For Quick Alerts
ALLOW NOTIFICATIONS  
For Daily Alerts
 

ನಿಮ್ಮ ಪರಂಪರೆಯನ್ನು ವಿಶ್ವ ನೆನಪಿಟ್ಟುಕೊಳ್ಳಲಿದೆ: ರೋಹಿತ್ ಶರ್ಮಾ ಬಗ್ಗೆ ಆಕಾಶ್ ಚೋಪ್ರ ಮೆಚ್ಚುಗೆಯ ಸುರಿಮಳೆ

ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದ ಬಳಿಕ ಆಕಾಶ್ ಚೋಪ್ರ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳ ಅಂತರದಿಂದ ಮಣಿಸಿದ್ದು ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಮತ್ತಷ್ಟು ಸನಿಹಕ್ಕೆ ತಲುಪಿದೆ.

ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತ್ತು. ಅದಾದ ಬಳಿಕ ಕಿವೀಸ್ ಪಡೆಯನ್ನು 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟ್ ಮಾಡಿದೆ. ಈ ಭರ್ಜರಿ ಗೆಲುವಿನ ಬಳಿಕ ಆಕಾಶ್ ಚೋಪ್ರ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕನಾಗಿ ರೋಹಿತ್ ನೆನಪಿಡುವ ಪರಂಪರೆಯನ್ನು ಬಿಡುತ್ತಾರೆ ಎಂದಿದ್ದಾರೆ ಚೋಪ್ರಾ.

Aakash Chopra praises Rohit Sharma said World will remember your legacy

"ಈ ಪಂದ್ಯದಲ್ಲಿ ಟಾಸ್ ಗೆಲ್ಲಬೇಕು ಆಮೂಲಕ ಮೊದಲಿಗೆ ಬ್ಯಾಟಿಂಗ್ ನಡೆಸಬೇಕು ಎಂದು ಚರ್ಚೆಗಲು ಆಗಿದ್ದವು. ಅದು ಸಾಧ್ಯವಾಯಿತು. ಉತ್ತಮ ನಾಯಕ ಎಂದರೆ ಅತ್ಯುತಯ್ತಮ ಕೌಶಲ್ಯಗಳನ್ನು ಹೊಂದಿರುವುದು ಮಾತ್ರವಲ್ಲ ಅದೃಷ್ಟ ಕೂಡ ಆತನ ಜೊತೆಗಿರಬೇಕಾಗುತ್ತದೆ. ದೇವರು ಆತನ ಜೊತೆಗಿದ್ದು ಆತನ ಹೆಸರಿಗೆ ವಿಶ್ವಕಪ್ ಬರಲಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

"ಕಳೆದ ವಿಶ್ವಕಪ್‌ನಲ್ಲಿ ವೈಯಕ್ತೊಕವಾಗಿ ಅವರಿಂದ ಅದ್ಭುತವಾದ ಪ್ರದರ್ಶನ ಬಂದಿತ್ತು. ಐದು ಶತಕಗಳನ್ನು ಬಾರಿಸಿದ್ದರು. ಆದರೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು 2011ರ ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಆದರೆ ಈ ಬಾರಿ 2023ರ ವಿಶ್ವಕಪ್ ನಿಮ್ಮದೇ ರೋಹಿತ್. ಇಡೀ ಜಗತ್ತು ನೆನಪಿಡುವಂಥಾ ನಾಯಕತ್ವದ ಪರಂಪರೆಯನ್ನು ನೀವು ಸೃಷ್ಟಿಸಲಿದ್ದೀರಿ" ಎಂದಿದ್ದಾರೆ ಆಕಾಶ್ ಚೋಪ್ರ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ವತಃ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಾಯಕನಾಗಿ ರೋಹಿತ್ ಶರ್ಮಾ ಟೂರ್ನಿಯಲ್ಲಿ ಪ್ರದರ್ಶಿಸಿದ ಆಕ್ರಮಣಕಾರಿ ಆಟವನ್ನು ಕಿವೀಸ್ ವಿರುದ್ಧವೂ ಮುಂದುವರಿಸಿದರು. ಟಿಮ್ ಸೌಥಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸುವ ಮುನ್ನ ರೋಹಿತ್ 29 ಎಸೆತಗಳಲ್ಲಿ 47 ರನ್‌ಗಳನ್ನು ಬಾರಿಸಿ ಸ್ಪೋಟಕ ಆರಂಬ ಒದಗಿಸಿದರು.

ಇದೀಗ ಭಾರತ ತನ್ನ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ಈ ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯ ಆಯೋಜನೆಯಾಗಲಿದ್ದು ಈ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಎದುರಾಳಿಯಾಗಲಿದೆ.

Story first published: Thursday, November 16, 2023, 14:39 [IST]
Other articles published on Nov 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+