ಈ ಮ್ಯಾಚ್ ವಿನ್ನರ್‌ನ ಸಾಧನೆಯನ್ನು ನಾವು ಸಂಭ್ರಮಿಸಿದ್ದು ಕಡಿಮೆ: ಆಕಾಶ್ ಚೋಪ್ರ ಹೇಳಿದ್ದು ಯಾರ ಬಗ್ಗೆ?

ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಯಾವುದು ಎಂದರೆ ಕ್ರಿಕೆಟ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಬೆಳೆದ ರೀತಿ ಅದ್ಭುತ. ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಈ ಪ್ರಮಾಣದ ಸಾಧನೆ ಮಾಡಿದ ಹಿಂದೆ ಅನೇಕ ದಿಗ್ಗಜ ಆಟಗಾರರ ಪರಿಶ್ರಮವಿದೆ. ಅದರಲ್ಲಿ ಕೆಲವರ ಸಾಧನೆಗಳು ಹೆಚ್ಚಾಗಿ ಮೆರೆಸಲ್ಪಟ್ಟರೆ ಇನ್ನೂ ಕೆಲವರ ಸಾಧನೆಗಳಿಗೆ ಅಂಥಾ ದೊಡ್ಡ ಮಟ್ಟದ ಮೆಚ್ಚುಗೆಗಳು, ಪ್ರಶಂಸೆಗಳು ದೊರೆಯುವುದಿಲ್ಲ. ಭಾರತ ಕ್ರಿಕೆಟ್ ತಂಡದ ಅಂಥಾ ವಿಶೇಷ ಸಾಧಕನೊಬ್ಬನ ಬಗ್ಗೆ ಆಕಾಶ್ ಚೋಪ್ರ ಉಲ್ಲೇಕಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಭಾರತ ತಂಡದ ಸ್ಟಾರ್ ಆಟಗಾರನ ಅತ್ಯುತ್ತಮ ಸಾಧನೆ ಮಾಡಿದ್ದರೂ ಆ ಸಾಧನೆಗೆ ಸಂಭ್ರಮಿಸಬೇಕಾದಷ್ಟು ನಾವು ಸಂಭ್ರಮಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹಾಗಾದರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಹೇಳಿದ ಆ ಕ್ರಿಕೆಟಿಗ ಯಾರು? ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿರುವ ಈ ಆಟಗಾರ ಟೆಸ್ಟ್ ಮಾದರಿಯಲ್ಲಿ ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ. ಅನೇಕ ದಾಖಲೆಗಳನ್ನು ಬರೆಯುತ್ತಿದ್ದಾರೆ. ಅದೆಷ್ಟೋ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಎನಿಸಿದ್ದಾರೆ. ಹಾಗಿದ್ದರೂ ಆತನಿಗೆ ದೊರೆಯಬೇಕಾದ ಗೌರವ ದೊರೆತಿಲ್ಲ ಎಂದು ಆಕಾಶ್ ಚೋಪ್ರ ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ. ಆ ಆಟಗಾರ ಯಾರು? ಮುಂದೆ ಓದಿ..

ಚೋಪ್ರ ಹೇಳಿದ್ದು ಆರ್ ಅಶ್ವಿನ್ ಬಗ್ಗೆ
ಕಾಮೆಂಟೇಟರ್ ಆಕಾಶ್ ಚೋಪ್ರ ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಟೀಮ್ ಇಂಡಿಯಾದ ಮಾಂತ್ರಿಕ ಸ್ಪಿನ್ನರ್, ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಬಗ್ಗೆ. ಆರ್ ಅಶ್ವಿನ್ ಭಾರತ ಕಂಡಅತಿ ದೊಡ್ಡ ಮ್ಯಾಚ್ ವಿನ್ನರ್‌ಗಳ ಪೈಕಿ ಒಬ್ಬರು ಎನಿಸಿಕೊಂಡಿದ್ದರು ಕೂಡ ಅವರ ಸಾಧನೆಯನ್ನು ಭಾರತೀಯರು ಹೆಚ್ಚಾಗಿ ಸಂಭ್ರಮಿಸಿಲ್ಲ ಎಂದಿದ್ದಾರೆ. ಆರ್ ಅಶ್ವಿನ್ ಇತ್ತೀಚೆಗೆ ಅತ್ಯಂತ ವೇಗವಾಗಿ 450 ಟೆಸ್ಟ್ ವಿಕೆಟ್ ಪಡೆದ ಭಾರತೀಯ ಆಟಗಾರ ಎನಿಸಿಕೊಂಡಿದ್ದು ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ಅಶ್ವಿನ್ ತಮ್ಮ ಸಾಧನೆಯ ಪಟ್ಟಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಶ್ವಿನ್ ಸಾಧನೆಯನ್ನು ಸಂಭ್ರಮಿಸಿದ್ದು ಕಡಿಮೆ ಎಂದಿದ್ದಾರೆ ಆಕಾಶ್ ಚೋಪ್ರ.

ಅಂದು ಕುಂಬ್ಳೆ ಇಂದು ಅಶ್ವಿನ್
"ರವಿಚಂದ್ರನ್ ಅಶ್ವಿನ್ 450 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ದುರದೃಷ್ಟವಶಾತ್ ನಾವು ಅವರನ್ನು ಇನ್ನು ಕೂಡ ಸಂಭ್ರಮಿಸಿದ್ದು ಕಡಿಮೆ. ರೋಹಿತ್ ಶರ್ಮಾ ಟೆಸ್ಟ್ ಆರಂಭಿಕನಂತೆಯೇ ರವಿಚಂದ್ರನ್ ಅಶ್ವಿನ್ ಟೆಸ್ಟ್ ಬೌಲರ್. ಆತ ಕೂಡ ಭಾರತ ಕಂಡ ಅತ್ಯುತ್ತಮ ಮ್ಯಾಚ್ ವಿನ್ನರ್. ಅಂದು ಕುಂಬ್ಳೆಯರು ಈಗ ರವಿಚಂದ್ರನ್ ಅಶ್ವಿನ್" ಎಂದು ಉಲ್ಲೇಖಿಸಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರ, ಅಶ್ವಿನ್ ವಿಚಾರವಾಗಿ ವಿಶೇಷ ಮಾತುಗಳನ್ನಾಡಿದ್ದಾರೆ.

ಇತರ ಸ್ಪಿನ್ನರ್‌ಗಳಿದ್ದರೂ ಅಶ್ವಿನ್ ಅವರೇ ಮಿಂಚುತ್ತಾರೆ
ಇನ್ನು ಇದೇ ಸಂದರ್ಭದಲ್ಲಿ ಚೋಪ್ರ, ತಂಡದಲ್ಲಿ ಇತರ ಸ್ಪಿನ್ನರ್‌ಗಳು ಇದ್ದರು ಕೂಡ ಆರ್ ಅಶ್ವಿನ್ ಅವರೇ ಬಹುತೇಕ ಮಿಂಚುತ್ತಾರೆ ಎಂದು ಉಲ್ಲೇಖಿಸಿದ್ದಾರೆ. "ಬಹಳ ಕ್ರಿಕೆಟರ್‌ಗಳ ಬಳಿ ನೀವು ಕ್ರಿಕೆಟ್ ಬಗ್ಗೆ ಹೆಚ್ಚಾಗಿ ಚರ್ಚಿಸಿದಾಗ ಅವರು ಆ ಪಿಚ್ ಚೆನ್ನಾಗಿಲ್ಲ, ಅಲ್ಲಿ ನೀವು ಬೌಲಿಂಗ್ ಮಾಡಿದರೆ ನೀವು ಕೂಡ ವಿಕೆಟ್ ಪಡೆಯುತ್ತೀರಿ ಎನ್ನುತ್ತಾರೆ. ಆದರೆ ಎಲ್ಲರು ಕೂಡ ವಿಕೆಟ್ ಪಡೆಯಲು ಸಾಧ್ಯವಾಗುವುದಿಲ್ಲ. ಪಂದ್ಯವೊಂದರಲ್ಲಿ ನಾಲ್ಕರಿಂದ ಐವರು ಸ್ಪಿನ್ನರ್‌ಗಳು ಆಡಿದರು ಕೂಡ ಅಶ್ವಿನ್ ಮಾತ್ರ ಅತೀ ಹೆಚ್ಚಿನ ವಿಕೆಟ್ ಪಡೆದುಕೊಳ್ಳುತ್ತಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

ದೆಹಲಿಯಲ್ಲಿ ನಡೆಯಲಿದೆ 2ನೇ ಟೆಸ್ಟ್
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಮೂರನೇ ದಿನಕ್ಕೆ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರ್ಜರಿ ಪ್ರದರ್ಶನದಿಂದಾಗಿ ಇನ್ನಿಂಗ್ಸ್ ಹಾಗೂ 132 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯಲಿದ್ದು ಈ ಪಂದ್ಯಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಸದ್ಯ 1-0 ಅಂತರದಿಂದ ಮುನ್ನಡೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications