ರೀಟೈನ್ ಮಾಡಿಕೊಂಡ ಈ ಆಟಗಾರನನ್ನು ಹರಾಜಿಗೆ ಬಿಡುಗಡೆಗೊಳಿಸಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ

ಐಪಿಎಲ್ 15ನೇ ಆವೃತ್ತಿ ಮುಕ್ತಾಯವಾಗಿದ್ದು ಈ ಬಾರಿಯ ಆವೃತ್ತಿಯಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಬಗ್ಗೆ ವಿಮರ್ಶೆಗಳು ಜೋರಾಗಿ ನಡೆಯುತ್ತಿದೆ. ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಕೆಲ ಆಟಗಾರರಿಂದ ನೀರಸ ಪ್ರದರ್ಶನ ಬಂದಿದೆ. ಆರ್‌ಸಿಬಿ ತಂಡದಲ್ಲಿಯೂ ದೊಡ್ಡ ಮಟ್ಟದ ನಿರೀಕ್ಷೆಯಿಟ್ಟುಕೊಂಡಿದ್ದ ಕೆಲವು ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ವಿಫಲವಾಗಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ರೀಟೈನ್ ಮಾಡಿಕೊಂಡಿದ್ದ ಆಟಗಾರರ ಪೈಕಿ ಓರ್ವ ಆಟಗಾರನನ್ನು ಮುಂದಿನ ಆವೃತ್ತಿಗೆ ಮುನ್ನ ಬಿಡುಗಡೆಗೊಳಿಸಬೇಕು ಎಂಬ ಅಭಿಪ್ರಾಯವನ್ನು ಆಕಾಶ್ ಚೋಪ್ರ ವ್ಯಕ್ತಪಡಿಸಿದ್ದಾರೆ. ಹರಾಜಿನಲ್ಲಿ ಆ ಆಟಗಾರನನ್ನು ಕಡಿಮೆ ಮೊತ್ತಕ್ಕೆ ಮತ್ತೆ ಸೇರ್ಪಡೆಗೊಳಿಸಬಹುದು ಎಂದಿದ್ದಾರೆ ಆಕಾಶ್ ಚೋಪ್ರ. ಹಾಗಾದರೆ ಆಕಾಶ್ ಚೋಪ್ರ ಹೇಳಿದ ಆ ಆಟಗಾರ ಯಾರು? ಮುಂದೆ ಓದಿ..

ಸಿರಾಜ್ ಬಗ್ಗೆ ಆಕಾಶ್ ಚೋಪ್ರ ಮಾತು
ಆರ್‌ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಈ ಮಾತನ್ನು ಆಡಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ. ಈ ಬಾರಿಯ ಆವೃತ್ತಿಯಲ್ಲಿ ಚೋಪ್ರ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಈ ಆವೃತ್ತಿಯಲ್ಲಿ ಅವರನ್ನು ಹರಾಜಿಗೆ ಬಿಡುಗಡೆಗೊಳಿಸುವುದು ಉತ್ತಮ ಎಂದಿದ್ದಾರೆ. "ಮೊಹಮ್ಮದ್ ಸಿರಾಜ್ ಅವರನ್ನು 7 ಕೋಟಿ ಮೊತ್ತಕ್ಕೆ ರೀಟೈನ್ ಮಾಡಲಾಗಿದೆ. ಅವರನ್ನು ನೀವು ಬಿಡುಗಡೆಗೊಳಿಸಬಹುದು. ಯಾರನ್ನು ನೀವು ಮರಳಿ ಸೇರ್ಪಡೆಗೊಳಿಸಬಹುದು ಎಂಬುದ ದೊಡ್ಡ ಪ್ರಶ್ನೆ. ಯಾಕೆಂದರೆ ನೀವು ಭಾರತೀಯ ವೇಗಿಯನ್ನೇ ಸೇರ್ಪಡೆಗೊಳಿಸಬೇಕಾಗುತ್ತದೆ. ನೀವು ಅವರನ್ನೇ ಕಡಿಮೆ ಮೊತ್ತಕ್ಕೆ ಸೇರ್ಪಡೆಗೊಳಿಸಬಹುದು. ಅವರು ಇನ್ನು 7 ಕೋಟಿ ಮೊತ್ತಕ್ಕೆ ಹರಾಜಾಗಲಾರರು" ಎಂದಿದ್ದಾರೆ ಆಕಾಶ್ ಚೋಪ್ರ.

ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಸಿರಾಜ್
ಈ ಬಾರಿಯ ಆವೃತ್ತಿಯಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. 15 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಗಳಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಕಢವಲ 9 ವಿಕೆಟ್ ಪಡೆಯಲು ಮಾತ್ರವೇ ಯಶಸ್ವಿಯಾಗಿದ್ದಾರೆ. ಸರಾಸರಿ 10ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿರುವುದು ಅವರು ಎಷ್ಟು ದುಬಾರಿಯಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಆರ್‌ಸಿಬಿ ರೀಟೈನ್ ಮಾಡಿದ್ದ 3 ಆಟಗಾರರಲ್ಲಿ ಸಿರಾಜ್ ಒಬ್ಬರು
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭದಲ್ಲಿ ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶ ತಂಡಗಳಿಗಿತ್ತು. ಆದರೆ ಆರ್‌ಸಿಬಿ ತಂಡ ಮೂವರು ಆಟಗಾರರನ್ನು ಮಾತ್ರವೇ ರೀಟೈಮ್ ಮಾಡಿಕೊಂಡಿತ್ತು. ವಿರಾಟ್ ಕೊಹ್ಲಿ ಮೊದಲ ಆಯ್ಕೆಯ ಆಟಗಾರನಾಗಿ ರೀಟೈನ್ ಆಗಿದ್ದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಎರಡನೇ ಆಯ್ಕೆಯ ಆಟಗಾರನನ್ನಾಗಿ ಆರ್‌ಸಿಬಿ ರೀಟೈನ್ ಮಾಡಿಕೊಂಡಿತ್ತು. ವೇಗಿಗಳ ಪೈಕಿ ಮೊಹಮ್ಮದ್ ಸಿರಾಜ್ ಅವರನ್ನು 7 ಕೋಟಿ ಮೊತ್ತ ರೀಟೈನ್ ಮಾಡಿಕೊಂಡಿತ್ತು.

ಅನುಜ್ ರಾವತ್ ಕೂಡ ಬಿಡುಗಡೆಯಾಗಲಿ ಎಂದ ಚೋಪ್ರ
ಆಕಾಶ್ ಚೋಪ್ರ ಈ ಸಂದರ್ಭದಲ್ಲಿ ಆರ್‌ಸಿಬಿ ತಂಡ ಬಿಡುಗಡೆಗೊಳಿಸಬೇಕಿರುವ ಮತ್ತೋರ್ವ ಆಟಗಾರನನ್ನು ಹೆಸರಿಸಿದ್ದಾರೆ. ಅದು ಯುವ ಆಟಗಾರ ಅನುಜ್ ರಾವತ್. "ನೀವು ಅನುಜ್ ರಾವತ್ ಮೇಲೆ 3.4 ಕೋಟಿ ಹೂಡಿದ್ದೀರಿ. ಆದರೆ ಅವರು ಒಂದು ಉತ್ತಮ ಇನ್ನಿಂಗ್ಸ್ ಆಡಲು ಮಾತ್ರವೇ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಆರಂಭಿಕನಾಗಿ ಕಣಕ್ಕಿಳಿಯುವ ಕಾರಣ ಅನುಜ್ ರಾವತ್ ಅವರನ್ನು ಬಿಡುಗಡೆಗೊಳಿಸಬಹುದು. ಅಂದರೆ ಇಬ್ಬರು ಆಟಗಾರರಿಂದ 10.5 ಕೋಟಿಯಷ್ಟು ಮುಂದಿನ ಹರಾಜಿಗೆ ಉಳಿದಿಕೊಳ್ಳಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications