ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ 6 ಕ್ರಿಕೆಟಿಗರು ಇವರು!!
ಕ್ರಿಕೆಟ್‌ನ ಮೂಲ ಮಾದರಿ ಎನಿಸಿಕೊಂಡಿರುವ ಟೆಸ್ಟ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಬಹುತೇಕ ಕ್ರಿಕೆಟಿಗರ ಕನಸು. ಈ ಅವಕಾಶ ದೊರೆತರೂ ಸತತವಾಗಿ ದೇಶವನ್ನು ಪ್ರತಿನಿಧಿಸುತ್ತಾ ಮುಂದುವರಿಯುವುದು ಅಸಾಧ್ಯ. ಟೆಸ್ಟ್ ಕ್ರಿಕೆಟ್ ಅತ್ಯಂತ ಸವಾಲಿನ ಮಾದರಿಯಾಗಿದ್ದು ಐದು ದಿನಗಳ ಪಂದ್ಯವಾಗಿರುವ ಕಾರಣ ಉಳಿದ ಮಾದರಿಗಳಿಗಿಂತ ಇದು ಕಠಿಣ ಎನ್ನುವುದು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಆಡುವ ಅವಕಾಶ ದೊರೆತರೂ ನಿರಂತರವಾಗಿ ಆಡುವುದು ಕಠಿಣ.
ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಸಮಯದ ಮಿತಿಯೇ ಇರಲಿಲ್ಲ. ಫಲಿತಾಂಶ ಬರುವರೆಗೂ ಪಂದ್ಯವನ್ನು ಆಡಿಸಲಾಗುತ್ತಿತ್ತು. ಆದರೆ ಬಳಿಕ ಅದನ್ನು ಐದು ದಿನಗಳಿಗೆ ಸೀಮಿತಗೋಳಿಸಿ ಆಡಿಸಲಾಗುತ್ತಿದೆ. ಈ ಸಮಯದಲ್ಲಿ ಆಟಗಾರರಿಗೆ ಎಲ್ಲಾ ರೀತಿಯ ಪರೀಕ್ಷೆಗಳು ಕೂಡ ಎದುರಾಗುತ್ತದೆ. ಹೀಗಾಗಿ ಇಲ್ಲಿ ಹೆಚ್ಚು ಕಾಲ ಉಳಿದುಕೊಳ್ಳಬೇಕಾದರೆ ಆತನಲ್ಲಿ ಅಂಥಾ ಶ್ರೇಷ್ಠ ಸಾಮರ್ಥ್ಯವಿದ್ದರೆ ಮಾತ್ರ ಸಾಧ್ಯ.

ಆದರೆ ಈ ಕಠಿಣವಾದ ಮಾದರಿಯಲ್ಲಿ ಕೆಲ ಕ್ರಿಕೆಟಿಗರು ಸತತವಾಗಿ ಸುದೀರ್ಘವಾಗಿ ಆಡಿದ ಆಟಗಾರರೂ ಇದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸತತವಾಗಿ ಆಡಿದ 6 ಆಟಗಾರರ ಬಗ್ಗೆ ನೋಡೋಣ ಮುಂದೆ ಓದಿ..
6. ಆಸಿಸ್ ಸ್ಪಿನ್ನರ್ ನಥನ್ ಲಿಯಾನ್
ಆಸ್ಟ್ರೇಲಿಯಾದ ಆಫ್-ಸ್ಪಿನ್ನರ್ ನಥನ್ ಲಿಯಾನ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಸತತ 100 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆರನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಇತ್ತೀಚೆಗಷ್ಟೇ ಪಡೆದುಕೊಂಡರು. ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಆದರೆ ಈ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಲಿಯಾನ್ ಮುಂದಿನ ಪಂದ್ಯದಲ್ಲಿ ಆಡದೆ ಇದ್ದ ಕಾರಣ ಈ ದಾಖಲೆ 100ನೇ ಪಂದ್ಯಕ್ಕೆ ಕೊನೆಯಾಯಿತು.
5. ಕಿವೀಸ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಮ್
ಇಂಗ್ಲೆಂಡ್‌ನ ಪ್ರಸ್ತುತ ಟೆಸ್ಟ್ ಕೋಚ್ ಬ್ರೆಂಡನ್ ಮೆಕಲಮ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರನಾಗಿದ್ದಾಗ ಸುದೀರ್ಘ ಕಾಲ ಸತತವಾಗಿ ಆಡಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿರುವ ಬ್ರೆಂಡನ್ ಮೆಕ್ಕಲಮ್ 101 ಟೆಸ್ಟ್ ಪಂದ್ಯಗಳನ್ನು ಸತತವಾಗಿ ಆಡಿ ದಾಖಲೆ ಬರೆದಿದ್ದಾರೆ.
4. ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್
ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸುನಿಲ್ ಗವಾಸ್ಕರ್ ಅವರು ಕೂಡ ಈ ಪಟ್ಟಿಯಲ್ಲಿದ್ದಾರೆ. ಭಾರತ ತಂಡದ ಪರವಾಗಿ ಗವಾಸ್ಕರ್ ಸತತವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಸತತ 106 ಟೆಸ್ಟ್‌ಗಳನ್ನು ಆಡಿ ಈ ಸಾಧನೆ ಮಾಡಿದ್ದಾರೆ.
3. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ
ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾರ್ಕ್ ವಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಪರವಾಗಿ ಸತತ 107 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದ್ದಾರೆ ಆಸ್ಟ್ರೇಲಿಯಾದ ಈ ಮಾಜಿ ಕ್ರಿಕೆಟಿಗ. ಇವರು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಸ್ಟೀವ್ ವಾ ಅವರ ಸೋದರ.
2. ಆಸ್ಟ್ರೇಲಿಯಾದ ದಿಗ್ಗಜ ಅಲನ್ ಬಾರ್ಡರ್
ಸತತವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಮತ್ತೋರ್ವ ಕ್ರಿಕೆಟಿಗ ಆಸ್ಟ್ರೇಲಿಯಾದ ಅಲನ್ ಬಾರ್ಡರ್. ಈ ದಿಗ್ಗಜ ಕ್ರಿಕೆಟಿಗ ತಮ್ಮ ರಾಷ್ಟ್ರದ ಪರವಾಗಿ ಸತತವಾಗಿ ಬರೊಬ್ಬರಿ 153 ಪಂದ್ಯಗಳಲ್ಲಾಡಿದ ಸಾಧನೆ ಮಾಡಿದ್ದಾರೆ, ಈ ಮೂಲಕ ಈ ಪಟ್ಟಿಯಲ್ಲಿ ಬಾರ್ಡರ್ ಎರಡನೇ ಸ್ಥಾನದಲ್ಲಿದ್ದಾರೆ.
1. ಇಂಗ್ಲೆಂಡ್ ಮಾಜಿ ನಾಯಕ ಅಲೆಸ್ಟರ್ ಕುಕ್
ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಸಾರ್ವಕಾಲಿಕ ದಾಖಲೆ ಹೊಂದಿರುವ ಕ್ರಿಕಟಿಗ ಎಂದರೆ ಅದು ಇಂಗ್ಲೆಂಡ್ ಮಾಜಿ ನಾಯಕ ಅಲೆಸ್ಟರ್ ಕುಕ್. ಇಂಗ್ಲೆಂಡ್ ಕಂಡ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗಲ್ಲಿ ಒಬ್ಬರೆನಿಸಿರುವ ಅಲೆಸ್ಟರ್ ಕುಕ್ ತಮ್ಮ ದೇಶದ ಪರವಾಗಿ ಬರೊಬ್ಬರಿ 159 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಈ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications