For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ತಂಡದಲ್ಲಿ ಆತನನ್ನು ಕಡೆಗಣಿಸಲು ಸಾಧ್ಯವೇ ಇಲ್ಲ: ಚೋಪ್ರ ಹೀಗಂದಿದ್ದು ಯಾರ ಬಗ್ಗೆ ಗೊತ್ತಾ!!

ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇದೀಗ ಟಿ20 ಸರಣಿಗೆ ಸಿದ್ಧವಾಗಿದೆ. ಇನ್ನು ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿರುವ ಓರ್ವ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ವಿಶೇಷ ಮಾತುಗಳನ್ನಾಡಿದ್ದು ಮುಂಬರುವ ವಿಶ್ವಕಪ್ ತಂಡದಲ್ಲಿ ಆಡನ್ನು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅಂದಹಾಗೆ ಆಕಾಶ್ ಚೋಪ್ರ ಹೀಗೆ ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಅಂತಿಮ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆಟಗಾರ ಸಂಜು ಸ್ಯಾಮ್ಸನ್ ವಿಚಾರವಾಗಿ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರ ಅಂತಿಮ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಅವರನ್ನು ಭಾರೀ ಪ್ರಶಂಸಿಸಿದ್ದಾರೆ.

Aakash Chopra praises Sanju Samson said You cannot ignore him at all for World Cup

ಅಂದಹಾಗೆ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಏಕಜದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದು ಅವಕಾಶ ಸಿಕ್ಕಾಗಲೆಲ್ಲಾ ಮಿಂಚಿದ್ದಾರೆ. ಕೇವಲ 13 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರೂ 55.71ರ ಸರಾಸರಿಯಲ್ಲಿ 390 ರನ್‌ಗಳನ್ನು ಗಳಿಸಿದ್ದಾರೆ. ನಾಲ್ಕು ಐದು ಮತ್ತಯ ಆರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದುಕೊಂಡಾಗ ಸಂಜು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮೂರು ಅರ್ಧ ಶತಕಗಳನ್ನು ಅವರು ಬಾರಿಸಿದ್ದು 104ರಷ್ಟು ಉತ್ತಮ ಸ್ಟ್ರೈಕ್‌ರೇಟ್ ಕೂಡ ಹೊಂದಿದ್ದಾರೆ.

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧ ಶತಕ ಸಿಡಿಸಿರುವ ಕಾರಣ ವಿಶ್ವಕಪ್ ತಂಡದಲ್ಲಿ ಸ್ಥಾಮ ಪಡೆಯುವ ಸ್ಪರ್ಧೆಯಲ್ಲಿ ಸಂಜು ಉಳಿದುಕೊಳ್ಳಲಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ. ವಿಶ್ವಕಪ್‌ ತಂಡದಲ್ಲಿ ಸ್ಥಾನವನ್ನು ಪಡೆಯಲು ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯೆ ನೇರಸ್ಪರ್ಧೆಯಿದ್ದು ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

"ಸಂಜು ಸ್ಯಾಮ್ಸನ್ ಬಗ್ಗೆ ಪ್ರಶ್ನೆಗಳು ಆಗಾಗ ಕೇಳಿಬರುತ್ತಲೇ ಇದೆ. ಕಳೆದ ಪಂದ್ಯದಲ್ಲಿ ಆತ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ತನ್ನದೇ ಶೈಲಿಯಲ್ಲಿ ಆತ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಸೂಕ್ತವಾದ ಸ್ಥಾನದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದು ಇದು ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅವಕಾಶ ನೀಡಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

"ಆತ ಟಿ20 ಸರಣಿಯಲ್ಲಿಯೂ ಆಡಲಿದ್ದಾರೆ. ಒಂದು ಪಂದ್ಯದಲ್ಲಿ ವಿಫಲವಾದರೂ ಕೂಡ ಮತ್ತೊಂದು ಪಂದ್ಯದಲ್ಲಿ ರನ್‌ಗಳಿಸಲಿದ್ದಾರೆ. ಯಾರು ಕೂಡ ಕೆಟ್ಟಪಂದ್ಯವನ್ನು ಹೊಂದಬಹುದಾಗಿರುವ ಕಾರಣ ನಾನು ರನ್‌ಗಳ ಕಡೆಗೆ ಗಮನಹರಿಸುತ್ತೇನೆ. ಆತನಲ್ಲಿ ರನ್‌ಗಳಿಸುವ ಸಾಮರ್ಥ್ಯ ಹಾಗೂ ರನ್‌ಗಳಿಸುವ ರೀತಿ ವಿಶೇಷವಾದದ್ದು. ಕೊನೆಯ ಪಂದ್ಯದಲ್ಲಿ ಆತ ಅದ್ಭುತವಾದ ಅರ್ಧ ಶತಕ ಸಿಡಿಸಿದ್ದಾರೆ. ಹಾಗಾಗಿ ವಿಶ್ವಕಪ್ ತಂಡದಿಂದ ಆತನನ್ನು ಸುಲಭವಾಗಿ ಹೊರಗಿಡಲು ಸಾಧ್ಯವಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

Story first published: Wednesday, August 2, 2023, 15:54 [IST]
Other articles published on Aug 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+