ದಿನೇಶ್ ಕಾರ್ತಿಕ್ ಸೇರಿದಂತೆ ಎರಡು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ಭಾರತೀಯ ಕ್ರಿಕೆಟಿಗರು
ಮದುವೆಯನ್ನು ಭಾರತದಲ್ಲಿ ಯಾವಾಗಲೂ ಪವಿತ್ರ ಬಂಧನ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಗಂಡು ಮತ್ತು ಹೆಣ್ಣು ಪರಸ್ಪರ ಬಲವಾದ ಬದ್ಧತೆಯೊಂದಿಗೆ ವಿವಾಹದ ಮೂಲಕ ದಂಪತಿಯಾಗಲು ನಿರ್ಧರಿಸುವ ಸಮಯ.
ಆದರೆ, ಕೆಲವೊಮ್ಮೆ ವಿಷಯಗಳು ಅವರು ಬಯಸಿದಂತೆ ಮುಂದುವರೆಯುವುದಿಲ್ಲ. ವಿವಾಹ ಸಂಬಂಧಗಳು ಬೇರ್ಪಡುವಿಕೆ ಅಥವಾ ವಿಚ್ಛೇದನಕ್ಕೆ ಕಾರಣವಾಗುವ ಹಲವು ಸಮಸ್ಯೆಗಳನ್ನು ಎದುರಿಸುತ್ತವೆ.
ಭಾರತದಲ್ಲಿ ಕ್ರಿಕೆಟ್ ಮತ್ತು ಮದುವೆಗಳು ಯಾವಾಗಲೂ ಹೆಚ್ಚು ಚರ್ಚೆಯಾಗುವ ವಿಷಯವಾಗಿವೆ. ಭಾರತೀಯ ಕ್ರಿಕೆಟಿಗರು ಮೊದಲನೇ ಮದುವೆಯ ವಿಚ್ಛೇದನದ ನಂತರ, ಹೊಸ ಒಡನಾಟ ಪ್ರಾರಂಭಿಸಲು ಮತ್ತೊಂದು ಮದುವೆಯಾದ ಅನೇಕ ಘಟನೆಗಳು ನಡೆದಿವೆ.
ಇಲ್ಲಿ ಮದುವೆ ಮತ್ತು ಕ್ರಿಕೆಟ್‌ನ ಮಿಶ್ರಣದ ಬಗ್ಗೆ ಮಾತನಾಡುತ್ತಿರುವುದರಿಂದ, ಮೊದಲ ಮದುವೆ ಮುರಿದ ನಂತರ, ಎರಡನೇ ಬಾರಿಗೆ ಹಸೆಮಣೆ ಏರಿದ ಕೆಲವು ಭಾರತೀಯ ಕ್ರಿಕೆಟಿಗರನ್ನು ನೋಡೋಣ.

ದಿನೇಶ್ ಕಾರ್ತಿಕ್
ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರದ್ದು ದುರಂತವಾಗಿ ಮೊದಲ ಮದುವೆ ಮುರಿದ ಒಂದು ಪ್ರಮುಖ ಉದಾಹರಣೆ. ಆದರೆ ಎರಡನೆಯದು ಯಶಸ್ವಿಯಾಗಿ ಸಾಗುತ್ತಿದೆ.
ದಿನೇಶ್ ಕಾರ್ತಿಕ್ 2007ರಲ್ಲಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಆದರೆ ದಿನೇಶ್ ಕಾರ್ತಿಕ್ ಅವರ ಗೆಳೆಯ ಹಾಗೂ ಸಹ ಕ್ರಿಕೆಟಿಗ ಮುರಳಿ ವಿಜಯ್ ಅವರೊಂದಿಗಿನ ನಿಕಿತಾ ಅವರ ಪ್ರೇಮ ಸಂಬಂಧದಿಂದಾಗಿ ದಂಪತಿ ಒಟ್ಟಿಗೆ ಉಳಿಯಲಿಲ್ಲ.
2012ರಲ್ಲಿ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ವಿಫಲ ದಾಂಪತ್ಯದ ನಂತರ, ದಿನೇಶ್ ಕಾರ್ತಿಕ್ 2015ರಲ್ಲಿ ಮಾಜಿ ವಿಶ್ವ ನಂ.10 ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು ಮತ್ತು ಅಂದಿನಿಂದ ಅವರ ಸಂಬಂಧವು ಉತ್ತಮವಾಗಿ ಸಾಗುತ್ತಿದೆ.
ಯೋಗರಾಜ್ ಸಿಂಗ್
ಭಾರತದ ಮಾಜಿ ಕ್ರಿಕೆಟಿಗ ಕಂ ನಟ ಯೋಗರಾಜ್ ಸಿಂಗ್ ಅವರು ಯಾವಾಗಲೂ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಮೊದಲು ಶಬ್ನಮ್ ಸಿಂಗ್ ಅವರನ್ನು ವಿವಾಹವಾದರು. ಈ ದಂಪತಿಯ ಮಗನೇ ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್. ಅವರ ಯಾವುದೇ ಪರಿಚಯದ ಅಗತ್ಯವಿಲ್ಲವೆನಿಸುತ್ತದೆ.
ಶಬ್ನಮ್ ಸಿಂಗ್ ಅವರೊಂದಿಗಿನ ಯೋಗರಾಜ್ ಸಿಂಗ್ ಅವರ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲವಾದರೂ, ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ, ಯೋಗರಾಜ್ ಸಿಂಗ್ ಅವರು ಸತ್ಬೀರ್ ಕೌರ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ನಂತರ ಇಬ್ಬರೂ ವಿವಾಹವಾದರು.

ಜಾವಗಲ್ ಶ್ರೀನಾಥ್
'ಮೈಸೂರು ಎಕ್ಸ್‌ಪ್ರೆಸ್' ಎಂದು ಕರೆಯಲ್ಪಡುವ ಭಾರತದ ಮಾಜಿ ವೇಗಿ ಮತ್ತು ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಎರಡು ಬಾರಿ ವಿವಾಹದ ಪ್ರತಿಜ್ಞೆ ಮಾಡಿದ್ದಾರೆ.
ಮೊದಲಿಗೆ, ಅವರು 1999ರಲ್ಲಿ ಜ್ಯೋತ್ಸಾನಾ ಅವರನ್ನು ವಿವಾಹವಾದರು. ಆದರೆ ಅವರ ವೈವಾಹಿಕ ಸಂಬಂಧವು 9 ವರ್ಷಗಳು ಕಳೆದ ನಂತರ 2008ರಲ್ಲಿ ಕೊನೆಗೊಂಡಿತು. ಆನಂತರ ಜಾವಗಲ್ ಶ್ರೀನಾಥ್ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾದರು. ಅಂದಿನಿಂದ ಈವರೆಗೆ ದಂಪತಿ ಒಟ್ಟಿಗೆ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications