ಐಪಿಎಲ್ 2019: 4,000 ರನ್‌ನೊಂದಿಗೆ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ಬೆಂಗಳೂರು, ಮಾರ್ಚ್ 29: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಯರ್ಸ್ ಗುರುವಾರ (ಮಾರ್ಚ್ 28) ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದರು. ಅಲ್ಲದೆ ಐಪಿಎಲ್‌ನಲ್ಲಿ ದಾಖಲೆಗೂ ಕಾರಣರಾಗಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಮೈದಾನಕ್ಕಿಳಿದಿದ್ದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ, 41 ಎಸೆತಗಳಿಗೆ 70 ರನ್ ಬಾರಿಸಿದ್ದರು. ಇದರಲ್ಲಿ 4 ಫೋರ್ ಮತ್ತು 6 ಸಿಕ್ಸ್‌ಗಳೂ ಸೇರಿದ್ದವು. ಈ ರನ್‌ನೊಂದಿಗೆ ಎಬಿಡಿ ಐಪಿಎಲ್‌ನಲ್ಲಿ 4000 ರನ್ ಪೂರೈಸಿದ ಸಾಧನೆಗೂ ಕಾರಣರಾದರು.
ಐಪಿಎಲ್‌ನಲ್ಲಿ 4000 ರನ್ ಬಾರಿಸಿದ ಎಬಿ ಡಿ ವಿಲಿಯರ್ಸ್, ಈ ಸಾಧನೆ ಮಾಡಿದ 3ನೇ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡರು. ವಿದೇಶಿ ಆಟಗಾರರಲ್ಲಿ ಇದೇ ಸಾಧನೆಯನ್ನು ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಕ್ರಿಸ್‌ಗೇಲ್ ಕೂಡ ಮಾಡಿದ್ದಾರೆ.
ಗುರುವಾರದ ಪಂದ್ಯದಲ್ಲಿ ಎಬಿಡಿ ಮೊದಲ ಎಸೆತದಲ್ಲೇ ಕ್ಯಾಚಿತ್ತು ಔಟ್ ಆಗುವುದರಲ್ಲಿದ್ದರು. ಆದ್ರೆ ಕ್ಯಾಚ್ ಡ್ರಾಪ್ ಅನ್ನಿಸಿತ್ತು. ಹೀಗೆ ಬಚಾವಾದ ಎಬಿಡಿ, ಆರ್‌ಸಿಬಿ ಪರ ಭರ್ಜರಿ ಬ್ಯಾಟ್ ಬೀಸಿದ್ದರು. ಆದರೆ ಅಂಪೈರ್ ಎಡವಟ್ಟಿನಿಂದಾಗಿ ರೋಚಕ ಪಂದ್ಯವನ್ನು ಆರ್‌ಸಿಬಿ 6 ರನ್‌ನಿಂದ ಕಳೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications