Pak vs Eng: ಪಾಕಿಸ್ತಾನದ ಆಟವನ್ನು ನಿರಾಶೆಯಿಂದ ನೋಡಿದ ಅಭಿಮಾನಿ ಚಿತ್ರ ವೈರಲ್

ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿದೆ. 138 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವುದು ಇಂಗ್ಲೆಂಡ್‌ಗೆ ಸುಲಭವಾಗಿರಲಿಲ್ಲ.
ಒಂದು ಹಂತದಲ್ಲಿ ಪಂದ್ಯ ರೋಚಕತೆಯಿಂದ ಕೂಡಿತ್ತು, ಆದರೆ, ಪಾಕಿಸ್ತಾನದ ಗುಣಮಟ್ಟದ ಬೌಲಿಂಗ್ ವಿರುದ್ಧ ಅಷ್ಟೇ ಜವಾಬ್ದಾರಿಯುತ ಆಟವಾಡಿದ ಇಂಗ್ಲೆಂಡ್ ಕೊನೆಗೂ ಜಯ ಸಾಧಿಸಿತು.
80 ಸಾವಿರ ಅಭಿಮಾನಿಗಳು ಈ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು, ತಂಡದ ಸೋಲು ಗೆಲುವಿನಲ್ಲಿ ಅಭಿಮಾನಿಗಳು ಭಾಗಿಯಾಗುತ್ತಾರೆ. ಪಾಕಿಸ್ತಾನದ ಅಭಿಮಾನಿಯೊಬ್ಬರು ಈ ಮೊದಲು ಪಾಕ್ ಆಟಗಾರರ ಆಟವನ್ನು ಹತಾಶೆಯಿಂದ ವೀಕ್ಷಿಸಿವು ಚಿತ್ರ ಮೀಮ್ ಆಗಿತ್ತು.
2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪಾಕಿಸ್ತಾನದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬರು ತಮ್ಮ ತಂಡದ ಸೋಲಿನ ಹಂತದಲ್ಲಿ ನಿರಾಶೆಯಿಂದ ನೋಡುತ್ತಿರುವ ಚಿತ್ರಗಳು ಈಗ ವೈರಲ್ ಆಗಿವೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಸಾಧಾರಣ ಮೊತ್ತ ಕಲೆಹಾಕಿತು. ಅದರಲ್ಲೂ ಅಂತಿಮ 5 ಓವರ್ ಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಪಾಕಿಸ್ತಾನದ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ, ಸ್ಯಾಮ್ ಕರಾನ್ ಮೊಹಮ್ಮದ್ ನವಾಜ್ ವಿಕೆಟ್ ಅನ್ನು ಪಡೆದಾಗ, ಕ್ರೀಡಾಂಗಣದಲ್ಲಿ ಪಾಕ್ ಅಭಿಮಾನಿಯೊಬ್ಬರು ನಿರಾಶೆಯಿಂದ ನೋಡುತ್ತಿರು ದೃಶ್ಯಗಳು ನೋಡುಗರನ್ನು ಸೆಳೆದವು.

ವೈರಲ್ ಆಗುತ್ತಿದೆ ಅಭಿಮಾನಿಯ ಫೋಟೊ
ಹಲವರು ಇದರ ಬಗ್ಗೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು, ಓರ್ವ ಬಳಕೆದಾರರು, ಪಾಕಿಸ್ತಾನ ಅಭಿಮಾನಿಗಳ ಜೀವನ ಸಾರಾಂಶ ಇಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಹೊಸದಾಗಿ ನಿರಾಶೆಗೊಂಡ ಪಾಕಿಸ್ತಾನ ಅಭಿಮಾನಿ ಎಂದು ಮತ್ತೊಬ್ಬರ ಕಾಲೆಳೆದಿದ್ದಾರೆ. ಮತ್ತೊಬ್ಬರು, ಪಾಕಿಸ್ತಾನ ಅಭಿಮಾನಿಗಳ ಬೇಸರ ಮುಂದುವರೆದಿದೆ ಎಂದು ಹೇಳಿದ್ದಾರೆ.
2019 ರಲ್ಲಿ ವೈರಲ್ ಆದ 'ನಿರಾಶೆಗೊಂಡ ಪಾಕಿಸ್ತಾನದ ಅಭಿಮಾನಿ'ಯನ್ನು ಈ ದೃಶ್ಯಗಳು ನೆನಪಿಸಿದವು. 2019 ರ ಏಕದಿನ ವಿಶ್ವಕಪ್ ಸಮಯದಲ್ಲಿ, ಪಾಕಿಸ್ತಾನ ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ಆಸಿಫ್ ಅಲಿ ಡೇವಿಡ್ ವಾರ್ನರ್ ಕ್ಯಾಚ್ ಕೈ ಬಿಟ್ಟರು, ಇದನ್ನು ನೋಡಿದ ಅಭಿಮಾನಿಯೊಬ್ಬರು ಆಸಿಫ್ ಬಗ್ಗೆ ನಿರಾಶೆಗೊಂಡರು ಮತ್ತು ಅವರ ಮುಖಭಾವವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮೀಮ್ ಆಗಿತ್ತು.
ಹಲವು ಟ್ರೋಲ್‌ಪೇಜ್‌ಗಳು ಆ ಭಾವಚಿತ್ರವನ್ನು ವಿವಿಧ ಸಂದರ್ಭಗಳಲ್ಲಿ ಬಳಸಿಕೊಂಡಿದ್ದವು. ಪಾಕಿಸ್ತಾನ ಫೈನಲ್‌ನಲ್ಲಿ ಸೋತ ಬಳಿಕ ಭಾರತದ ಕ್ರಿಕೆಟ್ ಅಭಿಮಾನಿಗಳು, ಪಾಕಿಸ್ತಾನ ಪ್ರಧಾನಿಗೆ ಕಾಲೆಳೆಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications