ಶ್ರೀಲಂಕಾ ವಿರುದ್ಧದ ಸರಣಿಗೆ ತಂಡವನ್ನು ಹೆಸರಿಸಿದ ಆಕಾಶ್ ಚೋಪ್ರ: ನಾಯಕ ಯಾರು ಗೊತ್ತಾ!

ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿರುವಂತೆಯೇ ಈ ಸರಣಿಯ ಮೇಲೆ ಸಾಕಷ್ಟು ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೆ ಎಲ್ ರಾಹುಲ್ ಅವರಂತಾ ಆಟಗಾರರು ಇಲ್ಲದ ತಂಡ ಹೇಗಿರಲಿದೆ? ಯಾರು ತಂಡವನ್ನು ಮುನ್ನಡೆಸಲಿದ್ದಾರೆ? ಯಾರ್ಯಾರು ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಸಿಗಬೇಕಾಗಿದೆ.
ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಆಕಾಶ ಚೋಪ್ರ ಸೀಮಿತ ಓವರ್‌ಗಳ ಸರಣಿಗೆ ಭಾರತೀಯ ತಂಡವನ್ನು ಹೆಸರಿಸಿದ್ದಾರೆ. ಸಾಕಷ್ಟು ಹೊಸಬರನ್ನೇ ಕೂಡಿರುವ ಈ ತಂಡ ನಿಜಕ್ಕೂ ಬಲಿಷ್ಠವಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ ಹಾಗೂ ರಾಷ್ಟ್ರೀಯ ತಂಡಗಳಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಈ ತಂಡವನ್ನು ಆಯ್ಕೆ ಮಾಡಲಾಗಿದೆ.

ನಾಯಕನಾಗಿ ಶಿಖರ್ ಧವನ್
ಶ್ರೀಲಂಕಾ ವಿರುದ್ಧದ ಈ ಸರಣಿಗೆ ನಾಯಕ ಯಾರು ಎಂಬುದು ಈಗ ಪ್ರಮುಖವಾಗಿರುವ ಪ್ರಶ್ನೆಯಾಗಿದೆ. ಅನುಭವಿ ಶಿಖರ್ ಧವನ್ ಹಾಗೂ ಯುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರಿಗಳಾಗಿದೆ. ಆಕಾಶ್ ಚೋಪ್ರಾ ಅನುಭವಿ ಶಿಖರ್ ಧವನ್ ಅವರನ್ನು ನಾಯಕತ್ವಕ್ಕೆ ಸೂಕ್ತ ಎಂದು ಪರಿಗಣಿಸಿದ್ದಾರೆ.

ಮಧ್ಯಮ ಹಾಗೂ ಕೆಳ ಕ್ರಮಾಂಕ
ಇನ್ನು ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರನ್ನು ಚೋಪ್ರಾ ಆಯ್ಕೆ ಮಾಡಿದರೆ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರನ್ನು ಹೆಸರಿಸಿದ್ದಾರೆ. ಇಬ್ಬರು ಆಲ್‌ರೌಂಡರ್‌ಗಳ ಬಲ ತಂಡಕ್ಕೆ ದೊರೆಯಲಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಉಪನಾಯಕನ ಸ್ಥಾನಕ್ಕೆ ಸೂಕ್ತ ಎಂದಿದ್ದಾರೆ ಆಕಾಶ್ ಚೋಪ್ರ.

ಬಲಿಷ್ಠ ಬೌಲಿಂಗ್ ಪಡೆ
ಆಡುವ ಬಳಗದಲ್ಲಿ ಬೌಲರ್‌ಗಳಾಗಿ ಯುಜುವೇಂದ್ರ ಚಾಹಲ್, ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಪ್ರಮುಖ ಬೌಲರ್‌ಗಳಾಗಿ ಆಕಾಶ್ ಚೋಪ್ರ ಹೆಸರಿದ್ದಾರೆ. ಒಟ್ಟು 17 ಆಟಗಾರರ ಸಂಭಾವ್ಯ ತಂಡವನ್ನು ಆಕಾಶ್ ಚೋಪ್ರ ಈ ಪ್ರವಾಸಕ್ಕೆ ಹೆಸರಿಸಿದ್ದಾರೆ. ಗಾಯಗೊಂಡಿರುವ ಶ್ರೇಯಸ್ ಐಯ್ಯರ್, ಟಿ ನಟರಾಜನ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಮೀಸಲು ಬೌಲರ್ ಆಗಿ ಆಯ್ಕೆಯಾಗಿರುವ ಪ್ರಸಿದ್ಧ ಕೃಷ್ಣ ಅವರನ್ನು ಚೋಪ್ರ ಈ ತಂಡದಲ್ಲಿ ಹೆಸರಿಸಿದ್ದು ಈ ಆಟಗಾರರು ಶ್ರೀಲಂಕಾ ಪ್ರವಾಸದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿದೆ.

ಚೋಪ್ರ ಹೆಸರಿಸಿದ ಟೀಮ್ ಇಂಡಿಯಾ ಸಂಭಾವ್ಯ ತಂಡ
ಆಕಾಶ್ ಚೋಪ್ರ ಹೆಸರಿಸಿದ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾ ಸ್ಕ್ವಾಡ್:
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಕೃನಾಲ್ ಪಾಂಡ್ಯ, ಯುಜುವೇಂದ್ರ ಚಾಹಲ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಟಿ ನಟರಾಜನ್, ರಾಹುಲ್ ಚಾಹರ್, ವರುಣ್ ಚಕ್ರವರ್ತಿ, ಸಂಜು ಸ್ಯಾಮ್ಸನ್, ದೀಪಕ್ ಹೂಡ, ಪ್ರಸಿದ್ಧ್ ಕೃಷ್ಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications