ನಾಯಕನಾಗಿ ಹೆಚ್ಚು ದ್ವಿಶತಕ: ಲಾರಾ ದಾಖಲೆ ಮುರಿದ ಕೊಹ್ಲಿ

Posted By:

ನವದೆಹಲಿ, ಡಿಸೆಂಬರ್ 03: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಶತಕ, ದ್ವಿಶತಕ ಗಳನ್ನು ಸಿಡಿಸುತ್ತಿದ್ದಂತೆ ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ ಶುರುವಾಗುತ್ತದೆ. ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಕೊಹ್ಲಿ ಮುನ್ನುಗ್ಗುತ್ತಿದ್ದಾರೆ. ನಾಯಕನಾಗಿ ಅತಿ ಹೆಚ್ಚು ದ್ವಿಶತಕ ಸಿಡಿಸಿದ ದಾಖಲೆಯನ್ನು ಕೊಹ್ಲಿ ಅವರು ಮುರಿದಿದ್ದಾರೆ.

ಸ್ಕೋರ್ ಕಾರ್ಡ್

ಅಂತಿಮವಾಗಿ 213ರನ್ ಗಳಿಸಿದ್ದ ಕೊಹ್ಲಿ ಅವರು ನಾಯಕನಾಗಿ ಬ್ರಿಯಾನ್‌ ಲಾರಾ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಸಮಕ್ಕೆ ಕೊಹ್ಲಿ ನಿಂತಿದ್ದರು.

ಗವಾಸ್ಕರ್ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾನುವಾರ(ಡಿಸೆಂಬರ್ 03) ದಂದು ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡದ ನಾಯಕರಾಗಿ ಬ್ರಿಯಾನ್ ಲಾರಾ ಅವರು ಐದು ಬಾರಿ ಇನ್ನೂರಕ್ಕೂ ಅಧಿಕ ರನ್‌ಗಳನ್ನು ಹೊಡೆದಿದ್ದರು. ಈಗ ಕೊಹ್ಲಿ ಭಾರತದ ನಾಯಕರಾದ ಬಳಿಕ ಆರು ಬಾರಿ 200ರನ್ ಗಡಿ ದಾಟಿದ್ದಾರೆ.

3ನೇ ಟೆಸ್ಟ್ : ಕೊಹ್ಲಿ ದ್ವಿಶತಕ, ಭಾರತ 536/7 ಡಿಕ್ಲೇರ್

ಈ ಹಿಂದೆ ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ದ್ವಿಶತಕ ಬಾರಿಸಿದ್ದಾರೆ. ಇದಲ್ಲದೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 11 ಶತಕ ಗಳಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.

ನಾಯಕರಾಗಿ 6 ಬಾರಿ 200ರನ್ ಗಡಿ ದಾಟಿದ್ದಾರೆ

ನಾಯಕರಾಗಿ 6 ಬಾರಿ 200ರನ್ ಗಡಿ ದಾಟಿದ್ದಾರೆ

ನಾಗ್ಪುರ ಟೆಸ್ಟ್ ಪಂದ್ಯದಲ್ಲಿ 213ರನ್ ಗಳಿಸಿದ್ದ ಕೊಹ್ಲಿ ಅವರು ನಾಯಕನಾಗಿ ಬ್ರಿಯಾನ್‌ ಲಾರಾ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಸಮಕ್ಕೆ ಕೊಹ್ಲಿ ನಿಂತಿದ್ದರು. ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾನುವಾರ (ಡಿಸೆಂಬರ್ 03) ದಂದು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ದ್ವಿಶತಕ ಬಾರಿಸಿ ಲಾರಾ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ನಾಯಕರಾಗಿ 6 ಬಾರಿ 200ರನ್ ಗಡಿ ದಾಟಿದ್ದಾರೆ.

ನಾಯಕರಾಗಿ 3000ರನ್

ಟೀಂ ಇಂಡಿಯಾ ನಾಯಕರಾಗಿ 3000ರನ್ ಗಳನ್ನು ವಿರಾಟ್ ಕೊಹ್ಲಿ ಪೂರೈಸಿದ್ದಾರೆ. ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮುಂಚೆ ಸುನಿಲ್ ಗವಾಸ್ಕರ್ 3449ರನ್ ಹಾಗೂ ಎಂಎಸ್ ಧೋನಿ (3454) ಅವರು ಈ ಸಾಧನೆ ಮಾಡಿದ್ದರು.

3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ದಾಖಲೆ

* 3 ಟೆಸ್ಟ್ ಪಂದ್ಯಗಳ ಸರಣಿಯ ಮೂರು ಪಂದ್ಯಗಳಲ್ಲೂ ಶತಕ ಬಾರಿಸಿದ ಮೊದಲ ನಾಯಕ ಎಂಬ ದಾಖಲೆಯನ್ನು ಕೂಡಾ ವಿರಾಟ್ ಕೊಹ್ಲಿ ಅವರು ಸಾಧಿಸಿದ್ದಾರೆ.
* ಮೂರು ಬೇರೆ ಬೇರೆ ಟೆಸ್ಟ್ ಸರಣಿಗಳಲ್ಲಿ 500ರನ್ ಗಳಿಗೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
* ಇದಲ್ಲದೆ, ನಾಯಕನಾಗಿ 11ಶತಕ ಗಳಿಸಿ ದಾಖಲೆ ಬರೆದಿದ್ದಾರೆ. ಜತೆಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕ ಹಾಗೂ ರನ್ ಗಳಿಸಿದ್ದ ಸಾಧನೆ ಮಾಡಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಅತಿ ಹೆಚ್ಚು ದ್ವಿಶತಕ ಗಳಿಸಿದವರ ಪಟ್ಟಿ

ಅತಿ ಹೆಚ್ಚು ದ್ವಿಶತಕ ಗಳಿಸಿದವರ ಪಟ್ಟಿ

ಅತಿ ಹೆಚ್ಚು ದ್ವಿಶತಕ ಗಳಿಸಿದವರ ಪಟ್ಟಿ
12 : ಡಾನ್ ಬ್ರಾಡ್ಮನ್ (52 ಪಂದ್ಯಗಳು)
11 : ಕುಮಾರ್ ಸಂಗಕ್ಕಾರ (134)
9 : ಬ್ರಿಯಾನ್ ಲಾರಾ (131)
7 : ಹಮ್ಮಂಡ್(85), ಮಹೇಲ ಜಯವರ್ದನೆ(141)
6- ವಿರಾಟ್ ಕೊಹ್ಲಿ(63*), ಸಚಿನ್ ತೆಂಡೂಲ್ಕರ್(200), ರಿಕಿ ಪಾಂಟಿಂಗ್(168), ಯೂನಿಸ್ ಖಾನ್(118), ಜಾವೇದ್ ಮಿಯಾಂದಾದ್(124), ವೀರೇಂದ್ರ ಸೆಹ್ವಾಗ್(104), ಮಾರ್ವನ್ ಅಟಪಟ್ಟು (90)

Story first published: Sunday, December 3, 2017, 11:30 [IST]
Other articles published on Dec 3, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ