ಕೋಚ್ ಗಂಭೀರ್, ಟೀಮ್ ಇಂಡಿಯಾಕ್ಕೆ ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ಬಿಗ್ ವಾರ್ನಿಂಗ್
ಟೀಮ್ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಟಿ20 ಸರಣಿಯಲ್ಲಿ ನೀಡಿರುವ ಪ್ರದರ್ಶನದ ಮೇಲೆ ಈಗ ಸಾಲು ಸಾಲು ಪ್ರಶ್ನೆಗಳು ಏಳುತ್ತಿವೆ. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ರಣ ನೀತಿಗಳ ಬಗ್ಗೆ ಈಗ ಟೀಕೆಗಳು ಕೇಳಿ ಬರುತ್ತಿವೆ. ಎರಡು ಟಿ20 ಸರಣಿಯಲ್ಲಿ ಭಾರತ ತಂಡದ ನೀಡಿರುವ ಪ್ರದರ್ಶನದ ಬಗ್ಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನ ನೀಡುವ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಅರಿತು ಕೊಳ್ಳುವುದು ಅವಶ್ಯಕತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವಾಗಲೂ ಆಕ್ರಮಣಕಾರಿ ಆಟ ಆಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರ ವ್ಯವಸ್ಥೆಗೆ ಹೊಂದಿಕೊಂಡು ಆಡಬೇಕು. ಇದೇ ಯಶಸ್ವಿ ಬ್ಯಾಟರ್‌ನ ದೊಡ್ಡ ಗುರುತಾಗಿದೆ ಎಂದು ಹೇಳಿದ್ದಾರೆ.

ಎಬಿಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಟೀಮ್ ಇಂಡಿಯಾ ಮುಂದೆ ಈಗ ದೊಡ್ಡ ಸವಾಲುಗಳಿವೆ. ಕೋಚ್ ಗೌತಮ್ ಗಂಭೀರ್ ಅವರು ತಮ್ಮ ಜವಾಬ್ದಾರಿಯನ್ನು ಅರಿತು ತಂಡವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಈ ತಂಡವನ್ನು ಹೇಗೆ ಮುನ್ನಡೆಸಬೇಕಿದೆ ಎಂಬ ಸಂಪೂರ್ಣ ಜವಾಬ್ದಾರಿ ಗಂಭೀರ್ ಅವರ ಮೇಲಿದೆ. ನನಗೆ ತಿಳಿದಿರುವಂತೆ ಅವರು ಈ ನಿಟ್ಟಿನಲ್ಲಿ ಕಾರ್ಯವನ್ನು ಮಾಡಲಿದ್ದಾರೆ. ಇಂತಹ ಸನ್ನಿವೇಶಗಳು ಪ್ರತಿ ತಂಡಗಳಿಗೂ ಎಚ್ಚರಿಕೆಯ ಗಂಟೆ ಆಗಿರಲಿವೆ. ಐಪಿಎಲ್‌ನಲ್ಲಿ ಅಬ್ಬರಿಸಿದ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಗ್ಗೆ ಅರಿತು ಕೊಳ್ಳುವುದು ಅವಶ್ಯಕ ಎಂದು ತಿಳಿಸಿದ್ದಾರೆ.
ಎಬಿಡಿ ಬಿಗ್ ವಾರ್ನಿಂಗ್
ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ದೊಡ್ಡ ಅಂತರವಿದೆ. ಐಪಿಎಲ್‌ನಲ್ಲಿ ಹಲವು ಬಾರಿ ಬ್ಯಾಟರ್‌ಗಳಿಗೆ, ಇಂತಹ ಬೌಲರ್‌ಗಳು ಸಿಗುತ್ತಾರೆ ಅವರ ವಿರುದ್ಧ ಬ್ಯಾಟರ್ ರನ್ ಬಾರಿಸಬಹುದಾಗಿರುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಹೆಸರು ಮಾಡಿದ ಬೌಲರ್‌ಗಳು ಇರುತ್ತಾರೆ. ಈ ಹಂತದಲ್ಲಿ ಬ್ಯಾಟರ್ ಬರೀ ದೊಡ್ಡ ಹೊಡೆತಗಳಿಗೆ ಮುಂದಾಗದೆ, ಪರಿಸ್ಥಿತಿಗೆ ಅನುಗಣವಾಗಿ ಬ್ಯಾಟ್ ಮಾಡಬೇಕಾಗುತ್ತದೆ. ಈ ಮಟ್ಟದಲ್ಲಿ ಕ್ರಿಕೆಟ್ ಆಡುವ ಆಟಗಾರ ಗೇರ್ ಶಿಫ್ಟ್ ಮಾಡುವ ಬಗ್ಗೆ ಅರಿತುಕೊಂಡಿರಬೇಕು ಎಂದು ಎಬಿಡಿ ತಿಳಿಸಿದ್ದಾರೆ.
ಇಂಗ್ಲೆಂಡ್ ಭಾರತ 4-0ಯಿಂದ ಸೋಲು ಕಂಡಿದೆ. ಈ ರೀತಿಯ ಪ್ರದರ್ಶನ ಭಾರತದಿಂದ ನೋಡುವುದು ಕಷ್ಟ. ನಾನು ಸಹ ಭಾರತ ತಂಡದಿಂದ ಈ ರೀತಿಯ ಪ್ರದರ್ಶನ ಊಹಿಸಿರಲಿಲ್ಲ. ಈ ಹಂತದಲ್ಲಿ ನಾಯಕತ್ವ ಹಾಗೂ ಮುಂದಾಳತ್ವ ದೊಡ್ಡ ಪಾತ್ರವನ್ನು ವಹಿಸಲಿದೆ. ನೀವು ಒಂದು ರಾತ್ರಿಯಲ್ಲಿ ಬುಮ್ರಾ, ವಿರಾಟ್ ಹಾಗೂ ರೋಹಿತ್ ಅವರನ್ನು ಹುಡುಕಲು ಸಾಧ್ಯವಿಲ್ಲ.ಭಾರತ ತಂಡ ಇಂಗ್ಲೆಂಡ್‌ನಲ್ಲಿ ಇನ್ನು ಚೆನ್ನಾಗಿ ಆಡಬಹುದಿತ್ತು ಎಂದು ಡಿವಿಲಿಯರ್ಸ್ ಆಶಿಸಿದ್ದಾರೆ.
ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡ ಬಳಿಕ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳು ಹಾಗೂ ತಂಡದ ಆಯ್ಕೆ ಚರ್ಚೆಗೆ ಒಳಪಟ್ಟಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
