ಈ ಆಟಗಾರ ವಿಶ್ವಕಪ್ ರೇಸ್‌ನಲ್ಲಿ ಹಿಂದೆ ಬಿದ್ದಾಗಿದೆ: ಯುವ ಆಟಗಾರನ ಬಗ್ಗೆ ಆಕಾಶ್ ಚೋಪ್ರ ಅಭಿಪ್ರಾಯ

ಟಿ20 ವಿಶ್ವಕಪ್ ಹತ್ತಿರವಾಗುತ್ತಿರುವಂತೆಯೇ ಭಾರತ ತಂಡದಲ್ಲಿ ಯಾವೆಲ್ಲಾ ಆಟಗಾರರು ಅವಕಾಶ ಪಡೆಯಬಹುದು ಎಂಬ ಚರ್ಚೆಗಳು ಹೆಚ್ಚಾಗಿದೆ. ಅದರಲ್ಲೂ ಸ್ಪರ್ಧೆಗಳು ಹೆಚ್ಚಾಗಿರುವ ಕಾರಣ ಕೆಲ ಸ್ಥಾನಗಳಿಗೆ ತೀವ್ರ ಸ್ಪರ್ಧೆಗಳಿದ್ದು ಕುತೂಹಲ ಮೂಡಿಸಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಓರ್ವ ಆಟಗಾರ ಈ ಸ್ಪರ್ಧೆಯಲ್ಲಿ ಈಗಾಗಲೇ ಹಿಂದುಳಿದಿದ್ದಾರೆ ಎಂದಿದ್ದಾರೆ.
ಟೀಮ್ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕೆ ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ ಜೊತೆಗೆ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್‌ಗೆ ಇಳಿಯಲು ಕೆಎಲ್ ರಾಹುಲ್, ಇಶಾನ್ ಕಿಶನ್ ಜೊತೆಗೆ ಋತುರಾಜ್ ಗಾಯಕ್ವಾಡ್ ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಈ ಸ್ಪರ್ಧೆಯಲ್ಲಿ ಈಗಾಗಲೇ ಹಿಂದೆ ಬಿದ್ದಿದ್ದಾರೆ ಎಂಬ ಅಭಿಪ್ರಾಯಪಟ್ಟಿದ್ದಾರೆ ಆಕಾಶ್ ಚೋಪ್ರ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೈಫಲ್ಯ
ಋತುರಾಜ್ ಗಾಯಕ್ವಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಲು ವಿಫಲವಾಗಿರುವುದನ್ನು ಆಕಾಶ್ ಚೋಪ್ರ ಪ್ರಮುಖವಾಗಿ ಬೊಟ್ಟು ಮಾಡಿದ್ದಾರೆ. ಅಲ್ಲದೆ ಯಾವೆಲ್ಲಾ ಆಟಗಾರರು ಲಭ್ಯವಾಗಲಿದ್ದಾರೆ ಎಂಬ ಬಗ್ಗೆಯೂ ಚೋಪ್ರ ಮಾತನಾಡಿದ್ದು ಅಗ್ರ ಕ್ರಮಾಂಕದಲ್ಲಿ ಆಡುವ ಆಟಗಾರರ ಸ್ಪರ್ಧೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದಿದ್ದಾರೆ. ಹೀಗಾಗಿ ಋತುರಾಜ್ ಗಾಯಕ್ವಾಡ್ ಈ ಸ್ಒರ್ಧೆಯಿಂದ ಹಿಂದಿರುಗುವ ಸಂದರ್ಭ ಬರಬಹುದು ಎಂದಿದ್ದಾರೆ ಆಕಾಶ್ ಚೋಪ್ರ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಿರಾಸೆ
ಇತ್ತೀಚೆಗೆ ತವರಿನಲ್ಲಿ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಋತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾದರು. ಯುವ ಆರಂಭಿಕ ಆಟಗಾರ ಎಲ್ಲಾ ಐದು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು ಕೂಡ ಕೇವಲ 96 ರನ್ ಮಾತ್ರವೇ ಗಳಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಮಾತ್ರವೇ ಸಾಮರ್ರ್ಥಯಕ್ಕೆ ತಕ್ಕ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಆದರೆ ಒಟ್ಟಾರೆಯಾಗಿ ಋತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿ ನಿರಾಸೆ ಮೂಡಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ಚೋಪ್ರ
ಅಗ್ರ ಕ್ರಮಾಂಕಕ್ಕಾಗಿ ಸಾಕಷ್ಟು ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿದೆ. ಅಷ್ಟು ಆಟಗಾರರು ಆ ಸ್ಥಾನಗಳಿಗಾಗಿದ್ದಾರೆ. ಆರಂಭಿಕರಿಗಂತೂ ಅಲ್ಲಿ ಸ್ಥಾನವೇ ಇಲ್ಲ. ಆ ದೃಷ್ಟಿಯಿಂದ ನೋಡಿದರೆ ಋತುರಾಜ್ ಗಾಯಕ್ವಾಡ್ ಈಗಾಗಲೇ ಹಿಂದೆ ಬಿದ್ದಿದ್ದಾರೆ. ಕಳೆದ ಸರಣಿಯಲ್ಲಿ ಬಹುತೇಕರು ನಾಲ್ಕು ಇನ್ನಿಂಗ್ಸ್‌ನಲ್ಲಿ ಮಾತ್ರವೇ ಆಡಿದ್ದರೆ ಋತುರಾಜ್ ಗಾಯಕ್ವಾಡ್ ಮಾತ್ರ ಐದು ಇನ್ನಿಂಗ್ಸ್‌ನಲ್ಲಿಯೂ ಆಡಿದ್ದಾರೆ. ಮಳೆಯಿಂದ ರದ್ದಾದ ಅಂತಿಮ ಪಂದ್ಯದಲ್ಲಿಯೂ ಅವರು ಕಣಕ್ಕಿಳಿದು ಔಟಾಗಿದ್ದಾರೆ" ಎಂದು ಋತುರಾಜ್ ಗಾಯಕ್ವಾಡ್ ಪ್ರದರ್ಶನದ ಬಗ್ಗೆ ಆಕಾಶ್ ಚೋಪ್ರ ಬೇಸರದ ಮಾತುಗಳನ್ನಾಡಿದ್ದಾರೆ.

ಎಷ್ಟು ಜನ ಆರಂಭಿಕರಾಗಿ ಕಣಕ್ಕಿಳಿಯಲು ಸಾಧ್ಯ?
ಇನ್ನು ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಇರುವ ಎರಡು ಆರಂಭಿಕ ಸ್ಥಾನದಲ್ಲಿ ಎಷ್ಟು ಆಟಗಾರರು ಕಣಕ್ಕಿಳಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. "ಕೆಲವರು ವಿರಾಟ್ ಕೊಹ್ಲಿ ಆರಂಬಿಕ ಆಟಗಾರನಾಗಿ ಕಣಕ್ಕಿಳಿಯಬಹುದು ಎನ್ನುತ್ತಾರೆ. ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕಾರಣ ಇಲ್ಲಿಯೂ ಆ ಸ್ಥಾನದಲ್ಲಿ ಆಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ರೋಹಿತ್ ಶರ್ಮಾ, ಇಶಾನ್ ಕಿಶನ್, ಕೆಎಲ್ ರಾಹುಲ್ ಕೂಡ ಆರಂಭಿಕನಾಗಿ ಆಡಬಹುದು. ಆಗಾದರೆ ಎಷ್ಟು ಜನ ಆರಂಭಿಕರಾಗಿ ಕಣಕ್ಕಿಳಿಯಬಹುದು?. ಒಂದು ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಕೂಡ ಆರಂಭಿಕನಾಗಿ ಕಣಕ್ಕಿಳಿಸಲಾಗಿದೆ" ಎಂದು ಆರಂಭಿಕ ಸ್ಥಾನಕ್ಕೆ ಇರುವ ಪೈಪೋಟಿಯ ಬಗ್ಗೆ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications