For Quick Alerts
ALLOW NOTIFICATIONS  
For Daily Alerts
 

ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ODI ರನ್: ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ 5 ದಿಗ್ಗಜರು ಇವರೇ!!

ಏಕದಿನ ಕ್ರಿಕೆಟ್‌ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್‌ಗಳನ್ನು ಗಳಿಸುವುದು ಸುಲಭದ ಸಂಗತಿಯಲ್ಲ. ಯಾಕೆಂದರೆ 10-15 ಪಂದ್ಯಗಳನ್ನು ಮಾತ್ರವೇ ಆಟಗಾರರಿಗೆ ಆಡುವ ಅವಕಾಶ ದೊರೆಯುತ್ತದೆ. ಕೆಲ ಅಪರೂಪಕ್ಕೆನ್ನುವಂತೆ ಅಥವಾ ವಿಶ್ವಕಪ್ ವರ್ಷಗಳಲ್ಲಿ ಮಾತ್ರವೇ ಇದು 20-25ರ ವರೆಗೂ ತಲುಪಬಹುದು. ಹಾಗಿದ್ರೂ ಆಟಗಾರರ ಫಿಟ್‌ನೆಸ್, ಫಾರ್ಮ್ ಹಾಗೂ ಸ್ಥಿರ ಪ್ರದರ್ಶನ ಇಲ್ಲಿ ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ.

ಹಾಗಿದ್ದರೂ ಕೆಲ ಆಟಗಾರರು ಕ್ಯಾಲೆಂಡರ್ ವರ್ಷದಲ್ಲಿ ಸಾವಿರಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಆದರೆ ಕೆಲ ದಿಗ್ಗಜ ಕ್ರಿಕೆಟಿಗರು ಈ ಸಾಧನೆಯನ್ನು ಐದಕ್ಕೂ ಹೆಚ್ಚು ಬಾರಿ ಸಾಧಿಸಿ ತೋರಿಸಿದ್ದಾರೆ. ಈ ವರದಿಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಸಾವಿರಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ಐವರು ದಿಗ್ಗಜರು ಯಾರ್ಯಾರು ಎನ್ನುವುದನ್ನು ನೋಡೋಣ.. ಮುಂದೆ ಓದಿ..

5 batters list who scored more than 1000 ODI runs in single calendar year for maximum times

ಕುಮಾರ್ ಸಂಗಕ್ಕರ- 6 ಬಾರಿ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಆರು ಬಾರಿ ಒಂದು ಕ್ಯಾಲೆಂದರ್ ವರ್ಷದಲ್ಲಿ 1000ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. 2000ದ ದಶಕದ ಕೊನೆಯಲ್ಲಿ ಮತ್ತು 2010ರ ದಶಕದ ಆರಂಭದಲ್ಲಿ ಶ್ರೀಲಂಕಾದ ಈ ದಿಗ್ಗಜ ಆಟಗಾರ ತಮ್ಮ ವೃತ್ತಿ ಜೀವನದ ಅತ್ಯುನ್ನತ ಪ್ರದರ್ಶನ ನೀಡಿದ್ದರು. 2004, 2006, 2011, 2012, 2013, 2014 ಈ ಆರು ವರ್ಷಗಳಲ್ಲಿ ಕುಮಾರ್ ಸಂಗಕ್ಕರ ಸಾವಿರಕ್ಕೂ ಅಧಿಕ ಏಕದಿನ ರನ್‌ಗಳನ್ನು ಗಳಿಸಿದ್ದಾರೆ.

ಸೌರವ್ ಗಂಗೂಲಿ- 6 ಬಾರಿ

ಈ ದಾಖಲೆಯನ್ನು ಆರು ಬಾರಿ ಸಾಧಿಸಿದ ದಿಗ್ಗಜ ಕ್ರಿಕೆಟಿಗ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. 2003ರಲ್ಲಿ ಭಾರತವನ್ನು ವಿಶ್ವಕಪ್ ಫೈನಲ್‌ವರೆಗೆ ಮುನ್ನಡೆಸಿದ್ದ ಗಂಗೂಲಿ 6 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲು ಸಾವಿರಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. 1997, 1998, 1999, 2000 ಸತತ ನಾಲ್ಕು ವರ್ಷ ಈ ಸಾಧನೆ ಮಾಡಿದ್ದ ಗಂಗೂಲಿ ಬಳಿಕ 2002 ಮತ್ತು 2007ರಲ್ಲಿಯೂ ಈ ಸಾಧನೆ ಪುನರಾವರ್ತಿಸಿದ್ದರು.

ರಿಕಿ ಪಾಂಟಿಂಗ್- 6 ಬಾರಿ

ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ನಾನ್ ಏಷ್ಯನ್ ಕ್ರಿಕೆಟಿಗ ರಿಕಿ ಪಾಂಟಿಂಗ್. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಋಕದಿನ ಮಾದರಿಯಲ್ಲಿ ಈ ಸಾಧನೆಯನ್ನು ಆಸ್ಟ್ರೆಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಆರು ಬಾರಿ ಮಾಡಿದ್ದರು. 1998, 1999, 2003, 2005, 2007, 2009 ಈ ವರ್ಷಗಳಲ್ಲಿ ಪಾಂಟಿಂಗ್ ಈ ಸಾಧನೆ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್- 7 ಬಾರಿ

ಕ್ಯಾಲೆಂಡರ್ ವರ್ಷದಲ್ಲಿ 1000 ರನ್‌ಗಳ ಸಾಧನೆಯನ್ನು 7 ಬಾರಿ ಮಾಡಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಕ್ರಿಕೆಟ್‌ನ ದೇವರು ಎನಿಸಿಕೊಂಡಿರುವ ಸಚಿನ್ 1994, 1996, 1997, 1998, 2000, 2003 ಮತ್ತು 2007ರಲ್ಲಿ ಈ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ- 8 ಬಾರಿ

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಎಲ್ಲಾ ದಾಖಲೆಯನ್ನು ಮುರಿಯುವ ಹಂತದಲ್ಲಿರುವ ವಿರಾಟ್ ಕೊಹ್ಲಿ ಈ ದಾಖಲೆಯ ಪಟ್ಟಿಯಲ್ಲಿಯೂ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. 2023ನೇ ಕ್ಯಾಲೆಂಡರ್ ವರ್ಷದಲ್ಲಿ ಈ ಸಾಧನೆ ಮಾಡುವ ಮೂಲಕ ದಿಗ್ಗಜ ಕ್ರಿಕೆಟಿಗ ಈ ಸಾಧನೆಯನ್ನು ಬರೊಬ್ಬರಿ 8ನೇ ಬಾರಿಗೆ ಮಾಡಿದಂತಾಗಿದೆ. ಈ ಸಾಧನೆ ಮಾಡಿದ ಪ್ರಪ್ರಥಮ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ಪ್ರಸ್ತುತ ವಿಶ್ವಕಪ್‌ನಲ್ಲಿ ಅದ್ಭುತ ಲಯವನ್ನು ಪ್ರದರ್ಶಿಸುತ್ತಿರುವ ಕೊಹ್ಲಿ ಬ್ಯಾಟ್‌ನಿಂದ ಮತ್ತಷ್ಟು ರನ್‌ಗಳು ಹರಿದುಬರುವುದು ನಿಶ್ಚಿತ.

Story first published: Friday, November 3, 2023, 19:08 [IST]
Other articles published on Nov 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+