ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಟೀಂ ಇಂಡಿಯಾ
ಬೆಂಗಳೂರು, ಆಗಸ್ಟ್ 22 : ಭಾರತ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಳದುಕೊಳ್ಳುವ ಸಾಧ್ಯತೆಗಳಿವೆ.
ಇತ್ತೀಚೆಗಷ್ಟೇ ಶ್ರೀಲಂಕಾ ಕೃಪೆಯಿಂದ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನ ಅಲಂಕರಿಸಿತ್ತು. ಭಾರತ ನಂ 1 ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿತ್ತು. [ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಟೀಂ ಇಂಡಿಯಾ ನಂ.1]

ಆದರೆ, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಪಂದ್ಯದ 3ನೇ ದಿನಕ್ಕೆ ಮಳೆ ಅಡ್ಡಿಪಡಿಸಿದ್ದು ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ಭಾರತಕ್ಕೆ ನಂ 1 ಪಟ್ಟ ಕೈತಪ್ಪಲಿದೆ. ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಲಿದೆ.[ಅಶ್ವಿನ್ ನಂ.1 ಆಲ್ ರೌಂಡರ್]
ಇನ್ನು ಭಾರತ 111 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕಿಳಿಯಲಿದೆ. ಮೊದಲು ಅಗ್ರಸ್ಥಾನದಲ್ಲಿದ್ದ ಆಸ್ಟೇಲಿಯಾ ತಂಡವನ್ನು ಶ್ರೀಲಂಕಾ 3-0 ಅಂತರದಲ್ಲಿ ಸೋಲಿಸಿತ್ತು. ಇದರಿಂದ ಭಾರತ ಶ್ರೀಲಂಕಾ ಕೃಪೆಯಿಂದ ಅಗ್ರಸ್ಥಾನಕ್ಕೇರಿತ್ತು.

ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿ.
1. ಭಾರತ (112 ಅಂಕಗಳು)
2. ಪಾಕಿಸ್ತಾನ (111)
3. ಆಸ್ಟ್ರೇಲಿಯಾ (108) (-10)
4. ಇಂಗ್ಲೆಂಡ್ (108)
5. ನ್ಯೂಜಿಲೆಂಡ್ (99)
6. ಶ್ರೀಲಂಕಾ (95) (+10)
7. ದಕ್ಷಿಣ ಆಫ್ರಿಕಾ (92)
8. ವೆಸ್ಟ್ ಇಂಡೀಸ್ (65)
9. ಬಾಂಗ್ಲಾದೇಶ (57)
10. ಜಿಂಬಾಬ್ವೆ (8)
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications