Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈತ ಬೌಲರಾ, ಫುಟ್ಬಾಲರಾ?!: ಅಪರೂಪದ ವೀಡಿಯೋ ಹಂಚಿಕೊಂಡ ಚೋಪ್ರಾ

Aakash Chopra shares remarkable video of bowler

ಮುಂಬೈ, ಮಾರ್ಚ್ 18: ಕೊರೊನಾವೈರಸ್‌ನಿಂದಾಗಿ ವಿಶ್ವದ ಕ್ರೀಡಾರಂಗ ಸ್ತಬ್ಧವಾಗುತ್ತಿದೆ. ಕ್ರೀಡಾಪ್ರೇಮಿಗಳು, ಕ್ರಿಕೆಟ್‌ ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದ ಯಾವುದೇ ಪ್ರಮುಖ ಕ್ರೀಡಾಸ್ಪರ್ಧೆಗಳು ನಡೆಯುತ್ತಿಲ್ಲ. ಕ್ರೀಡಾಕೂಟಗಳೇ ಕಾಣಸಿಗದೆ ಕ್ರೀಡಾಪ್ರೇಮಿಗಳು 'ಬೋರು-ಬೇಜಾರು' ಅಂತ ತಮ್ಮೊಳಗೆ ಗೊಣಗುತ್ತಾ ಕುಳಿತುಕೊಳ್ಳುವಂತಾಗಿದೆ. ಇಂಥ ಹೊತ್ತಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಪರೂಪದ ವೀಡಿಯೋ ಹಂಚಿಕೊಂಡಿದ್ದಾರೆ.

ಕಾಮೆಂಟೇಟರ್ ಕೂಡ ಆಗಿರುವ ಆಕಾಶ್ ಚೋಪ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಕ್ರಿಕೆಟಿಗನೊಬ್ಬ ಫುಟ್ಬಾಲ್ ಆಟಗಾರನಲ್ಲಿರಬೇಕಾದ ಕೌಶಲವನ್ನು ಪ್ರದರ್ಶಿಸುವ ದೃಶ್ಯವಿದೆ. ಬೌಲಿಂಗ್ ಮಾಡುವ ಆಟಗಾರ ಆ ಬಳಿಕ ಚೆಂಡಿನೊಂದಿಗೆ ತೋರಿಸುವ ಕೌಶಲ ನಿಜಕ್ಕೂ ಅದ್ಭುತವಾಗಿದೆ.

ಕಾಲುಗಳು ಮತ್ತು ಚೆಂಡಿನೊಂದಿಗೆ ಮಾಡುವ ಈ ಕಸರತ್ತಿಗೆ 'ಕೀಪೀ-ಅಪ್ಪೀಸ್' ಎಂದು ಕರೆಯುತ್ತಾರೆ. ಕಾಲು, ಎದೆ, ಮೊಣಕಾಲು, ಭುಜ, ತಲೆಯನ್ನು ಬಳಸಿ ಚೆಂಡು ಕೆಳಬೀಳದಂತೆ ಮಾಡುವ ಕಸರತ್ತಿದು. ಹೆಚ್ಚಾಗಿ ಫುಟ್ಬಾಲ್ ಆಟಗಾರರು ಇದನ್ನು ಮಾಡುತ್ತಿರುತ್ತಾರೆ.

ಕ್ರಿಕೆಟಿಗ ಇಲ್ಲಿ ಪ್ರದರ್ಶಿಸಿದ ಕೌಶಲ ಥೇಟ್ ಕ್ರಿಸ್ಚಿಯಾನೊ ರೊನಾಲ್ಡೊ ಅವರನ್ನು ನೆನಪಿಸುವಂತಿದೆ. ಹೀಗಾಗಿಯೇ ಹಂಚಿಕೊಳ್ಳಲಾಗಿರುವ ಈ ವೀಡಿಯೋದೊಂದಿಗೆ 'ಈತ ಬೌಲರಾ ಇಲ್ಲ ಕ್ರಿಸ್ಚಿಯಾನೊ ರೊನಾಲ್ಡೊನಾ?' ಎಂದು ಸಾಲೊಂದನ್ನೂ ಬರೆದುಕೊಳ್ಳಲಾಗಿದೆ.

Story first published: Wednesday, March 18, 2020, 17:09 [IST]
Other articles published on Mar 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+