RCB ದಿಗ್ಗಜ ಎಬಿ ಡಿವಿಲಿಯರ್ಸ್‌ಗೆ ವೃತ್ತಿ ಜೀವನದಲ್ಲಿ ನಿದ್ದೆಗೆಡಿಸಿದ 3 ಬೌಲರ್‌ಗಳು ಇವರೇ: ಓರ್ವ ಭಾರತೀಯ!
ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ದಿಗ್ಗಜ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ. ತಮ್ಮ ಸುದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ನೂರಾರು ಬೌಲರ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಿಸಿದ್ದಾರೆ. ತನ್ನದೇ ಆದ ಆಕ್ರಮಣಕಾರಿ ಶೈಲಿಯ ಆಟದಿಂದಾಗಿ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದ್ದ ಎಬಿ ಡಿವಿಲಿಯರ್ಸ್ ತನ್ನ ನಿದ್ದೆಗೆಡಿಸಿದ್ದ ಬೌಲರ್‌ಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಮೂವರು ಬೌಲರ್‌ಗಳನ್ನು ಎದುರಿಸುವುದಕ್ಕೆ ತಾನು ಬಹಳ ಕಷ್ಟಪಟ್ಟಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ. ಜಿಯೋ ಸಿನಿಮಾದಲ್ಲಿ ರಾಬಿನ್ ಉತ್ತಪ್ಪ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಎಬಿ ಡಿವಿಲಿಯರ್ಸ್ ಈ ಬಗ್ಗೆ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್, ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಈ ಮೂವರು ಬೌಲರ್‌ಗಳು ಎಂದು ಬಹಿರಂಗಪಡಿಸಿದ್ದಾರೆ.

ವಾರ್ನ್ ಉಪಸ್ಥಿತಿಯೇ ಆ ಭಾವನೆ ಮೂಡಿಸಿತ್ತು
ರಾಬಿನ್ ಉತ್ತಪ್ಪ ಜೊತಗೆ ಮಾತನಾಡಿದ ಎಬಿ ಡಿವಿಲಿಯರ್ಸ್ ಶೇನ್ ವಾರ್ನ್ ವಿರುದ್ಧ ಆಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. "2006ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದಾಗ ಅವರ ಕೌಶಲ್ಯ ಹಾಗೂ ತಂತ್ರಗಳಿಗಿಂತಲೂ ಅವರ ಉಪಸ್ಥಿತಿ ಹಾಗೂ ಆಟದಲ್ಲಿ ಅವರು ಹೊಂದಿದ್ದ ಶ್ರೇಷ್ಟತೆಯೇ ಅವರನ್ನು ಎದುರಿಸಲು ಕಷ್ಟಪಡುವಂತೆ ಮಾಡಿತ್ತು. ಆಗ ಸಹಜವಾಗಿ ನಾನು ಹೆಚ್ಚಿನ ಅನುಭವ ಹೊಂದಿದವನಾಗಿರಲಿಲ್ಲ. ಸಣ್ಣ ಅವಕಾಶ ದೊರೆತರೂ ಆತ ಔಟ್ ಮಾಡುತ್ತಾರೆ ಎಂಬುದು ನನಗೆ ತಿಳಿದಿತ್ತು" ಎಂದು ವಿವರಿಸಿದ್ದಾರೆ ಎಬಿ ಡಿವಿಲಿಯರ್ಸ್. ಎಬಿ ಡಿವಿಲಿಯರ್ಸ್ ಶೇನ್ ವಾರ್ನ್ ಅವರನ್ನು ಆರು ಇನ್ನಿಂಗ್ಸ್‌ಗಳಲ್ಲಿ ಎದುರಿಸಿದ್ದು ಇದರಲ್ಲಿ ನಾಲ್ಕು ಬಾರಿ ವಾರ್ನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
'ಬೂಮ್ರಾ ಮತ್ತು ರಶೀದ್ ಕಠಿಣ ಎದುರಾಳಿಗಳು'
ಇನ್ನು ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ರಶೀದ್ ಖಾನ್ ಕಠಿಣ ಎದುರಾಳಿಗಳು ಎಂದಿದ್ದಾರೆ ಎಬಿ ಡಿವಿಲಿಯರ್ಸ್. ಈ ಇಬ್ಬರು ಬೌಲರ್‌ಗಳ ಆಕ್ರಮಣಕಾರಿ ಮನೋಭಾವವೇ ಉಳಿದ ಬೌಲರ್‌ಗಳಿಗಿಂತ ಇವರನ್ನು ಭಿನ್ನವಾಗಿರಿಸುತ್ತದೆ ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ.
"ಬೂಮ್ರಾ ಅವರನ್ನು ಎದುರಿಸುವುದು ಯಾವಾಗಲೂ ಬಹಳ ದೊಡ್ಡ ಸವಾಲು. ಯಾಕೆಂದರೆ ಆತ ಬಹಳ ಸ್ಪರ್ಧಾತ್ಮಕ ಆಟಗಾರ. ಯಾವಾಗಲೂ ಆತ ಹಿಂದಕ್ಕೆ ಸರಿಯುವುದಿಲ್ಲ, ಯಾವಾಗಲೂ ನಿಮ್ಮ ನೇರಕ್ಕೆ ಆತ ದಾಳಿ ನಡೆಸುವ ಆಟಗಾರ. ಆತನ ಮೇಲೆ ನನಗೆ ಸಾಕಷ್ಟು ಗೌರವವಿದೆ. ಆತನ ಮೇಲೆ ಕೆಲ ಸಂದರ್ಭಗಳಲ್ಲಿ ನಾನು ಮೇಲುಗೈ ಸಾಧಿಸಿದ್ದೆ. ಆದರೆ ಆತ ನನ್ನ ವಿರುದ್ಧ ಮತ್ತೆ ಬಂದು ಹಿಡಿತವನ್ನು ಸಾಧಿಸುವಂತಾ ಆಟಗಾರ. ಆ ಸ್ಪರ್ಧೆಯನ್ನು ನಾನು ಬಹಳ ಇಷ್ಟ ಪಡುತ್ತೇನೆ" ಎಂದಿದ್ದಾರೆ ಎಬಿಡಿ ವಿಲಿಯರ್ಸ್.
ಇನ್ನು ರಶೀದ್ ಖಾನ್ ಬಗ್ಗೆ ಎಬಿ ಡಿವಿ ವಿಲಿಯರ್ಸ್ ಮಾತನಾಡಿದ್ದು ಅಫ್ಘಾನಿಸ್ತಾನದ ಈ ಸ್ಪಿನ್ನರ್ ರನ್ ಬಾರಿಸಿಕೊಂಡರೂ ಕೂಡ ಹಿಂಜರಿಯದೆ ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತಾರೆ ಎಂದು ವಿವರಿಸಿದ್ದಾರೆ. "ರಶೀದ್ ಖಾನ್ ಅವರನ್ನು ಕೂಡ ಎದುರಿಸುವುದು ಬಹಳ ಕಠಿಣ. ಕೆಲ ಸಂದರ್ಭಗಳಲ್ಲಿ ಅವರ ವಿರುದ್ಧ ಮೇಲುಗೈ ಸಾಧಿಸಿದ್ದರ ಅವರು ಕಮ್‌ಬ್ಯಾಕ್ ಮಾಡುತ್ತಾರೆ. ಆತ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿಕೊಳ್ಳುತ್ತಾರೆ ಮತ್ತೆ ಮುಂದಿನ ಎಸೆತದಲ್ಲಿಯೇ ವಿಕೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಇಂಥಾ ಬೌಲರ್‌ಗಳನ್ನು ಎದುರಿಸುವುದು ಯಾವಾಗಲೂ ಕಠಿಣ. ಅಂಥವರ ಮೇಲೆ ಯಾವಾಗಲೂ ನನಗೆ ಗೌರವವಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications