For Quick Alerts
ALLOW NOTIFICATIONS  
For Daily Alerts
 

ಒಂದೇ ದಿನ ಗೇಲ್ ಎರಡು ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್

AB de Villiers pips Gayle record of Most Man of the Match Awards in IPL

ಶಾರ್ಜಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2020ರ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಮಿ.360 ಸಿಡಿಲಬ್ಬರದ ಬ್ಯಾಟಿಂಗ್ ಮೋಡಿಗೆ ಎಲ್ಲರೂ ಸಿಲುಕಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರು ಜೊತೆಯಾಟದ ಮೂಲಕ ಎರಡು ದಾಖಲೆ ಬರೆದಿದ್ದು ತಿಳಿದಿರಬಹುದು. ಇದಲ್ಲದೆ ಎಬಿಡಿ ಅವರು ವಯಕ್ತಿಕವಾಗಿ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಇಬ್ಬರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರದಂದು ನಡೆದ ಪಂದ್ಯದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿ, ರಂಜಿಸಿದ್ದಲ್ಲದೆ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಆರ್ ಸಿಬಿ ನನ್

ಆರ್ ಸಿಬಿ ಆರಂಭಿಕರಾದ ಫಿಂಚ್ 47 ರನ್ ಹಾಗೂ ಪಡಿಕ್ಕಲ್ 32 ಉತ್ತಮ ಆರಂಭ ನೀಡಿದರೆ, ನಂತರ ಕೊಹ್ಲಿ-ಎಬಿಡಿ ನೂರು ರನ್ ಜೊತೆಯಾಟದಿಂದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 194ರನ್ ಕಲೆಹಾಕಲು ಸಾಧ್ಯವಾಯಿತು. ಎಬಿಡಿ 33 ಎಸೆತಗಳಲ್ಲಿ 73ರನ್ ಚೆಚ್ಚಿದರು. ನಂತರ ರನ್ ಚೇಸ್ ನಲ್ಲಿ ವಿಫಲವಾದ ಕೆಕೆಆರ್ 20 ಓವರ್ ಗಳಲ್ಲಿ 112ರನ್ ಮಾತ್ರಗಳಿಸಲು ಸಾಧ್ಯವಾಯಿತು.

ಎಬಿಡಿ- ಕೊಹ್ಲಿ ಜೊತೆಯಾಟದಿಂದ 3,000ರನ್ ಕಲೆ ಹಾಕಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ಕೂಡಾ ಇದೇ ಜೋಡಿ ಸಂಪಾದಿಸಿದೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಗೇಲ್ ಜೊತೆಗೆ ಕೊಹ್ಲಿ 9 ಬಾರಿ 100ರನ್ ಗಡಿ ದಾಟಿ ನಿರ್ಮಿಸಿದ್ದ ದಾಖಲೆಯನ್ನು ಕೊಹ್ಲಿ- ಎಬಿಡಿ ಜೋಡಿ ನಿನ್ನೆ ಮುರಿದಿದೆ. ಇದರ ಜೊತೆಗೆ ಎಬಿ ಡಿ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಎನಿಸಿಕೊಂಡು ಮತ್ತೊಂದು ಗೇಲ್ ದಾಖಲೆ ಮುರಿದಿದ್ದಾರೆ.

ಪಂದ್ಯ ಪುರುಷೋತ್ತಮ ದಾಖಲೆ
ಅತಿ ಹೆಚ್ಚು man-of-the-match ಪಡೆದ ಆಟಗಾರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕ್ರಿಸ್ ಗೇಲ್ ರನ್ನು ಹಿಂದಿಕ್ಕಿ ಎಬಿ ಡಿ ವಿಲಿಯರ್ಸ್ ಮೇಲಕ್ಕೇರಿದ್ದಾರೆ. ಟಾಪ್ 7 ಆಟಗಾರರ ಪಟ್ಟಿ ಇಲ್ಲಿದೆ;(ಅಂಕಿ ಅಂಶ: ಅಕ್ಟೋಬರ್ 13ರಂತೆ)
ಎಬಿ ಡಿ ವಿಲಿಯರ್ಸ್ 22 (148 ಇನ್ನಿಂಗ್ಸ್)
ಕ್ರಿಸ್ ಗೇಲ್: 18(124)
ರೋಹಿತ್ ಶರ್ಮ: 18 (189)
ಡೇವಿಡ್ ವಾರ್ನರ್: 17 (132)
ಎಂಎಸ್ ಧೋನಿ: 17 (176)
ಶೇನ್ ವಾಟ್ಸನ್: 16 (137)
ಯೂಸುಫ್ ಪಠಾಣ್: 16 (154)

Story first published: Tuesday, October 13, 2020, 16:54 [IST]
Other articles published on Oct 13, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+