ಕೊಹ್ಲಿ ಬದುಕಲ್ಲಿ ಎಂದೂ ಮರೆಯದ ದಿನ ಬಂದೇ ಬಿಡ್ತು!
ಬ್ರಿಸ್ಬೇನ್, ಜ.12: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 'ವಿರಾಟ್' ರೂಪ ತೋರಿ ಭರ್ಜರಿ ಪ್ರದರ್ಶನ ನೀಡಿದ್ದ ಕೊಹ್ಲಿ ಈಗ ಸ್ವಲ್ಪ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸೋಮವಾರ ಅವರ ಬದುಕಿನ ಅವಿಸ್ಮರಣೀಯ ದಿನ ಎಂದು ಸ್ವತಃ ಕೊಹ್ಲಿ ತಮ್ಮ 5 ಮಿಲಿಯನ್ ಟ್ವಿಟ್ಟರ್ ಹಿಂಬಾಲಕರಿಗೆ ಹೇಳಿಕೊಂಡಿದ್ದಾರೆ.
ಕೊಹ್ಲಿ ಬದುಕಿನಲ್ಲಿ ಇನ್ನೂ ವಿವಾಹ ಬಂಧನದ ಶುಭ ದಿನ ಯಾವಾಗ ಬರುವುದೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಬಗ್ಗೆ ಸ್ಪಷ್ಟ ಸುದ್ದಿ ಇಲ್ಲ. ಇಲ್ಲಿತನಕದ ಅತ್ಯಂತ ಸಂಭ್ರಮದ ದಿನದ ಬಗ್ಗೆ ಕೊಹ್ಲಿ ಹೇಳಿಕೊಂಡಿದ್ದಾರೆ.
"ನನ್ನ ಬದುಕಿನ ಎಂದೂ ಮರೆಯದ ದಿನ ಇದಾಗಿದೆ. ಕೋರ್ಟಿನೊಳಗೆ ಹೊರಗೆ ಆತ ದಿಗ್ಗಜ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ನ ಹೊಸ ಕಿಂಗ್ ಎನಿಸಿಕೊಂಡಿರುವ ಕೊಹ್ಲಿ ಅವರು ಸ್ವಿಟ್ಜರ್ಲೆಂಡ್ ನ ಅದ್ಭುತ ಆಟಗಾರ ಟೆನಿಸ್ ದಿಗ್ಗಜ ರೋಜರ್ ಫೆಡರರ್(@rogerfederer) ಉಲ್ಲೇಖಿಸಿ ಮಾತನಾಡುತ್ತಿದ್ದಾರೆ. [ಬಾಲಿವುಡ್ ಬ್ಯೂಟಿ ಬಿದ್ದಳೇ ವಿರಾಟ್ ಕೊಹ್ಲಿ ಹಿಂದೆ?]
ಸದ್ಯ ಆಸ್ಟ್ರೇಲಿಯಾದಲ್ಲಿರುವ ರೋಜರ್ ಅವರನ್ನು ಭೇಟಿ ಮಾಡಿದ ಆನಂದವನ್ನು ಕೊಹ್ಲಿ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಭಾನುವಾರ ಫೆಡರರ್ ಅವರು ತಮ್ಮ ವೃತ್ತಿ ಬದುಕಿನ 1000ನೇ ಗೆಲುವು ಸಾಧಿಸಿ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಪಂದ್ಯ ನೋಡಲು ಪ್ಯಾಟ್ ರಾಫ್ಟರ್ ಅರೀನಾಗೆ ಕೊಹ್ಲಿ ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ. [ವಿಶ್ವದಾಖಲೆ ಜೊತೆಗೆ ದ್ರಾವಿಡ್ ದಾಖಲೆ ಕೆಡವಿದ ಕೊಹ್ಲಿ]
ಫೆಡರರ್ ರನ್ನು ಭೇಟಿ ಮಾಡಿ ಅವರ ಹಸ್ತಾಕ್ಷರ ಪಡೆದು ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಕೊಹ್ಲಿ ಬೆನ್ನಲ್ಲೇ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಕೂಡಾ ಕೊಹ್ಲಿ ರೀತಿಯಲ್ಲೇ ಫೋಟೊ ತೆಗೆಸಿಕೊಂಡು ನಂತರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications