For Quick Alerts
ALLOW NOTIFICATIONS  
For Daily Alerts
 

ಸಚಿನ್ ಗಿಂತ ಎಬಿ ಡಿ ಜನಪ್ರಿಯತೆ ಹೆಚ್ಚಾಗಲಿದೆಯಂತೆ!

By Mahesh

ನಾಗ್ಪುರ್, ನ.03: ದಕ್ಷಿಣ ಆಫ್ರಿಕಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಬಿ ಡಿ ವಿಲಿಯರ್ಸ್ ಅವರು ಏಕದಿನ ಕ್ರಿಕೆಟ್ ನಲ್ಲಿ ಜನಪ್ರಿಯತೆ ವಿಷಯದಲ್ಲಿ ಸಚಿನ್ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಫ್ಯಾನಿ ಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಉತ್ತಮ ದಾಖಲೆ ಜೊತೆಗೆ ಉತ್ತಮ ಲಯ ಕಾಯ್ದುಕೊಂಡಿರುವ ಎಬಿ ಡಿ ಜನಪ್ರಿಯತೆ ವಿಶ್ವದೆಲ್ಲೆಡೆ ಹಬ್ಬುತ್ತಿದೆ ಎಂದಿದ್ದಾರೆ.

ಜನಪ್ರಿಯತೆಯ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರನ್ನು ಎಬಿ ಡಿ ವಿಲಿಯರ್ಸ್ ಹಿಂದಿಕ್ಕಲಿದ್ದಾರೆ ಎಂದು ದಕ್ಷಿಣ ಆಫ್ರಿಕದ ಮಾಜಿ ಬೌಲರ್ ಫ್ಯಾನಿ ಡಿ ವಿಲಿಯರ್ಸ್ ಹೇಳಿದ್ದಾರೆ. ಮಾಜಿ ವೇಗಿ ಫ್ಯಾನಿ ಅವರು ಸಚಿನ್ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿರುವುದನ್ನು ಇಲ್ಲಿ ಸ್ಮರಿಸಬಹುದು.

31ವರ್ಷ ವಯಸ್ಸಿನ ಎಬಿ ಡಿ ಅವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಐದು ಏಕದಿನ ಪಂದ್ಯಗಳ ಸರಣಿಯನ್ನು 3-2ರಿಂದ ಗೆದ್ದುಕೊಂಡಿದೆ. ಸರಣಿಯಲ್ಲಿ 358ರನ್ ಗಳಿಸಿದ್ದಾರೆ. ಈಗ ನವೆಂಬರ್ 5 ರಿಂದ ಮೋಹಾಲಿಯಲ್ಲಿ ಆರಂಭಗೊಳ್ಳಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಎಬಿ ಡಿ ತಯಾರಾಗುತ್ತಿದ್ದಾರೆ.

'AB de Villiers is even better than Sachin Tendulkar'

ಭಾರತದಲ್ಲಿ ಎಬಿ ಡಿ ಅವರು ಮೈದಾನಕ್ಕೆ ಇಳಿಯುವಾಗ ಅಭಿಮಾನಿಗಳಿಂದ ಭವ್ಯ ಸ್ವಾಗತ ದೊರೆಯುತ್ತಿದೆ. ಸಚಿನ್ ಗಳಿಸಿದ್ದ ಜನಪ್ರಿಯತೆಯನ್ನು ಡಿವಿಲಿಯರ್ಸ್ ವಿಶ್ವ ಕ್ರಿಕೆಟ್‌ನಲ್ಲಿ ಪಡೆದುಕೊಳ್ಳಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ತೆಂಡುಲ್ಕರ್-ಡಿವಿಲಿಯರ್ಸ್ ದಾಖಲೆಯನ್ನು ಹೋಲಿಸಿದಾಗ ವಿಲಿಯರ್ಸ್ ದಾಖಲೆ ಅತ್ಯುತ್ತಮವಾಗಿದೆ ಎಂದು 1991ರಲ್ಲಿ ದಕ್ಷಿಣ ಆಫ್ರಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾದ ನಂತರ 18 ಟೆಸ್ಟ್ ಹಾಗೂ 83 ಏಕದಿನ ಪಂದ್ಯಗಳನ್ನು ಆಡಿ ನಿವೃತ್ತಿ ಹೊಂದಿರುವ 51ವರ್ಷ ವಯಸ್ಸಿನ ಡಿವಿಲಿಯರ್ಸ್ ಹೇಳಿದ್ದಾರೆ.

ಜನಪ್ರಿಯತೆ ಹಾಗೂ ಉತ್ತಮ ಲಯದಲ್ಲಿರುವ ಎಬಿ ಡಿವಿಲಿಯರ್ಸ್ 23 ಏಕದಿನ ಕ್ರಿಕೆಟ್ ಶತಕ ಹಗಊ 21 ಟೆಸ್ಟ್ ಶತಕ ಗಳಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ 17,000ಕ್ಕೂ ಅಧಿಕ ರನ್ ಗಳಿಸಿದ್ದಾರಲ್ಲದೆ ಅನೇಕ ತ್ವರಿತ ಗತಿ ಅರ್ಧ ಶತಕ, ಶತಕಗಳ ದಾಖಲೆಗಳನ್ನು ಮುರಿದಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+