿತ್ ಶರ್ಮ.
ದಕ್ಷಿಣ ಆಫ್ರಿಕಾ: ಹಶೀಂ ಆಮ್ಲಾ, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ಎಬಿ ಡಿವಿಲಿಯರ್ಸ್ (ನಾಯಕ), ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ದೀನ್, ಡೇಲ್ ಸ್ಟೈನ್, ಕಗಿಸೊ ರಬಡಾ, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್. (ಒನ್ ಇಂಡಿಯಾ ಸುದ್ದಿ)