WTC Final: ಭಾರತೀಯ ಆಟಗಾರರಿಗೆ ಅಂಕಗಳನ್ನು ನೀಡಿದ ಆಕಾಶ್ ಚೋಪ್ರ, ಅತಿ ಕಡಿಮೆ ಅಂಕಗಳಿಸಿದ ಸ್ಟಾರ್ ಕ್ರಿಕೆಟಿಗ

ಸೌಥಾಂಪ್ಟನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೆರಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾ ಪರವಾಗಿ ಪ್ರಮುಖ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಈ ಪಂದ್ಯದಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅಂಕಗಳನ್ನು ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣ್ಕಕಿಳಿದಿದ್ದ ಟೀಮ್ ಇಂಡಿಯಾದ ಎಲ್ಲಾ ಆಟಗಾರರನ್ನು ಕೂಡ ಚೋಪ್ರ ಪರಿಗಣಿಸಿದ್ದಾರೆ.

ಆರಂಭಿಕರಿಗೆ ನೀಡಿದ ಅಂಕ
ಆರಂಭಿಕರಿಂದ ಆರಂಭಿಸಿದ ಆಕಾಶ್ ಚೋಪ್ರ ಅನುಭವಿ ರೋಹಿತ್ ಶರ್ಮಾಗೆ 6/10 ಅಂಕಗಳನ್ನು ನೀಡಿದ್ದಾರೆ. ಶರ್ಮಾ ಉತ್ತಮ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಉತ್ತಮ ಆರಂಭವನ್ನು ನೀಡಿದ್ದಾರೆ ಎಂದಿದ್ದಾರೆ. ಆದರೆ ರೋಹಿತ್ ಶರ್ಮಾರ ಆರಂಭಿಕ ಜೊತೆಗಾರ ಶುಬ್ಮನ್ ಗಿಲ್‌ಗೆ 4/10 ಅಂಕಗಳನ್ನು ನೀಡಿದ್ದಾರೆ. ನಿರೀಕ್ಷೆಯನ್ನು ಮುಟ್ಟುವಲ್ಲಿ ಯುವ ಆರಂಭಿಕ ಆಟಗಾರ ವಿಫಲರಾಗಿದ್ದಾರ ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಆಟಗಾರರ ನೀರಸ ಪ್ರದರ್ಶನ
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಹಾಗೂ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರಾ ಪ್ರದರ್ಶನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪೂಜಾರ ಅವರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದೆ ಎಂದು ಚೋಪ್ರ ಹೇಳಿದ್ದಾರೆ. ಈ ಪಂದ್ಯದ ಪ್ರದರ್ಶನಕ್ಕೆ ಪೂಜಾರ ಅವರಿಗೆ 2/10 ಅಂಕಗಳನ್ನಷ್ಟೇ ನೀಡುತ್ತೇನೆ ಎಂದು ಆಕಾಶ್ ಚೋಪ್ರ ಹೇಳಿದರು. ಇನ್ನು ಸ್ಟಾರ್ ಆಲ್‌ರೌಂಡ್ ರವೀಂದ್ರ ಜಡೇಜಾಗೆ 3/10 ಅಂಕಗಳನ್ನು ನೀಡಿದ್ದಾರೆ. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ವಿಫಲರಾದರು. ಆದರೆ ಆರ್ ಅಶ್ವಿನ್‌ಗೆ 6/10 ಅಂಕ ನೀಡಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಸಂಪಾದಿಸಿದರು.

ಶಮಿ, ಶರ್ಮಾ ಉತ್ತಮ
ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮಿಂಚಿದ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾಗೆ ಉತ್ತಮ ಅಂಕಗಳನ್ನು ನೀಡಿದ್ದಾರೆ ಚೋಪ್ರ. ಶಮಿ 7/10 ಅಂಕ ಪಡೆದುಕೊಂಡರೆ ಇಶಾಂತ್ ಶರ್ಮಾಗೆ 6/10 ಅಂಕ ನೀಡಿದ್ದಾರೆ. ಆದರೆ ಮಹತ್ವದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯಲೂ ವಿಫಲರಾದ ಜಸ್ಪ್ರೀತ್ ಬೂಮ್ರಾಗೆ 3/10 ಅಂಕಗಳನ್ನು ನೀಡಿದ್ದಾರೆ.

ಆಕಾಶ್ ಚೋಪ್ರ ನೀಡಿದ ಅಂಕಗಳ ವಿವರ
ರೋಹಿತ್ ಶರ್ಮಾ- 6/10
ಶುಬ್ಮನ್ ಗಿಲ್- 4/10
ಚೇತೇಶ್ವರ ಪೂಜಾರ- 2/10
ವಿರಾಟ್ ಕೊಹ್ಲಿ- 5/10
ಅಜಿಂಕ್ಯ ರಹಾನೆ- 5/10
ರಿಷಭ್ ಪಂತ್- 5/10
ರವೀಂದ್ರ ಜಡೇಜಾ- 3/10
ರವಿಚಂದ್ರನ್ ಅಶ್ವಿನ್- 6/10
ಇಶಾಂತ್ ಶರ್ಮಾ- 6/10
ಮೊಹಮ್ಮದ್ ಶಮಿ- 7/10
ಜಸ್ಪ್ರಿತ್ ಬುಮ್ರಾ- 3/10
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications