ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮ

ರಾಂಚಿ, ಅಕ್ಟೋಬರ್ 20: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ತಮ್ಮ ಟೆಸ್ಟ್ ವೃತ್ತಿ ಬದುಕಿನ ಮೊದಲ ದ್ವಿಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಾವಳಿಯ ಎರಡನೇ ದಿನದಂದು ರೋಹಿತ್ ಈ ಸಾಧನೆ ಮಾಡಿದ್ದಾರೆ.
ಎರಡನೇ ದಿನದ ಭೋಜನವಿರಾಮದ ಬಳಿಕ 13ನೇ ಎಸೆತದಲ್ಲಿ ರೋಹಿತ್ ಶರ್ಮ 200ರನ್ ಗಡಿ ದಾಟಿದರು. ಭೋಜನ ವಿರಾಮದ ವೇಳೆಗೆ 375/4 ಸ್ಕೋರ್ ಮಾಡಿದ್ದ ಟೀಂ ಇಂಡಿಯಾಕ್ಕೆ ರೋಹಿತ್ ಹಾಗೂ ಅಜಿಂಕ್ಯ ರಹಾನೆ ಶತಕ ಆಸರೆಯಾಗಿದೆ.
3ನೇ ಟೆಸ್ಟ್ Live: ರೋಹಿತ್, ರಹಾನೆ ಆಟಕ್ಕೆ ದಕ್ಷಿಣ ಆಫ್ರಿಕಾ ತತ್ತರ
ದ್ವಿಶತಕ ಸಿಡಿಸಿದ ಬೆನ್ನಲ್ಲೇ ರೋಹಿತ್ ಶರ್ಮ ಅವರು ರಬಾಡಾ ಬೌಲಿಂಗ್ ನಲ್ಲಿ ಲುಂಗಿ ನಿಗಿಡಿಗೆ ಕ್ಯಾಚಿತ್ತು ಔಟಾದರು. 255 ಎಸೆತಗಳಲ್ಲಿ 212ರನ್(28 ಬೌಂಡರಿ, 6 ಸಿಕ್ಸರ್) ಗಳಿಸಿದರು.
ದಿನದ ಆರಂಭದಲ್ಲಿ 224/3 ಸ್ಕೋರಿನಿಂದ ಆರಂಭಿಸಿದ ರಹಾನೆ-ರೋಹಿತ್ ಪಡೆ ಉತ್ತಮ ಗತಿಯಲ್ಲಿ ರನ್ ಗಳಿಸಿತು. 192 ಎಸೆತಗಳಲ್ಲಿ 115ರನ್ ಗಳಿಸಿ ರಹಾನೆ ಅವರು ಜಾರ್ಜ್ ಲಿಂಡೆ ವಿಕೆಟ್ ಒಪ್ಪಿಸಿದರು. ರಹಾನೆ 11ನೇ ಟೆಸ್ಟ್ ಶತಕ ಗಳಿಸಿ ಕ್ಲಾಸೆನ್ ಗೆ ಕ್ಯಾಚಿತ್ತರು. ಲಿಂಡೆಗೆ ಇದು ಮೊದಲ ಟೆಸ್ಟ್ ವಿಕೆಟ್ ಆಗಿದೆ.
ಇದಕ್ಕೂ ಮುನ್ನ ಮೊದಲ ದಿನದ ಆಟದಲ್ಲಿ ಮಯಾಂಕ್ ಅಗರವಾಲ್ 10, ಚೇತೇಶ್ವರ್ ಪೂಜಾರಾ 0 ಹಾಗೂ ನಾಯಕ ವಿರಾಟ್ ಕೊಹ್ಲಿ 12ರನ್ ಗಳಿಸಿ ಔಟಾದರು.
ವಿಶಾಖಪಟ್ಟಣಂ ಹಾಗೂ ಪುಣೆಯಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications