IPL 2022: CSK ತಂಡದಲ್ಲಿ ಈ 5 ಬದಲಾವಣೆ ಮಾಡಿದ್ರೆ ಗೆಲುವು ಖಚಿತ

ಇಂಡಿಯನ್ ಪ್ರೀಮಿಯರ್ ಲೀಗ್ 15 ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್್ನ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಮೂರು ಲೀಗ್ ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಅತಿವ ಮುಖಭಂಗವನ್ನುಂಟು ಮಾಡಿದೆ. ಹೊಸ ನಾಯಕ ರವೀಂದ್ರ ಜಡೇಜಾ ಅವರ ನೇತೃತ್ವದಲ್ಲಿ ತಂಡವು ಕಳಪೆ ಪ್ರದರ್ಶನದಿಂದ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಒತ್ತಡಕ್ಕೆ ಸಿಲುಕಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನಿರಾಶಾದಾಯಕವಾಗಿದೆ.
ಕೆಕೆಆರ್ ವಿರುದ್ದ ಆಡಿದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 5 ವಿಕೆಟ್ ಕಳೆದುಕೊಂಡು 131ರನ್್ಗಳಿಸಿತ್ತು. ಕೆಕೆಆರ್ ತಂಡ 18.3 ಓವರ್‌ಗಳಲ್ಲಿ 133ರನ್ ಗಳಿಸುವ ಮೂಲಕ ಸುಲಭವಾಗಿ ಜಯಶಾಲಿಯಾಗಿತ್ತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಎರಡನೇ ಪಂದ್ಯದಲ್ಲಿ 210 ಬೃಹತ್ ಮೊತ್ತ ಕಲೆಹಾಕಿದರು ಅದನ್ನು ಡಿಫೆಂಡ್ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಮ್ಯಾಚ್ ಕೈಚಲ್ಲಿತ್ತು. ಇನ್ನೂ ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಮೂರನೇ ಪಂದ್ಯಗಳಲ್ಲಿ, ಸಿಎಸ್‌ಕೆ ಮತ್ತೊಮ್ಮೆ ತಮ್ಮ ಎಂದಿನ ಉತ್ತಮ ಸ್ಥಿತಿಯಲ್ಲಿರಲಿಲ್ಲ. 180 ರನ್ ಬೆನ್ನಟ್ಟಿದ ಅವರು 126 ರನ್‌ಗಳಿಗೆ ಆಲೌಟ್ ಆಗಿ 54 ರನ್‌ಗಳ ಸೋಲು ಅನುಭವಿಸಿದರು. ಈಗ ನಾಲ್ಕನೇಯ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಗೆಲುವಿನ ಖಾತೆಯನ್ನು ತೆರೆಯಲು ನೋಡುತ್ತಿರುವಾಗ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆ ಆಗಬೇಕಿದೆ.

ಓಪನರ್ ರಾಯಡು, ಮೂರನೇ ಸ್ಥಾನಕ್ಕೆ ಉತ್ತಪ್ಪ
ಪಾಫ್ ಡುಪ್ಲೆಸಿಸ್‌ನಂತಹ ಆರಂಭಿಕ ಆಟಗಾರನನ್ನು ಕಳೆದುಕೊಂಡಿರುವ ಚೆನೈ ತಂಡ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಆರಂಭದಲ್ಲಿ ಅಂಬಾಟಿ ರಾಯಡು ಅವರನ್ನು ಕಳುಹಿಸಬೇಕಾಯಿತು. ಅನುಭವಿ ಬ್ಯಾಟರ್ ಅಂಬಟಿ ರಾಯುಡು ಕಳೆದ ನಾಲ್ಕು ಐಪಿಎಲ್ ಸೀಸನ್‌ಗಳಲ್ಲಿ ಸಿಎಸ್‌ಕೆ ಪರ ಸತತ ರನ್ ಸ್ಕೋರರ್ ಆಗಿದ್ದಾರೆ. ಆದಾಗ್ಯೂ, ಅವರು ಮೊದಲ ಮೂರು ಪಂದ್ಯಗಳಲ್ಲಿ 18.33 ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದರು. ಇಲ್ಲಿಯವರೆಗೆ, ಅವರು ಎರಡು ಪಂದ್ಯಗಳಲ್ಲಿ ನಂ.4 ಮತ್ತು ಇನ್ನೊಂದರಲ್ಲಿ ನಂ.5 ರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ರಾಯುಡು ಐಪಿಎಲ್ ಇತಿಹಾಸದಲ್ಲಿ 15 ಬಾರಿ ಓಪನರ್ ಆಗಿ ಕ್ರಿಸ್‌ಗೆ ಇಳಿದು, 30.79 ಸರಾಸರಿಯಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ ಒಟ್ಟು 431 ರನ್ ಗಳಿಸಿದ್ದಾರೆ. ಆದ್ದರಿಂದ ರುತುರಾಜ್ ಗಾಯಕ್ವಾಡ್ ಜೊತೆಗೆ ರಾಯುಡು ಅವರನ್ನು ಅಗ್ರಸ್ಥಾನಕ್ಕೆ ಕಳುಹಿಸುವುದು ಹಾಲಿ ಚಾಂಪಿಯನ್‌ಗಳಿಗೆ ಹೆಚ್ಚು ರನ್್ಗಳಿಸಬಹುದು.
ಮತ್ತೊಂದೆಡೆ ರಾಬಿನ್ ಉತ್ತಪ್ಪ ಕೂಡ ಇದುವರೆಗಿನ ಟೂರ್ನಿಯಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದು ಮೂರು ಇನ್ನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 91 ರನ್ ಗಳಿಸಿದ್ದಾರೆ. ರಾಯುಡು ಮತ್ತು ಗಾಯಕ್ವಾಡ್ ಓಪನಿಂಗ್ ಆಗಿ ಬಡ್ತಿ ಪಡೆದರೆ, ಉತ್ತಪ್ಪ ನಂ.3 ಉತ್ತಮ ಹಿಡಿತದಲ್ಲಿ ಬ್ಯಾಟಿಂಗ್ ಮಾಡಬಹುದು.

ಮೋಹಿನ್ ಅಲಿ 4 ಸ್ಥಾನದಲ್ಲಿ ಬ್ಯಾಟ್ ಮಾಡಲಿ
ಆಲ್‌ರೌಂಡರ್ ಮೊಯಿನ್ ಅಲಿ ಅವರು ತಂಡಕ್ಕೆ ಸೇರಿದಾಗಿನಿಂದ ಸಿಎಸ್‌ಕೆಯ ಅವಿಭಾಜ್ಯ ಅಂಗವಾಗಿದ್ದಾರೆ. ಮೆಗಾ ಹರಾಜಿನಲ್ಲಿ ಮೊದಲು ಉಳಿಸಿಕೊಂಡ ನಾಲ್ವರು ಆಟಗಾರರಲ್ಲಿ ಇವರು ಒಬ್ಬರು. ಎಲ್‌ಎಸ್‌ಜಿ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 35 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
ಆದಾಗ್ಯೂ, ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡಕ್ ಔಟ್ ಆದ್ರು. ಸಿಎಸ್‌ಕೆ ತನ್ನ ಕಾರ್ಯತಂತ್ರವನ್ನು ಪರಿಷ್ಕರಿಸಿ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಮೊಯಿನ್ ಅವರನ್ನು ಎರಡನೇ ಕ್ರಮಾಂಕದಲ್ಲಿ ಇರಿಸಬಹುದು. ನಾಲ್ಕನೆ ಸ್ಥಾನದಲ್ಲಿ ಬ್ಯಾಟ್ ಬೀಸಿರುವ ಮೋಹಿನ್ ಅಲಿ 8 ಪಂದ್ಯಗಳಲ್ಲಿ 249ಗಳಿಸಿದ್ದು ಚೆನೈ ತಂಡಕ್ಕೆ ಗೆಲುವಿಗೆ ಸಹಾಯಕವಾಗಬಹುದು.

ಫಿನಿಷರ್ ಹಂತದಲ್ಲಿರಲಿ ಜಡೇಜಾ
ಸಿಎಸ್‌ಕೆ ತಂಡದ ನಾಯಕ ಜಡೇಜಾ ಕಳೆದ 2 ಪಂದ್ಯಗಳಲ್ಲಿ 5ನೇ ಸ್ಥಾನದಲ್ಲಿ ಬ್ಯಾಟ್ ಮಾಡಿದ್ದರೂ ನಿರೀಕ್ಷಿತ ಮಟ್ಟದ ರನ್‌ಗಳು ಅವರಿಂದ ತಂಡಕ್ಕೆ ನೀಡಲು ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲಿ 28 ಎಸೆತಗಳಲ್ಲಿ 26 ಗಳಿಸಿದ್ದಾರೆ. ಜಡೇಜಾ ಅವರಿಗೆ ಯಾವುದೇ ನಿರ್ಬಂಧನೆಯಿಲ್ಲದೆ ಮುಕ್ತವಾಗಿ ಫಿನಿಷರ್ ಹಂತದಲ್ಲಿ ಆಟವಾಡಲು ಬಿಡಬೇಕು. ಅಂದರೇ 5ನೇ ಸ್ಥಾನದಲ್ಲಿ ಶಿವಂ ದುಬೆಗೆ ಅವಕಾಶ ನೀಡುವ ಮೂಲಕ ಮಧ್ಯಮ ಓವರ್‌ಗಳಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಅವಕಾಶ ನೀಡಬೇಕಾಗಿದೆ.

ಬ್ರಾವೋ ಬದಲಿಗೆ ಮಹೇಶ್ ತೀಕ್ಷಣ
ಪಂದ್ಯಾವಳಿಯ ಇತಿಹಾಸದಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿರುವ ಡ್ವೇನ್ ಬ್ರಾವೋ ಕೆಕೆಆರ್ ವಿರುದ್ಧದ ಮೊದಲ ಪಂದ್ಯದ ನಂತರ ಕೊಂಚ ಫಾರ್ಮ ಕಳೆದುಕೊಂಡಿದ್ದು, ಪವರ್ ಹಿಟ್‌ನೊಂದಿಗೆ ಪ್ರಭಾವ ಬೀರಲು ವಿಫಲವಾಗಿದ್ದಾರೆ. ಸಿಎಸ್‌ಕೆಗೆ ಗೆಲುವಿನ ಅವಶ್ಯಕತೆ ಇರುವುದರಿಂದ ಬ್ರಾವೋಗೆ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ನೀಡಬಹುದು ಮತ್ತು ಕಳೆದ ಆರು ತಿಂಗಳಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ಮಹೇಶ್ ತೀಕ್ಷಣ ಅವರನ್ನು ಪ್ರಯತ್ನಿಸಬಹುದು.

ಮುಖೇಶ್ ಬದಲಿಗೆ ರಾಜವರ್ಧನ್
ಮುಖೇಶ್ ಚೌಧರಿ ಎಲ್ಲಾ ಸ್ವರೂಪಗಳಲ್ಲಿ ದೇಶೀಯ ಸರ್ಕ್ಯೂಟ್‌ನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದರೂ, ಈ ಆವೃತ್ತಿಯಲ್ಲಿ ಇದುವರೆಗೆ ಅವರು ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ ಎರಡು ಲೀಗ್ ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು ಮತ್ತು 91 ರನ್್ಗಳನ್ನು ನೀಡಿದರು.
ಮುಖೇಶ್ ಬದಲಿಗೆ ಚೆನ್ನೈ ಯುವ ಆಟಗಾರ ರಾಜವರ್ಧನ್‌ಗೆ ಅವಕಾಶ ನೀಡಬಹುದು. ಕಳೆದ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿರುವ ರಾಜವರ್ಧನ್ ಬೌಲಿಂಗ್ ಅಷ್ಟೇ ಅಲ್ಲದೇ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ದೀಪಕ್ ಚಾಹರ್ ಮತ್ತು ಆಡಮ್ ಮಿಲ್ನೆ ಅವರು ಎಸ್‌ಆರ್‌ಹೆಚ್ ವಿರುದ್ಧದ ಮುಂದಿನ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಸಾಧ್ಯತೆ ಕಡಿಮೆಯಿದ್ದು, ರಾಜ್‌ವರ್ಧನ್ ಸೂಕ್ತ ಆಯ್ಕೆಯಾಗಿದ್ದಾರೆ.
ಚೆನ್ನೈ ತಂಡದಲ್ಲಿ ಈ ಐದು ಬದಲಾವಣೆ ಮಾಡಿದ್ದಲ್ಲಿ ಸೋಲಿನ ಸುಳಿಯಿಂದ ಹೊರಬಂದು ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications