For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾರಿಂದ ಆಕಾಶ್ ಚೋಪ್ರಾ ನಿರೀಕ್ಷಿಸಿದ ಶತಕಗಳೆಷ್ಟು ಗೊತ್ತಾ?

2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯು ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ. ಇದಕ್ಕಾಗಿ ಭಾರತ ಸೇರಿದಂತೆ ಎಲ್ಲಾ ಹತ್ತು ತಂಡಗಳೂ ಇನ್ನಿಲ್ಲದ ತಯಾರಿ ನಡೆಸುತ್ತಿವೆ.

ಭಾರತ ತಂಡ 2011ರ ನಂತರ ವಿಶ್ವಕಪ್ ಬರ ಎದುರಿಸುತ್ತಿದ್ದು, ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಕೊನೆಯ ಬಾರಿಗೆ ತವರಿನಲ್ಲಿ ಆಡಿದಾಗ ಗೆದ್ದಿತ್ತು. ಇದೀಗ ಮತ್ತೆ ಐಸಿಸಿ ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ತಂಡ ಎದುರು ನೋಡುತ್ತಿದೆ.

ಇನ್ನು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಎರಡು ಶತಕ ಮತ್ತು ಒಂದು ದ್ವಿಶತಕ ಬಾರಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ.

Aakash Chopra -Rohit Sharma

2019ರ ಹಿಂದಿನ ಆವೃತ್ತಿಯ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಭಾರತದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದರು. ಆಡಿದ 9 ಪಂದ್ಯಗಳಿಂದ 81ರ ಸರಾಸರಿಯಲ್ಲಿ 648 ರನ್ ಗಳಿಸಿದರು ಮತ್ತು ಪಂದ್ಯಾವಳಿಯಲ್ಲಿ ಒಟ್ಟು ಐದು ಶತಕಗಳನ್ನು ಸಿಡಿಸಿದ್ದರು.

ಆದರೆ, 2019ರ ವಿಶ್ವಕಪ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತು.

ಈ ಬಾರಿ ರೋಹಿತ್ ಶರ್ಮಾ ನಾಯಕನಾಗಿ ವಿಶ್ವಕಪ್‌ಗೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ತಂಡದಲ್ಲಿನ ಅವರ ಫಾರ್ಮ್‌ ಉತ್ತಮವಾಗಿದೆ. ಈ ವರ್ಷ ಆಡಿದ ಎಲ್ಲಾ ಸ್ವರೂಪಗಳ 16 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರು 48.57ರ ಸರಾಸರಿಯಲ್ಲಿ 923 ರನ್ ಗಳಿಸಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, "ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್‌ನಲ್ಲಿ ಗುಂಪು ಹಂತದ ಎಲ್ಲಾ ಒಂಬತ್ತು ಪಂದ್ಯಗಳನ್ನು ಆಡಿದರೆ, ಎರಡು ಶತಕ ಮತ್ತು ದ್ವಿಶತಕವನ್ನು ಗಳಿಸುವ ನಿರೀಕ್ಷೆಯಿದೆ," ಎಂದು ಹೇಳಿದರು.

Aakash Chopra -Rohit Sharma

"ನಾವು ಟಾಪ್ ಮೂವರ ಬಗ್ಗೆ ಮಾತನಾಡುವಾಗ, ನಮಗಿಂತ ಯಾರು ಉತ್ತಮರು ಎಂದು ತೋರುತ್ತದೆ. ನಮ್ಮಲ್ಲಿ ರೋಹಿತ್ ಶರ್ಮಾ ಜೊತೆಗೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಮತ್ತು ವಿರಾಟ್ ಕೊಹ್ಲಿ ನಂತರ ಬರುವುದರಿಂದ ಅಗ್ರಕ್ರಮಾಂಕ ಬಲಿಷ್ಠವಾಗಿದೆ ಎಂದು ತೋರುತ್ತದೆ," ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.

"ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 9800ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು 30 ಶತಕಗಳನ್ನು ಬಾರಿಸಿದ್ದಾರೆ. ಅವರು ಸುಮಾರು 49ರ ಸರಾಸರಿ ಮತ್ತು 90ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಬಹುತೇಕ ಏಷ್ಯಾದಲ್ಲಿ ಬಂದಿದೆ," ಎಂದರು.

"ಆದ್ದರಿಂದ, ರೋಹಿತ್ ಶರ್ಮಾ ಯಾವ ರೀತಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ನೀವು ಊಹಿಸಬಹುದು. ಅವರು ಗುಂಪು ಹಂತದ ಎಲ್ಲಾ ಒಂಬತ್ತು ಪಂದ್ಯಗಳನ್ನು ಆಡಿದರೆ, ಎರಡು ಶತಕ ಮತ್ತು ಒಂದು ದ್ವಿಶತಕವನ್ನು ಗಳಿಸಬೇಕು. ನಾನು ಅದನ್ನು ನಿರೀಕ್ಷಿಸುತ್ತಿದ್ದೇನೆ," ಎಂದು ಆಕಾಶ್ ಚೋಪ್ರಾ ಹೇಳಿದರು.

ಇದೇ ವೇಳೆ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕ ಜೋಡಿಯ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಇಬ್ಬರೂ ಪರಸ್ಪರ ಚೆನ್ನಾಗಿ ಪೂರಕವಾಗಿದ್ದಾರೆ ಎಂದು ತಿಳಿಸಿದರು.

ರೋಹಿತ್ ಶರ್ಮಾಗೆ ಹೋಲಿಸಿದರೆ ಶುಭ್ಮನ್ ಗಿಲ್ ಅವರ ಅಂಕಿಅಂಶ ಸಣ್ಣದಾಗಿದೆ. ಆಡಿದ 27 ಪಂದ್ಯಗಳಲ್ಲಿ 62ರ ಸರಾಸರಿಯನ್ನು ಹೊಂದಿದ್ದಾರೆ, ಇದು ಏಷ್ಯಾದಲ್ಲಿ 64 ಇದೆ. ಅವರ ನಾಲ್ಕು ಶತಕಗಳಲ್ಲಿ ಮೂರು ಶತಕಗಳು ಏಷ್ಯಾದಲ್ಲಿ ಬಂದಿವೆ.

Story first published: Saturday, August 26, 2023, 18:28 [IST]
Other articles published on Aug 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+