ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್ : ಇಂಡಿಯಾ ಬೌಲರ್ ಗಳು ಟುಸ್, ಆಸೀಸ್ ಗೆ 348ರನ್ ಲೀಡ್

By Mahesh

ಸಿಡ್ನಿ, ಜ.9: ಆಸ್ಟ್ರೇಲಿಯಾ ವಿರುದ್ಧ ಮೂರನೇ ದಿನ ಕನ್ನಡಿಗ ಕೆಎಲ್ ರಾಹುಲ್ ಚೊಚ್ಚಲ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿಶತಕದ ನೆರವಿನಿಂದ ಭರ್ಜರಿ ಹೋರಾಟ ತೋರಿತ್ತು. ಅದರೆ, ನಾಲ್ಕನೇ ದಿನದ ಆರಂಭದಲ್ಲೇ ವಿರಾಟ್ ಕೊಹ್ಲಿ(147) ವಿಕೆಟ್ ಕಳೆದುಕೊಂಡಿದ್ದಲ್ಲದೆ 475 ಸ್ಕೋರಿಗೆ ಆಲೌಟ್ ಆಗಿ, 97 ರನ್ ಲೀಡ್ ಬಿಟ್ಟುಕೊಟ್ಟಿತ್ತು. ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 251/6 ಸ್ಕೋರ್ ಮಾಡಿ 348ರನ್ ಗಳ ಮುನ್ನಡೆ ಪಡೆದುಕೊಂಡಿದೆ.

ಮೂರನೇ ದಿನದ ವರದಿ ಓದಿಮೂರನೇ ದಿನದ ವರದಿ ಓದಿ

ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ : ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲೇ ಆಘಾತ ಅನುಭವಿಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅಶ್ವಿನ್ ನಂತರ ವಾಟ್ಸನ್ ವಿಕೆಟ್ ಕೂಡಾ ಕಿತ್ತರು.

Steve Smith

ಸ್ಟೀವ್ ಸ್ಮಿತ್ 71 ರನ್ ಗಳಿಸಿ ಔಟಾದರೆ, ಜೇಮ್ಸ್ ಬರ್ನ್ಸ್ 33, ಬ್ರಾಡ್ ಹಡ್ಡೀನ್ 12 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಭಾರತದ ಪರ ಆರ್ ಅಶ್ವಿನ್ 3 ವಿಕೆಟ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
R Ashwin

162 ಓವರ್ ಗಳಲ್ಲಿ 475ರನ್ ಮಾಡಿದ ಟೀಂ ಇಂಡಿಯಾಕ್ಕೆ ಕೊನೆ ಗಳಿಗೆಯಲ್ಲಿ ಅರ್ಧ ಶತಕ ಸಿಡಿಸಿದ ಆರ್ ಆಶ್ವಿನ್ ಆಸರೆಯಾದರು. ವೃದ್ಧಿಮನ್ ಸಹಾ 35 ಹಾಗೂ ಭುವನೇಶ್ವರ್ ಕುಮಾರ್ 30 ರನ್ ಗಳಿಸಿದರೆ, ಮಹಮ್ಮದ್ ಶಮಿ 16 ರಮ್ ಗಳಿಸಿ ಔಟಾಗದೆ ಉಳಿದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 3, ಹ್ಯಾರೀಸ್, ನಾಥನ್ ಲಿಯಾನ್, ವ್ಯಾಟ್ಸನ್ ತಲಾ 2 ವಿಕೆಟ್ ಪಡೆದರೆ ಹಜೇಲ್ ವುಡ್ 1 ವಿಕೆಟ್ ಕಿತ್ತರು. [ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ]

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X