ಕೊಹ್ಲಿಗೆ ನಕಲಿ ಮಾಸ್ಟರ್ ಬ್ಲಾಸ್ಟರ್ ನೀಡಿದ ಸಲಹೆ ವೈರಲ್!
ಬೆಂಗಳೂರು, ಡಿಸೆಂಬರ್ 12: ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಎಂಬ ಟ್ವೀಟ್ ಐಡಿಯಿಂದ ಮಾಡಿದ ಶುಭಹಾರೈಕೆ ಟ್ವೀಟ್ ಸಕತ್ ವೈರಲ್ ಆಗಿದೆ.
ಸೋಮವಾರದಂದು ಇಟಲಿಯ ಟಸ್ಕನ್ ಎಂಬಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರ ಮದುವೆಗೆ ಶುಭ ಹಾರೈಸಿ, ಕೊಹ್ಲಿಗೆ ಸಲಹೆ ನೀಡಿದ 'ಟ್ವೀಟ್' ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಆದರೆ, ಈ ನಕಲಿ ಸಚಿನ್ ತೆಂಡೂಲ್ಕರ್ ಐಡಿ ಮತ್ತು ವಿರಾಟ್ ಕೊಹ್ಲಿ ಜತೆಗಿನ ಟ್ವೀಟ್ ಸಂಭಾಷಣೆ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದು ನಿಜ ಎಂಬಂತೆ ಎಲ್ಲರೂ ಷೇರ್ ಬಟನ್ ಒತ್ತಿದ್ದಾರೆ.
@MasterBlaster. ಇದು ಸಚಿನ್ ಅವರ ಹೆಸರಿನ ನಕಲಿ ಟ್ವಿಟರ್ ಖಾತೆ. ಸಚಿನ್ ಅವರ ಅಧಿಕೃತ ಖಾತೆ @sachin_rt. ಸಚಿನ್ ತೆಂಡೂಲ್ಕರ್ ವಿರಾಟ್ ಮತ್ತು ಅನುಷ್ಕಾಗೆ ಶುಭ ಹಾರೈಸಿ ಮಾಡಿದ ಟ್ವೀಟ್ ಹೀಗಿದೆ.

ಶುಭ ಹಾರೈಸಿ ಮಾಡಿದ ಟ್ವೀಟ್
ಸಚಿನ್ ತೆಂಡೂಲ್ಕರ್ ಎಂದು ಹೆಸರಿರುವ ಮಾಸ್ಟರ್ ಬ್ಲಾಸ್ಟರ್ ಎಂಬ ಖಾತೆಯಿಂದ ಕಂಗ್ರಾಟ್ಸ್ ವಿರಾಟ್, ಹ್ಯಾಪಿ ವೆಡ್ಡಿಂಗ್ ಲೈಫ್ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‍ಗೆ ಉತ್ತರಿಸಿದ ವಿರಾಟ್ ಕೊಹ್ಲಿ ಥ್ಯಾಂಕ್ಸ್, ಸರ್ ಏನಾದರೂ ಸಲಹೆ? ಎಂದು ಕೇಳುತ್ತಾರೆ. ಇದಕ್ಕೆ 'ರಾತ್ರಿ ಹೆಲ್ಮೆಟ್ ಧರಿಸಿ' ಎಂದು ಪ್ರತಿಕ್ರಿಯೆ ಬಂದಿದೆ.

ತೆಂಡೂಲ್ಕರ್ ಈ ರೀತಿ ಟ್ವೀಟ್ ಮಾಡುತ್ತಾರಾ?
ಇದಾದ ಬಳಿಕ ಅಭಿಮಾನಿಗಳು ಇದೇನು ಸಚಿನ್ ತೆಂಡೂಲ್ಕರ್ ಈ ರೀತಿ ಟ್ವೀಟ್ ಮಾಡುತ್ತಾರಾ? ಎಂದು ಹುಬ್ಬೇರಿಸಿದ್ದಾರೆ. ಆದರೆ, ಅಸಲಿಗೆ ಮಾಸ್ಟರ್ ಬ್ಲಾಸ್ಟರ್ ಎಂಬುದು ನಕಲಿ ಐಡಿಯಾಗಿದ್ದು, ಸಚಿನ್ ಅವರ ಅಸಲಿ ಐಡಿಯಿಂದ ಈ ರೀತಿ ಟ್ವೀಟ್ ಮಾಡಿಲ್ಲ.ಇಲ್ಲಿ ಟ್ವೀಟ್‍ಗಳನ್ನು ಗಮನಿಸಿದರೆ ಇದು ನಕಲಿ ಎಂಬುದು ಸ್ಪಷ್ಟವಾಗುತ್ತದೆ.
ಕೊಹ್ಲಿ- ಅನುಷ್ಕಾಗೆ ವಿಶ್ ಮಾಡಿದ್ದು ಹೀಗೆ
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಗೆ ಸಚಿನ್ ವಿಶ್ ಮಾಡಿದ್ದು ಹೀಗೆ
ಮಕ್ಕಳ ಹೆಸರಿನ ನಕಲಿ ಖಾತೆ ಬಗ್ಗೆ ಸಚಿನ್
ಮಕ್ಕಳ ಹೆಸರಿನ ನಕಲಿ ಖಾತೆ ಬಗ್ಗೆ ಸಚಿನ್ ಅವರು ಈ ಹಿಂದೆ ಎಚ್ಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ನಕಲಿ ಖಾತೆಗಳನ್ನು ಡಿಲೀಟ್ ಮಾಡುವಂತೆ ಕೋರಿದ್ದರು.
ಅನೇಕ ನಕಲಿ ಖಾತೆಗಳಿವೆ
ಅನೇಕ ನಕಲಿ ಖಾತೆಗಳಿವೆ, ಆದರೆ, ಈ ಬಗ್ಗೆ ಎಚ್ಚರಿಸಿದ್ದು ಒಳ್ಳೆಯದಾಯಿತು ಎಂದ ಸಚಿನ್ ಅಭಿಮಾನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications