ಬರೋಬ್ಬರಿ 14 ತಿಂಗಳ ಬಳಿಕ ಸ್ಟಾರ್ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಅಫ್ಘಾನಿಸ್ತಾನ ವಿರುದ್ಧದ ಭಾರತದ ಟಿ20 ತಂಡಕ್ಕೆ ಮರಳಿದರು.
ಗುರುವಾರ, ಜನವರಿ 11ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 16 ಆಟಗಾರರ ಭಾರತ ತಂಡವನ್ನು ಭಾನುವಾರದಂದು ಬಹಿರಂಗಪಡಿಸಿದೆ.

ವಿಶೇಷವಾಗಿ, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಇಬ್ಬರೂ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ರಾಷ್ಟ್ರೀಯ ಟಿ20 ತಂಡಕ್ಕೆ 'ಹಿಟ್‌ಮ್ಯಾನ್'ಗೆ ಅವಕಾಶ ಸಿಕ್ಕಿತು.
2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಕ್ತಾಯದ ನಂತರ, ಅನುಭವಿ ಜೋಡಿಯು ಮೊದಲ ಬಾರಿಗೆ ಭಾರತದ ಟಿ20 ತಂಡಕ್ಕೆ ಮರಳಿದರು. ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ಗಿಂತ ಮುಂಚಿತವಾಗಿ ತಂಡಕ್ಕೆ ದೊಡ್ಡ ಬೆಳವಣಿಗೆಯಾಗಿದೆ.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಅವರು ಅಫ್ಘಾನಿಸ್ತಾನ ವಿರುದ್ಧದ ತಂಡದಿಂದ ಮಧ್ಯಮ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಹೊರಗಿಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಭಾರತ ಟಿ20 ತಂಡದಿಂದ ಗೈರಾಗಿದ್ದಾರೆ. ಇದಕ್ಕೆ ಆಕಾಶ್ ಚೋಪ್ರಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಕೆಎಲ್ ರಾಹುಲ್ ಏನು ತಪ್ಪು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ವಿಶೇಷವಾಗಿ, ಬ್ಯಾಟ್‌ನೊಂದಿಗೆ ಉತ್ತಮ ಐಸಿಸಿ ಏಕದಿನ ವಿಶ್ವಕಪ್ ನಂತರ, 2022ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಲು ವಿಫಲರಾದರು ಮತ್ತು ಮುಂದಿನ ವರ್ಷ 50 ಓವರ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮರಳಿದರು ಎಂದು ಆಕಾಶ್ ಚೋಪ್ರಾ ಗಮನಸೆಳೆದರು.
"ನೀವು ಹಿರಿಯ ಆಟಗಾರರನ್ನು ಆಯ್ಕೆ ಮಾಡಲು ಬಯಸಿದರೆ, ಕೆಎಲ್ ರಾಹುಲ್ ಮಾಡಿದ ತಪ್ಪೇನು? ಕಳೆದ ಟಿ20 ವಿಶ್ವಕಪ್ ಪ್ರದರ್ಶನವನ್ನು ಆಧರಿಸಿ ನೀವು ತಂಡವನ್ನು ಮಾಡುತ್ತಿದ್ದರೆ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಉತ್ತಮವಾಗಿ ಆಡಿಲ್ಲ. ಇಬ್ಬರೂ ಒಂದೇ ದೋಣಿಯಲ್ಲಿದ್ದರು," ಎಂದು ಆಕಾಶ್ ಚೋಪ್ರಾ ತಮ್ಮ ವಿಡಿಯೋದಲ್ಲಿ ಹೇಳಿದರು.
"ಅದಾದ ನಂತರ ಕಳೆದ ಏಕದಿನ ವಿಶ್ವಕಪ್ ನೋಡಿದರೆ, ಇಬ್ಬರೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಆಗ ಇಬ್ಬರ ಹೆಸರೂ ಇರಬೇಕಿತ್ತು. ಕೆಎಲ್ ರಾಹುಲ್ ಈಗ ಕೀಪಿಂಗ್ ಮಾಡಿ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ".
"ಹೀಗಾಗಿ ನೀವು ಅವರನ್ನು ಅಲ್ಲಿ ಆಡಿಸಬಹುದಿತ್ತು. ಆದರೆ ರೋಹಿತ್ ಶರ್ಮಾ ಇದ್ದಾರೆ, ವಿರಾಟ್ ಕೊಹ್ಲಿ ಇದ್ದಾರೆ, ಕೆಎಲ್ ರಾಹುಲ್ ಇಲ್ಲ. ಕಳೆದ ಒಂದು ವರ್ಷದಿಂದ ನೀವು ಅವನನ್ನು ಉಳಿಸಿಕೊಳ್ಳಲು ನೋಡುತ್ತಿಲ್ಲ," ಎಂದು ಆಕಾಶ್ ಚೋಪ್ರಾ ಹರಿಹಾಯ್ದರು.
ರೋಹಿತ್ ಶರ್ಮಾ 6 ಪಂದ್ಯಗಳಲ್ಲಿ 19.33ರ ಸರಾಸರಿ ಮತ್ತು ಮತ್ತು 106 ಸ್ಟ್ರೈಕ್ ರೇಟ್‌ನಲ್ಲಿ 116 ರನ್ ಗಳಿಸಿದರು. ಕೆಎಲ್ ರಾಹುಲ್ ಆಡಿದ 6 ಪಂದ್ಯಗಳಲ್ಲಿ 21.33ರ ಸರಾಸರಿ ಮತ್ತು 120 ಸ್ಟ್ರೈಕ್ ರೇಟ್‌ನಲ್ಲಿ 128 ರನ್ ಗಳಿಸಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಂತರ ಅವರು ಯಾವುದೇ ಟಿ20 ಪಂದ್ಯಗಳನ್ನು ಆಡಲಿಲ್ಲ.
ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಕ್ಷೀಣಿಸುತ್ತಿರುವ ಟಿ20 ಅಂಕಿಅಂಶಗಳಳಿಗೆ, ಇಬ್ಬರೂ ಸಾಧಾರಣ ಐಪಿಎಲ್ ವೃತ್ತಿಯನ್ನು ಹೊಂದಿದ್ದರು. ಕಳೆದ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಆಇಡದ 16 ಇನ್ನಿಂಗ್ಸ್‌ಗಳಲ್ಲಿ 20.75ರ ಸರಾಸರಿ ಮತ್ತು 132 ಸ್ಟ್ರೈಕ್ ರೇಟ್‌ನಲ್ಲಿ ಕೇವಲ ಎರಡು ಅರ್ಧಶತಕಗಳೊಂದಿಗೆ ಕೇವಲ 332 ರನ್ ಗಳಿಸಿದರು.
ಇನ್ನು ಕೆಎಲ್ ರಾಹುಲ್ ಗಾಯದಿಂದ ಪಂದ್ಯಾವಳಿಯನ್ನು ತಪ್ಪಿಸಿಕೊಂಡರು ಮತ್ತು ಆಡಿದ ಒಂಬತ್ತು ಪಂದ್ಯಗಳಲ್ಲಿ 34.25ರ ಸರಾಸರಿ ಮತ್ತು ಎರಡು ಅರ್ಧಶತಕಗಳೊಂದಿಗೆ 274 ರನ್‌ಗಳನ್ನು ಗಳಿಸಿದರು.
ಮತ್ತೊಂದೆಡೆ ವಿರಾಟ್ ಕೊಹ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ 98.66ರ ಸರಾಸರಿ ಮತ್ತು 136.40 ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ 296 ರನ್ ಬಾರಿಸಿ ಅಗ್ರ ರನ್ ಸ್ಕೋರರ್ ಆಗಿದ್ದರು.
ಅಲ್ಲದೆ, 2023ರ ಐಪಿಎಲ್‌ನಲ್ಲಿ ಉತ್ತಮ ಋತುವನ್ನು ಹೊಂದಿದ್ದರು. ಆಡಿದ 14 ಪಂದ್ಯಗಳಲ್ಲಿ 53.25ರ ಸರಾಸರಿ ಮತ್ತು 140 ಸ್ಟ್ರೈಕ್ ರೇಟ್‌ನಲ್ಲಿ 639 ರನ್ ಗಳಿಸಿದರು.