For Quick Alerts
ALLOW NOTIFICATIONS  
For Daily Alerts
 

ಗೇಲ್ ಸಿಕ್ಸರ್ ಗಳ ಸುರಿಮಳೆ ನಡುವೆ ಇಂಗ್ಲೆಂಡಿಗೆ ರೋಚಕ ಜಯ

4th ODI: Buttler and Morgan pummel Windies in record-breaking England innings

ಗ್ರೆನಡಾ, ಫೆಬ್ರವರಿ 28: ಇಲ್ಲಿನ ಸೇಂಟ್ ಜಾರ್ಜ್ ಮೈದಾನದಲ್ಲಿ ಫೋರ್, ಸಿಕ್ಸರ್ ಗಳ ಸುರಿಮಳೆ ನಡುವೆ ಇಂಗ್ಲೆಂಡ್​ತಂಡ 29 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್​ವಿಶ್ವದಾಖಲೆ ಸ್ಥಾಪನೆಯಾಗಿದೆ. ಒಟ್ಟಾರೆ, ಇಂಗ್ಲೆಂಡ್ 24 ಸಿಕ್ಸರ್ ಸಿಡಿಸಿತು.

ಟಾಸ್​ಸೋತರೂ ಮೊದಲು ಬ್ಯಾಟಿಂಗ್​ಅವಕಾಶ ಪಡೆದ ಇಂಗ್ಲೆಂಡ್​ತಂಡದ ಆಟಗಾರರು ಅರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು, ಜಾನಿ ಬೈರ್ಸ್ಟೋ(56), ಅಲೆಕ್ಸ್ ಹೇಲ್ಸ್ (82) ಉತ್ತಮ ಅಡಿಪಾಯ ಹಾಕಿದರು. ಒಟ್ಟಾರೆ 24 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನ ಇನ್ನಿಂಗ್ಸ್​ವೊಂದರಲ್ಲಿ ಅತಿಹೆಚ್ಚು ಸಿಕ್ಸ್​ಸಿಡಿಸಿದ ತಂಡ ಎಂಬ ದಾಖಲೆ ನಿರ್ಮಿಸಿತು.

ಪಂದ್ಯದ ಸ್ಕೋರ್ ಕಾರ್ಡ್, ಗೇಲ್ ಸಿಕ್ಸರ್ ಗ್ರಾಫಿಕ್ಸ್

ಜೋಸ್ ಬಟ್ಲರ್ 12 ಸಿಕ್ಸ್, ಇಯಾನ್ ಮಾರ್ಗನ್ 6, ಜಾನಿ ಬೈರ್ಸ್ಟೊ 4, ಅಲೆಕ್ಸ್ ಹೇಲ್ಸ್ 2 ಸಿಕ್ಸ್​ ಸಿಡಿಸಿದರು. ಬಟ್ಲರ್ 13 ಬೌಂಡರಿಯುಳ್ಳ 77 ಎಸೆತಗಳಲ್ಲಿ 150ರನ್ ಸಿಡಿಸಿದರು. ಮಾರ್ಗನ್ 103 ಗಳಿಸಿದರೆ, ನಾಲ್ಕನೇ ವಿಕೆಟ್ ಗೆ 20.2 ಓವರ್ ಗಳಲ್ಲಿ 204ರನ್ ಗಳ ಜೊತೆಯಾಟ ಸಾಧಿಸಿದರು.

ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ ಆಟಗಾರರು 23 ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇಂಗ್ಲೆಂಡ್ ಅಳಿಸಿ ಹಾಕಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ 418/6 ಸ್ಕೋರ್ ಮಾಡಿದರೆ, ವೆಸ್ಟ್ ಇಂಡೀಸ್ 389 ಸ್ಕೋರಿಗೆ ಆಲೌಟ್ ಆಯಿತು.

ಕ್ರಿಸ್ ಗೆಲ್ 97 ಎಸೆತಗಳಲ್ಲಿ 162ರನ್ ಸಿಡಿಸಿದರು. 11 ಬೌಂಡರಿ ಹಾಗೂ ದಾಖಲೆಯ 14ಸಿಕ್ಸರ್ ಬಾರಿಸಿದರು. ಡರನೇ ಬ್ರಾವೋ 61ರನ್, ಕಾರ್ಲೊಸ್ ಬ್ರಥ್ ವೈಟ್ 50 ಹಾಗೂ ಆಶ್ಲೆ ನರ್ಸ್ 43ರನ್ ಗಳಿಸಿ ರನ್ ಚೇಸಿಂಗ್ ಮಾಡಲು ಯತ್ನಿಸಿದರು. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1ರಲ್ಲಿ ಮುಂದಿದೆ.

Story first published: Thursday, February 28, 2019, 21:53 [IST]
Other articles published on Feb 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+