3ನೇ ಟೆಸ್ಟ್ : ಕೊಹ್ಲಿ ದ್ವಿಶತಕ, ಭಾರತ 536/7 ಡಿಕ್ಲೇರ್

Posted By:

ನವದೆಹಲಿ, ಡಿಸೆಂಬರ್ 03: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ತನ್ನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರದಂದು ಭಾರತ 536/7 ಸ್ಕೋರ್ ಮಾಡಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ನಾಯಕ ಕೊಹ್ಲಿ ಅವರು ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಸ್ಕೋರ್ ಕಾರ್ಡ್

ವಿರಾಟ್ ಕೊಹ್ಲಿ ಹಾಗೂ ಮುರಳಿ ವಿಜಯ್ ಶತಕಗಳ ನೆರವಿನಿಂದ ಮೊದಲ ದಿನದ ಅಂತ್ಯಕ್ಕೆ ಭಾರತ 371/4 ಸ್ಕೋರ್ ಮಾಡಿತ್ತು. 155ರನ್ ಗಳಿಸಿ ಮುರಳಿ ಅವರು ಸಂದಕನ್ ಗೆ ವಿಕೆಟ್ ಒಪ್ಪಿಸಿದರು.

ನಾಯಕನಾಗಿ ಹೆಚ್ಚು ದ್ವಿಶತಕ: ಲಾರಾ ದಾಖಲೆ ಮುರಿದ ಕೊಹ್ಲಿ

ಅಜಿಂಕ್ಯ ರಹಾನೆ ಕೇವಲ 1 ರನ್ ಗಳಿಸಿ ಔಟಾದ ಬಳಿಕ ರೋಹಿತ್ ಶರ್ಮ ಅವರು ಕೊಹ್ಲಿ ಜತೆ ವಿಕೆಟ್ ಕಾಯ್ದುಕೊಂಡರು. ರೋಹಿತ್ ಅವರು 65ರನ್ ಗಳಿಸಿ ಸಂದಕನ್ ಗೆ ವಿಕೆಟ್ ನೀಡಿದರು.

3rd Test Second day Match report, Virat Kohli carries on

287 ಎಸೆತಗಳಲ್ಲಿ 25 ಬೌಂಡರಿಗಳಿದ್ದ 243 ರನ್ ಸಿಡಿಸಿದ ವಿರಾಟ್ ಕೊಹ್ಲಿ ಅವರು ಸಂದಕನ್ ಅವರ ಎಲ್ ಬಿ ಬಲೆಗೆ ಬಿದ್ದರು. ಟೀಂ ಇಂಡಿಯಾದ ಸ್ಕೋರ್ 127.5 ಓವರ್ ಗಳಲ್ಲಿ 536/7 ಆಗಿದ್ದಾಗ ಡಿಕ್ಲೇರ್ ಮಾಡಿಕೊಳ್ಳಲಾಗಲಿದೆ. ಇತ್ತೀಚಿನ ವರದಿಗಳು ಬಂದಾಗ ಶ್ರೀಲಂಕಾ 18/2 ಸ್ಕೋರ್ ಮಾಡಿದೆ.

Story first published: Sunday, December 3, 2017, 10:37 [IST]
Other articles published on Dec 3, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ