For Quick Alerts
ALLOW NOTIFICATIONS  
For Daily Alerts
 

ಉಮ್ರಾನ್ ಮಲಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಇನ್ನೂ ಸಿದ್ಧವಾಗಿಲ್ಲ ಎಂದ ಆಕಾಶ್ ಚೋಪ್ರ

Aakash Chopra said Umran Malik not yet ready for international cricket

ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಭಾರತ ತಮಡಕ್ಕೆ ಆಯ್ಕೆಯಾಗಿರುವ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಉಮ್ರಾನ್ ಅಂತಾರಾಷ್‌ಟರೀಯ ಕ್ರಿಕೆಟ್‌ನಲ್ಲಿ ಆಡಲು ಇನ್ನೂ ಸಿದ್ಧವಾಗಿಲ್ಲ ಎಂದಿದ್ದಾರೆ.

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿರುವ ಉಮ್ರಾನ್ ಮಲಿಕ್ ತಮ್ಮ ವೇಗದಿಂದಾಗಿ ಎಲ್ಲರ ಗಮನಸೆಳೆದಿದ್ದರು. ವೇಗದ ಬೌಲಿಂಗ್‌ನ ಜೊತೆಗೆ ವಿಕೆಟ್ ಕಬಳಿಸುವುದರಲ್ಲಿಯೂ ಉಮ್ರಾನ್ ಮೇಲುಗೈ ಸಾಧಿಸಿದ್ದರು. ಐಪಿಎಲ್‌ನಲ್ಲಿ ಆಡಿದ್ದ 14 ಪಂದ್ಯಗಳಲ್ಲಿ 20.18ರ ಸರಾಸರಿಯಲ್ಲಿ 22 ವಿಕೆಟ್ ಸಂಪಾದಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಕಳೆದ ಐಲೆಂಡ್ ಪ್ರವಾಸದಲ್ಲಿ ಭಾರತ ತಂಡಕ್ಕೆ ಪದಾರ್ಪಣೆಯನ್ನು ಕೂಡ ಮಾಡಿದ್ದಾರೆ ಉಮ್ರಾನ್.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉಮ್ರಾನ್ ಮಲಿಕ್ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರ ಅವರು ಅದ್ಭುತವಾದ ವೇಗವನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದ್ದಾರೆ. "ಉಮ್ರಾನ್ ಮಲಿಕ್ ಅವರಲ್ಲಿ ಇತರರಲ್ಲಿ ಇರದಂತಾ ಅದ್ಭುತವಾದ ವೇಗವಿದೆ. ಅದನ್ನು ನೀವು ಯಾರಿಗೂ ಹೇಳಿಕೊಡಲು ಸಾಧ್ಯವಿಲ್ಲ. ಲೈನ್, ಲೆಂತ್, ಯಾರ್ಕರ್, ಬೌನ್ಸರ್, ಸ್ಲೋವರ್ ಎಸೆತಗಳನ್ನು ನೀವು ಕಲಿಸಿಕೊಡಬಹುದು. ಆದರೆ ಹೇಗೆ ವೇಗವಾಗಿ ಬೌಲಿಂಗ್ ಮಾಡುವುದು ಎಂಬುದನ್ನು ಹೇಳಿಕೊಡಲು ಸಾಧ್ಯವಿಲ್ಲ. ನೀವು ಹುಟ್ಟು ವೇಗಿಯಾಗಿರಬೇಕು ಇಲ್ಲವೇ ಮಧ್ಯಮವೇಗಿಯಾಗಿರಬೇಕು" ಎಂದಿದ್ದಾರೆ ಆಕಾಶ್ ಚೋಪ್ರ.

ಮುಂದುವರಿದು ಮಾತನಾಡಿದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ 22ರ ಹರೆಯದ ಯುವ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಇನ್ನೂ ಸಿದ್ಧವಾಗಿಲ್ಲ ಎಂದಿದ್ದಾರೆ. ಉಮ್ರಾನ್ ಮಲಿಕ್ ಮತ್ತಷ್ಟು ಸಮಯಾವಕಾಶವನ್ನು ಪಡೆಯಬೇಕು. ಅವರನ್ನೂ ಕಚ್ಚಾ ಉತ್ಪನ್ನವಾಗಿದ್ದು ಇನ್ನಷ್ಟು ಪಳಗಬೇಕಿದೆ ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

"ಅವರಲ್ಲಿ ಅದ್ಭುತವಾದ ವೇಗವಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನನಗೆ ಅನಿಸುವುದು ಏನೆಂದರೆ ಅವರು ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಿದ್ಧವಾಗಿಲ್ಲ ಎಂದು. ತುಂಬಾ ಸುಲಭ, ಅವರಿಗೆ ಸಮಯಾವಕಾಶ ಬೇಕಾಗಿದೆ. ಅವರು ಹೆಚ್ಚಿನ ಕ್ರಿಕೆಟ್‌ಅನ್ನು ಆಡಿಲ್ಲ. ಹಾಗಾಗಿ ಅವರಿಗಿನ್ನೂ ಸಮಯಾವಕಾಶವನ್ನು ನೀಡಬೇಕಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಐಪಿಎಲ್‌ನಲ್ಲಿ ನಿಡಿದ ಪ್ರದರ್ಶನದ ಹಿನ್ನಲೆಯಲ್ಲಿ ಉಮ್ರಾನ್ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಈ ಸರಣಿಯಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟರಾದರೂ ಎರಡನೇ ಪಂದ್ಯದಲ್ಲಿ ಅಂತಿಮ ಓವರ್ ಎಸೆದು ಭಾರತವನ್ನು ಗೆಲ್ಲಿಸಿಕೊಡುವ ಮೂಲಕ ಮಿಂಚಿದ್ದರು. ಅದಾದ ಬಳಿಕ ಇಂಗ್ಲೆಂಡ್ ಪ್ರವಾಸವನ್ನೂ ಕೈಗೊಂಡಿದ್ದರು.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡ ಉಮ್ರಾನ್ ಮಲಿಕ್ ಈ ಅವಕಾಶವನ್ನು ಉತ್ತಮವಾಗಿ ಬಳಿಸಿಕೊಳ್ಳಲು ವಿಫಲವಾದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಮಲಿಕ್ 56 ರನ್ ಬಿಟ್ಟುಕೊಟ್ಟಿದ್ದರು. ಜೇಸನ್ ರಾಯ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್

ಇಂಗ್ಲೆಂಡ್ ಸ್ಕ್ವಾಡ್: ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟೋನ್, ಜೇಸನ್ ರಾಯ್, ಮೊಯಿನ್ ಅಲಿ, ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ಮ್ಯಾಥ್ಯೂ ಪಾರ್ಕಿನ್ಸನ್, ರೀಸ್ ಟೋಪ್ಲಿ, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರೇಗ್ ಓವರ್ಟನ್, ಜಾನಿ ಬೈರ್‌ಸ್ಟೋ, ಬ್ರೈಡನ್ ಕಾರ್ಸೆ

Story first published: Thursday, July 14, 2022, 9:41 [IST]
Other articles published on Jul 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+