ವಿರಾಟ್, ಸ್ಮಿತ್ or ಸಚಿನ್: ಎಬಿ ಡಿ ವಿಲಿಯರ್ಸ್ ಆಯ್ಕೆ ಯಾರು ಗೊತ್ತಾ!

ಕೊರೊನಾ ವೈರಸ್ ಕಾರಣದಿಂದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಕಾಲ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟಿಗರು ತಮ್ಮ ಅಭಿಮಾನಿಗಳೊಂದಿಗೆಅಂವಾದವನ್ನು ನಡೆಸುತ್ತಾರೆ. ಈ ಸಂವಾದದಲ್ಲಿ ಕ್ರಿಕೆಟಿಗರಿಗೆ ಕೆಲ ಕಠಿಣ ಸವಾಲುಗಳು ಎದುರಾಗುತ್ತದೆ. ಅಂತಾದ್ದೇ ಸವಾಲನ್ನು ಎದುರಿಸಿದ್ದರು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್.
ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಸಂವಾದವನ್ನು ನಡೆಸಿದ್ದ ಸಂದರ್ಭದಲ್ಲಿ ಡಿವಿಲಿಯರ್ಸ್‌ಗೆ ಮೂವರು ಆಟಗಾರರಲ್ಲಿ ಯಾರು ಅತ್ಯುತ್ತಮ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಎಬಿ ಡಿ ವಿಲಿಯರ್ಸ್ ನೀಡಿದ ಉತ್ತರ ನಿಜಕ್ಕೂ ಅಭಿಮಾನಿಗಳಿಗೆ ಸಮಾದಾನ ತಂದಿರಲಿದೆ. ಅದಕ್ಕೆ ಅಷ್ಟೇ ಜಾಣತನದಿಂದ ಕಾರಣವನ್ನೂ ಬಿಚ್ಚಿಟ್ಟರು ಎಬಿಡಿ.
ಹಾಗಾದರೆ ಡಿವಿಲಿಯರ್ಸ್ ಗೆ ಎದುರಾದ ಆ ಪ್ರಶ್ನೆ ಯಾವುದು, ಅದಕ್ಕೆ ಎಬಿ ಡಿ ಕೊಟ್ಟ ಉತ್ತರವೇನು ಅನ್ನೋದಕ್ಕೆ ಮುಂದೆ ಓದಿ..

ಕೊಹ್ಲಿ, ಸ್ಮಿತ್ ಅಥವಾ ಸಚಿನ್
ಇಬ್ಬರು ಪ್ರಸಕ್ತ ಕಾಲದಲ್ಲಿ ಆಡುತ್ತಿರುವ ಕ್ರಿಕೆಟಿಗರು ಮತ್ತು ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರ ನಡುವೆ ಯಾರು ಶ್ರೇಷ್ಠ ಎಂಬ ಪ್ರಶ್ನೆ ಕೇಳಿ ಬಂದಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಮಿಂಚು ಹರಿಸುತ್ತಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಮಧ್ಯೆ ಯಾರು ಶ್ರೇಷ್ಠ ಎಂದು ಅಭಿಮಾನಿಗಳು ಡಿವಿಲಿಯರ್ಸ್‌ಗೆ ಪ್ರಶ್ನೆಯನ್ನು ಎಸೆದಿದ್ದರು.

ನಮ್ಮೆಲ್ಲರಿಗೂ ಮಾದರಿ ಆತ
ಈ ಪ್ರಶ್ನೆಗೆ ಡಿವಿಲಿಯರ್ಸ್ ಕೊಟ್ಟ ಉತ್ತರ ತುಂಬಾ ಸೊಗಸಾಗಿತ್ತು. ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್‌ಗಿಂತ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಆಟಗಾರ ಎಂದು ನಿಸ್ಸಂಶಯವಾಗಿ ಹೇಳಿದರು ಡಿವಿಲಿಯರ್ಸ್. ಆತನೋರ್ವ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನಮ್ಮೆಲ್ಲರಿಗೂ ಮಾನದಂಡವನ್ನು ನಿಗದಿಪಡಿಸಿದ ಆಟಗಾರ ಎಂದು ಸಚಿನ್ ತೆಂಡೂಲ್ಕರ್ ಆಟದ ಬಗ್ಗೆ ಹೇಳಿದರು.

ನಮ್ಮಿಬ್ಬಗೂ ಆತನೇ ಮಾದರಿ
ಸಚಿನ್ ತೆಂಡೂಲ್ಕರ್ ನಮ್ಮಿಬ್ಬರಿಗೂ ಮಾದರಿ ಎಂದು ಡಿವಿಲಿಯರ್ಸ್ ವಿರಾಟ್ ಮತ್ತು ತಮ್ಮ ಬಗ್ಗೆ ಹೇಳಿಕೊಂಡರು. ತಮ್ಮ ಕಾಲದಲ್ಲಿ ಸಚಿನ್ ಯಾವ ಶ್ರೇಷ್ಠ ಆಟವನ್ನು ಆಡಿದರು ಎಂಬುದು ಅವರ ಸಾಧನೆ ಮತ್ತು ಅವರ ಕಾರ್ಯ ಹೇಳುತ್ತದೆ. ಇದು ಎಲ್ಲಾ ಕ್ರಿಕೆಟಿಗರಿಗೂ ಅತ್ಯುತ್ತಮ ಉದಾಹರಣೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ವಿರಾಟ್ ಬಗ್ಗೆಯೂ ಮನಸಾರೆ ಹೊಗಳಿದ ಎ ಬಿಡಿ
ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಕಾರ ಎಂಪುಮೆಲೆಲೊ 'ಪೊಮ್ಮಿ' ಎಂಬಂಗ್ವಾ ಜೊತೆಗೆ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರನ್ ಬೆನ್ನತ್ತುವ ಸಂದರ್ಭದಲ್ಲಿ ವಿರಾಟ್ ಕೋಹ್ಲಿ ಅತ್ಯುತ್ತಮ ಆಟಗಾರ ಎನಿಸಿಕೊಳ್ಳುತ್ತಾರೆ. ರನ್ ಚೇಸಿಂಗ್ ಸಂದರ್ಭದ ಆಟವನ್ನು ಗಮನಿಸಿದರೆ ಆತನಷ್ಟು ಉತ್ತಮ ಆಟಗಾರನನ್ನು ನಾಡು ಕಂಡಿಲ್ಲ. ಈ ವಿಚಾರದಲ್ಲಿ ಆತನನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಲಿಯರ್ಸ್ ಉತ್ತರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications