IPL 2025 RCB: ನಾಯಕತ್ವಕ್ಕೆ ವಿರಾಟ್ ಒಬ್ಬರೇ ಉತ್ತಮ ಆಯ್ಕೆ: ಎಬಿಡಿ
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಟೂರ್ನಿಗೆ ಈಗಾಗಲೇ ಹಲವು ತಂಡಗಳು ತಮ್ಮ ತಂಡದ ನಾಯಕನನ್ನು ಘೋಷಿಸಿವೆ. ಆದರೆ ಆರ್‌ಸಿಬಿ ತಂಡ ಮಾತ್ರ ಇನ್ನು ತಂಡದ ನಾಯಕನನ್ನು ಘೋಷಣೆ ಮಾಡಿಲ್ಲ. 18ನೇ ಆವೃತ್ತಿಗೆ ಇನ್ನು ಮೂರು ತಂಡಗಳು ತಮ್ಮ ನಾಯಕನನ್ನು ಘೋಷಣೆ ಮಾಡಿಲ್ಲ. ಈ ಸಾಲಿನಲ್ಲಿ ಆರ್‌ಸಿಬಿ ಸಹ ನಿಂತುಕೊಳ್ಳುತ್ತದೆ. ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಹಲವು ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ನಾಯಕತ್ವದ ಗುಣಗಳನ್ನು ಇರುವ ಯಾವೊಬ್ಬ ಪ್ಲೇಯರ್‌ಗೂ ಮಣೆ ಹಾಕಲಿಲ್ಲ. ಆರ್‌ಸಿಬಿ ಕೆಎಲ್ ರಾಹುಲ್ ಇಲ್ಲ, ರಿಷಭ್ ಪಂತ್ ಅವರಿಗೆ ಹೆಚ್ಚಿನ ಬಾಜಿ ಕಟ್ಟುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ಆಸೆ ಹುಸಿಯಾಗಿದೆ. ಆರ್‌ಸಿಬಿ ಇವರಿಬ್ಬರಿಗೂ ಮಣೆ ಹಾಕದೆ ಅಚ್ಚರಿ ಮೂಡಿಸಿತ್ತು. ಇದರಿಂದಲೇ ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಎಬಿಡಿ ಹೇಳಿದ್ಧೇನು?
ಆರ್‌ಸಿಬಿ ತಂಡವನ್ನು ಬಹುವರ್ಷಗಳ ಕಾಲ ಮುನ್ನಡೆಸಿದ ಕೀರ್ತಿ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಇವರನ್ನು ಆರ್‌ಸಿಬಿ ರಿಟೇನ್ ಮಾಡಿಕೊಂಡಿದೆ. ಇವರಿಗೆ ಮತ್ತೆ ಪಟ್ಟವನ್ನು ಕಟ್ಟಲಾಗುತ್ತಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ವಿರಾಟ್ ಆಗಲಿ ಅಥವಾ ಮ್ಯಾನೇಜ್ಮೆಂಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪರಿಣಾಮ ಈಗ ವಿರಾಟ್ ಕೊಹ್ಲಿ ಸ್ನೇಹಿತ ಎಬಿಡಿ ವಿಲಿಯರ್ಸ್ ಈ ಬಗ್ಗೆ ತುಟಿ ಬಿಚ್ಚಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿರುವ ಎಬಿಡಿ, ನನಗೆ ಅನಿಸಿದ ಮಟ್ಟಿಗೆ ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಒಬ್ಬರೇ ಆಯ್ಕೆ ಎಂದು ಅನಿಸುತ್ತದೆ. ಸದ್ಯ ವಿರಾಟ್ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ವಿರಾಟ್ ಬೇಗ ಫಾರ್ಮ್‌ಗೆ ಮರಳಿ ಪಂದ್ಯವನ್ನು ಗೆಲ್ಲುವಂತಹ ಇನಿಂಗ್ಸ್‌ಗಳನ್ನು ಆಡಬೇಕು. ಇದು ಅವರ ವೃತ್ತಿಜೀವನಕ್ಕೆ ತುಂಬ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.
ಎಬಿಡಿ ವಿಲಿಯರ್ಸ್ ಅಭಿಪ್ರಾಯದಂತೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿಯ ನಾಯಕತ್ವವನ್ನು ಹೊರಲಿದ್ದಾರೆ. ಇವರು ಈಗಾಗಲೇ ಆರ್‌ಸಿಬಿ ಪರ 143 ಪಂದ್ಯಗಳನ್ನು ಆಡಿದ್ದು, 66 ಪಂದ್ಯಗಳಲ್ಲಿ ಜಯ ದಾಖಲಿಸಿದ್ದಾರೆ. ಅಲ್ಲದೆ 70 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇವರ ಗೆಲುವಿನ ಶೇಕಡಾ 46.15 ಆಗಿದೆ.

ಇನ್ನುಇದಕ್ಕೂ ಮೊದಲು ಎಬಿ ಡಿವಿಲಿಯರ್ಸ್ ತಾವು ಮೈದಾನಕ್ಕೆ ವಾಪಸ್ ಆಗುವುದಾಗಿ ಸಹ ತಿಳಿಸಿದ್ದರು. ಆದರೆ ಐಪಿಎಲ್ ಸೇರಿದಂತೆ ವೃತ್ತಿಪರ ಕ್ರಿಕೆಟ್ ಆಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. ಅಲ್ಲದೆ ತಮ್ಮ ಮಕ್ಕಳು ತಾವು ಆಡುವುದನ್ನು ನೋಡಲು ಬಯಸುತ್ತಾರೆ ಹೀಗಾಗಿ ನಾನು ಕೆಲವು ಲೀಗ್ ಪಂದ್ಯಗಳನ್ನು ಆಡಬಹುದು ಎಂದು ತಿಳಿಸಿದ್ದರು. ಅವರು ಯಾವ ಹಂತದಲ್ಲಿ ಆಡಿ ಮಕ್ಕಳನ್ನು ರಂಜಿಸುತ್ತಾರೆ ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications