For Quick Alerts
ALLOW NOTIFICATIONS  
For Daily Alerts
 

Asia Cup T20: ಪಂದ್ಯದ ಗತಿಯನ್ನು ಬದಲಿಸಬಲ್ಲ ಟಾಪ್‌ 5 ಪ್ಲೇಯರ್ಸ್‌

ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಈ ವೇಳೆ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಆಟಗಾರರ ಆಟದ ಪ್ರದರ್ಶನದ ಮೇಲೆ ಚಿತ್ತ ನೆಟ್ಟಿದ್ದಾರೆ. ಈ ಟೂರ್ನಿಯಲ್ಲಿ ಗೇಮ್‌ ಚೇಂಜಿಂಗ್ ಆಟಗಾರರು ಹಲವು ತಂಡಗಳಲ್ಲಿ ಇದ್ದಾರೆ. ಎಂಟು ತಂಡಗಳಲ್ಲಿರುವ ಐವರು ಗೇಮ್‌ ಚೇಂಜಿಂಗ್ ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಏಷ್ಯಾ ಕಪ್‌ನಲ್ಲಿ ಗೇಮ್‌ ಚೇಂಜಿಂಗ್‌ ಆಟಗಾರರ ಪಟ್ಟಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಅಗ್ರ ಸ್ಥಾನ. ಇವರು ತಮ್ಮ ಸ್ಫೋಟಕ ಆಟದಿಂದಲೇ ಹೆಸರುವಾಸಿಯಾಗಿರುವ ಆಟಗಾರ. ಇವರು ಚುಟುಕು ಕ್ರಿಕೆಟ್‌ನಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಇವರಿಗೆ ಮಿಸ್ಟರ್‌ 360 ಡಿಗ್ರಿ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ ಇವರ ಸ್ಟ್ರೈಕ್‌ ರೇಟ್‌ 167.07 ಆಗಿದೆ. ಇವರು ಸ್ಪಿನ್ ಹಾಗೂ ವೇಗದ ಬೌಲರ್‌ಗಳನ್ನು ಕಾಡು ಪ್ಲೇಯರ್‌ ಗೇಮ್‌ ಚೇಂಜಿಂಗ್ ಆಟಗಾರರ ಪಟ್ಟಿಯಲ್ಲಿ ಇವರಿಗೆ ಅಗ್ರ ಸ್ಥಾನ.

5 Key Game-Changers to Watch Out for at the Asia Cup 2025 T20 Tournament

ಟೀಮ್ ಇಂಡಿಯಾದಲ್ಲಿ ಇರುವ ಇನ್ನೋಬ್ಬ ಗೇಮ್‌ ಚೇಂಜಿಂಗ್ ಪ್ಲೇಯರ್ ಎಂದರೆ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಇವರು ಸೀಮಿತ ಓವರ್‌ಗಳ ಆಟದಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರ. ಇವರು ಹಾರ್ದಿಕ್ ಪಾಂಡ್ಯ 1500 ರನ್‌ಗಳನ್ನು ಬಾರಿಸಿದ್ದು, 75ಕ್ಕೂ ಹೆಚ್ಚು ವಿಕೆಟ್‌ ಪಡೆದ ಕೀರ್ತಿಯನ್ನು ಹೊಂದಿದ್ದಾರೆ. ಇವರು ಸೋಲುವ ಪಂದ್ಯದಲ್ಲೂ ಗೆಲುವಿನ ದೀಪ ಬೆಳಗಿಸುವ ಪ್ಲೇಯರ್. ಹೀಗಾಗಿ ಇವರು ಆಟದ ಗತಿಯನ್ನೇ ಬದಲಿಸಬಲ್ಲ ಪ್ಲೇಯರ್.

ಸೈಮ್‌ ಅಯೂಬ್‌

ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರರ ಪಟ್ಟಿಯಲ್ಲಿ ಸೈಮ್‌ ಅಯೂಬ್‌ ಅವರಿಗೂ ಸ್ಥಾನ. ಯುವ ಎಡಗೈ ಆಟಗಾರ ಆಯೂಬ್‌ ಪಾಕ್‌ ತಂಡದ ಭರವಸೆಯ ಪ್ಲೇಯರ್‌. ಇವರು ಸದ್ಯ ತ್ರಿಕೋನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ತಂಡದ ಪರ ಆಂಕರ್‌ ರೋಲ್‌ ಆಡುವ ಪ್ಲೇಯರ್. ಆಯುಬ್‌ ಪವರ್‌ ಹಿಟ್ಟಿಂಗ್‌ಗೆ ಹೆಸರುವಾಸಿ. ಅಲ್ಲದೆ ರನ್‌ ರೇಟ್‌ನ್ನು ಸ್ಥಿರವಾಗಿ ಕಾಪಾಡಿಕೊಳ್ಳುವಲ್ಲಿ ಇವರ ಪಾತ್ರ ಮುಖ್ಯ.

ಪತನು ನಿಸಂಕಾ

ಶ್ರೀಲಂಕಾದ ಪತನು ನಿಸಂಕಾ ಸಹ ಪಂದ್ಯದ ಗತಿಯನ್ನು ಬದಲಿಸಬಲ್ಲ ಪ್ಲೇಯರ್. ಇವರು ಲಂಕಾ ತಂಡಕ್ಕೆ ಭರ್ಜರಿ ಆರಂಭ ನೀಡುವ ಆಟಗಾರ. ಅಲ್ಲದೆ ಇವರು ಆಕ್ರಮಣಕಾರಿ ಆಟದಿಂದ ಎದುರಾಳಿ ಬೌಲರ್‌ಗಳ ಲಯವನ್ನು ಹಾಳು ಮಾಡಬಲ್ಲ ಪ್ಲೇಯರ್. ಅಲ್ಲದೆ ರನ್‌ ರೇಟ್‌ ಸ್ಥಿರವಾಗಿಟ್ಟುಕೊಳ್ಳಲು ಇವರು ಸ್ಟ್ರೈಕ್‌ ಸಹ ರೋಟೇಟ್‌ ಮಾಡುತ್ತಾರೆ. ಪವರ್‌ ಪ್ಲೇನಲ್ಲಿ ಇವರು ಪವರ್‌ ಫುಲ್‌ ಆಟವನ್ನು ಆಡಬಲ್ಲರು.

ಮುಷ್ತಾಫಿಜುರ್ ರಹಮಾನ್‌

ಬಾಂಗ್ಲಾದೇಶ ತಂಡದಲ್ಲೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಬೌಲರ್‌ ಇದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಮುಷ್ತಾಫಿಜುರ್ ರಹಮಾನ್‌ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಯನ್ನು ಕಾಡಬಲ್ಲ ಬೌಲರ್‌. ಇವರು ಈ ಫಾರ್ಮೆಟ್‌ನ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು. ಚುಟುಕು ಫಾರ್ಮೆಟ್‌ನಲ್ಲಿ ಇವರ ಕಟರ್ ಹಾಗೂ ಸ್ಲೋವರ್ ಒನ್‌ ಡಿಲೇವರಿಗಳ ಮೂಲಕ ಕಾಡಬಲ್ಲರು.

Story first published: Wednesday, September 3, 2025, 19:00 [IST]
Other articles published on Sep 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+