ಕೋವಿಡ್-19 ದ್ವಿತೀಯ ಟೆಸ್ಟ್‌ನಲ್ಲಿ ಪಾಕಿಸ್ತಾನದ 6 ಆಟಗಾರರು ನೆಗೆಟಿವ್

ಇಸ್ಲಮಾಬಾದ್, ಜೂನ್ 27: ಇಂಗ್ಲೆಂಡ್ ಪ್ರವಾಸ ಸರಣಿಗಾಗಿ ಸಜ್ಜಾಗುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ 10 ಆಟಗಾರರಿಗೆ ಕೊರೊನಾವೈರಸ್ ಸೋಂಕಿರುವುದು ಪತ್ತೆಯಾಗಿತ್ತು. ಆದರೆ ದ್ವಿತೀಯ ಟೆಸ್ಟ್‌ನಲ್ಲಿ 6 ಮಂದಿಗೆ ನೆಗೆಟಿವ್ ಫಲಿತಾಂಶ ಬಂದಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಇದನ್ನು ಶನಿವಾರ ಘೋಷಿಸಿದೆ.
ಮೊಹಮ್ಮದ್ ಹಸನೈನ್, ಶದಾಬ್ ಖಾನ್, ಫಖರ್ ಝಮಾನ್, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ಹಫೀಝ್ ಮತ್ತು ವಹಾಬ್ ರಿಯಾಝ್ ಅವರಿಗೆ ನಡೆಸಿದ ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಈ ಆಟಗಾರರು 20 ಜನರ ತಂಡವನ್ನು ಸೇರಿಕೊಳ್ಳಲಿದ್ದು, ಪಾಕ್ ತಂಡ ಭಾನುವಾರ (ಜೂನ್ 28) ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.
ಮೊದಲ ಕೊರೊನಾ ಪರೀಕ್ಷೆ ವೇಳೆ ಪಾಕ್ ತಂಡದ ಆಲ್ ರೌಂಡರ್ ಶದಾಬ್ ಖಾನ್, ಅನ್ ಕ್ಯಾಪ್ಡ್ ಆಟಗಾರ ಹೈದರ್ ಅಲಿ, ವೇಗಿ ಹ್ಯಾರಿಸ್ ರೌಫ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಸ್ನೈನ್, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಇಮ್ರಾನ್ ಖಾನ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು.
'ಈ ಆಟಗಾರರಿಗೆ ರೋಗ ಲಕ್ಷಣಗಳು ಇರಲಿಲ್ಲ. ಇದರರ್ಥ ಇವರು ಅತೀ ಶೀಘ್ರದಲ್ಲಿ ಫಿಟ್ನೆಸ್‌ಗೆ ಮರಳುವ ನಿರೀಕ್ಷೆ ಗಾಢವಾಗಿದೆ,' ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಮ್ ಖಾನ್ ಹೇಳಿಕೆ ಮೂಲಕ ತಿಳಿಸಿದ್ದಾರೆ. ಅಂದ್ಹಾಗೆ, ಇಂಗ್ಲೆಂಡ್ ಪ್ರವಾಸ ಸರಣಿ ಮೂರು ಟೆಸ್ಟ್ ಪಂದ್ಯಗಳು, ಮೂರು ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ವೇಳಾಪಟ್ಟಿ ಇನ್ನಷ್ಟೇ ಘೋಷಣೆಯಾಗಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications