
ಬೌಲಿಂಗ್ ವಿಭಾಗದ ಸಂಘಟಿತ ದಾಳಿ;
ಟೀಮ್ ಇಂಡಿಯಾ ಬೌಲರ್‌ಗಳು ಇಂದೋರ್ ಪಂದ್ಯದಲ್ಲಿ ಸಂಘಟಿತ ದಾಳಿಯನ್ನು ಪ್ರದರ್ಶಿಸಿದ್ದಾರೆ. ಆರಂಭಕ ಆಟಗಾರರು ಮೊದಲಿಗೆ ಭರ್ಜರಿ ರನ್ ಬಾರಿಸಿ ದೊಡ್ಡ ಮೊತ್ತದ ಸುಳಿವು ನೀಡಿದರು. ಆದರೆ ಟಿಮ್ ಇಂಡಿಯಾ ಬೌಲರ್‌ಗಳು ಶ್ರೀಲಂಕಾ ಆರಂಭಿಕರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಅವಕಾಶ ಮಾಡಿಕೊಡಲಿಲ್ಲ. ವಾಶಿಂಗ್ಟನ್ ಸುಂದರ್ ಮೊದಲ ಯಶಸ್ಸು ಒದಗಿಸಿದರು. ನವ್‌ದೀಪ್ ಸೈನಿ(2/18), ಶಾರ್ದೂಲ್ ಟಾಕೂರ್(3/23), ಜಸ್ಪ್ರೀತ್ ಬುಮ್ರಾ(1/32), ಕುಲ್ದೀಪ್ ಯಾದವ್ (2/38) ಲಂಕಾ ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿದರು

ಟಾಪ್ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್:
142 ರನ್‌ಗೆ ಶ್ರೀಲಂಕಾ ತಂಡವನ್ನು ಕಟ್ಟಿ ಹಾಕಿದ ನಂತರ ಕೆಎಲ್ ರಾಹುಲ್ ಮತ್ಉ ಶಿಖರ್ ಧವನ್ ಜೋಡಿ ಆರಂಭಕರಾಗಿ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿತು. ಮೊದಲ ವಿಕೆಟ್‌ಗೆ 71 ರನ್ ಪೇರಿಸಿದರು. ಅಲ್ಲಗೆ ಭಾರತ ತನ್ನ ಅರ್ಧ ದಾರಿಯನ್ನು ಕ್ರಮಿಸಿಯಾಗಿತ್ತು. ಬಳಿಕ ಬಂದ ಶ್ರೇಯಸ್ ಅಯ್ಯರ್(26 ಎಸೆತಗಳಲ್ಲಿ 34 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿ(17 ಎಸೆತಗಳಲ್ಲಿ 30 ರನ್*) ಬಾರಿಸಿ ಗೆಲುವನ್ನು ಖಚಿತಪಡಿಸಿದರು.
ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ವಿಕೆಟ್ ಕೀಳುವಲ್ಲಿ ವಿಫಲರಾದ ಶ್ರೀಲಂಕಾ
ಶ್ರೀಲಂಕಾ ತಂಡ ನೀಡಿದ ಗುರಿಯನ್ನು ಬೆನ್ನತ್ತಿ ಹೊರಟ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಶ್ರೀಲಂಕಾ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಆರಂಭದಲ್ಲಿ ವಿಕೆಟ್ ಕಿತ್ತು ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹಾಕುವ ಪ್ರಯತ್ನ ಸಂಪೂರ್ಣವಾಗಿ ವಿಫಲವಾಯಿತು. ಸ್ವತಃ ಶ್ರೀಲಂಕಾ ನಾಯಕ ಸಲಿತ್ ಮಲಿಂಗಾ ಒಂದೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದರೆ ಬರೊಬ್ಬರಿ 41 ರನ್ ನೀಡಿದರು.

ಎಲ್ಲಾ ವಿಭಾಗದಲ್ಲೂ ಟೀಮ್ ಇಂಡಿಯಾ ಸಂಘಟಿತ ಹೋರಾಟ:
ಒಟ್ಟಾರೆಯಾಗಿ ಟೀಮ್ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ತನ್ನ ಸಂಘಟಿತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್‌ಗೆ ಪೂರಕವಾದ ಪಿಚ್‌ನಲ್ಲಿ ಶ್ರೀಲಂಕಾವನ್ನು 25-30ರನ್‌ಗಳಷ್ಟು ಕಡಿಮೆ ರನ್ ಗಳಿಗೆ ಕಟ್ಟಿ ಹಾಕಿದ್ದು ತಂಡಕ್ಕೆ ಸಹಕಾರಿಯಾಯಿತು. ಫೀಲ್ಡಿಂಗ್ ವಿಬಾಗದಲ್ಲೂ ಸುಧಾರಣೆ ಕಂಡಿತು. ಬ್ಯಾಟಿಂಗ್ ವಿಭಾಗವಂತು ಶ್ರೀಲಂಕಾ ತಂಡ ನೀಡಿದ ಗುರಿಯನ್ನು ಸುಲಭವಾಗಿ ಗುರಿ ತಲುಪಿಸಿತು.


Click it and Unblock the Notifications