ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ, ಭಾರತಕ್ಕೆ ಆರಂಭಿಕ ಆಘಾತ
ಕೊಲಂಬೋ, ಆಗಸ್ಟ್ 28: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಶುಕ್ರವಾರ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್‌ನಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಟೀಂ ಇಂಡಿಯಾಕ್ಕೆ ನಮನ್ ಓಜಾ ಹಾಗೂ ಚೇತೇಶ್ವರ್ ಪೂಜಾರಾ ಸೇರ್ಪಡೆಗೊಂಡಿದ್ದಾರೆ. ಭಾರತ ಆರಂಭಿಕ ಆಘಾತ ಅನುಭವಿಸಿದ್ದು 25ರನ್ ಸೇರಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿದೆ. ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡ ಭಾರತ ಭೋಜನ ವಿರಾಮದ ವೇಳೆಗೆ 50/2 ಸ್ಕೋರ್ ಮಾಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಮೂರು ಟೆಸ್ಟ್‌ಗಳ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡ ತಲಾ 1 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ 1-1 ಸಮಬಲ ಸಾಧಿಸಿದೆ. ಈ ಟೆಸ್ಟ್ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಶ್ರೀಲಂಕಾ ನೆಲದಲ್ಲಿ 22 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಸರಣಿ ಗೆಲುವಿನ ಕನಸು ಕಾಣುತ್ತಿದೆ. [ಸಂಗಕ್ಕಾರ ಕೊನೆ ಟೆಸ್ಟ್ ನಲ್ಲಿ ಕೊಹ್ಲಿಗೆ ಮೊದಲ ಗೆಲುವು]

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಮನ್ ಓಜಾ ಮೊದಲ ಟೆಸ್ಟ್ ಪಂದ್ಯವಾಡುವ ಅವಕಾಶ ಪಡೆದುಕೊಂಡಿದ್ದಾರೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವೃದ್ಧಿಮಾನ್ ಸಹಾ ಬದಲಿಗೆ ಆಡುವ XI ಸೇರಿರುವ ನಮನ್ ಅವರು 285ನೇ ಟೆಸ್ಟ್ ಆಟಗಾರರಾಗಿ ತಂಡ ಸೇರಿದ್ದಾರೆ. ಮುರಳಿ ವಿಜಯ್ ಸ್ಥಾನಕ್ಕೆ ಚೇತೇಶ್ವರ್ ಪೂಜಾರಾ ಬಂದಿದ್ದಾರೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸ್ಟುವರ್ಟ್ ಬಿನ್ನಿ, ನಮನ್ ಓಜಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಇಶಾಂತ್ ಶರ್ಮ, ಉಮೇಶ್ ಯಾದವ್ , ಅಮಿತ್ ಮಿಶ್ರಾ.
ಶ್ರೀಲಂಕಾ: ಏಂಜೆಲೋ ಮ್ಯಾಥ್ಯೂಸ್ (ನಾಯಕ), ದಿಮುತ್ ಕರುಣಾರತ್ನೆ, ಕೌಶಲ್ ಸಿಲ್ವಾ, ಉಪುಲ್ ತರಂಗಾ, ಲಹಿರು ತಿರುಮನ್ನೆ, ದಿನೇಶ್ ಚಾಂಡಿಮಾಲ್, ಕುಶಾಲ್ ಪೆರೆರಾ (ವಿಕೆಟ್ ಕೀಪರ್), ದಮ್ಮಿಕಾ ಪ್ರಸಾದ್, ನುವಾನ್ ಪ್ರದೀಪ್, ತಾರೀಂದು ಕೌಶಲ್, ರಂಗಣಾ ಹೇರಾತ್. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications