ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಲಿದ್ದಾರೆ ಎಬಿ ಡಿ ವಿಲಿಯರ್ಸ್!

ಕೇಪ್‌ಟೌನ್, ಜುಲೈ 21: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವವರ ಸಾಲಿನಲ್ಲಿ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಕೂಡ ಇದ್ದಾರೆ ಎಂದು ದಕ್ಷಿಣ ಆಫ್ರಿಕಾದ ಲಿಮಿಟೆಡ್ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಖಾತರಿಪಡಿಸಿದ್ದಾರೆ.
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅದಾಗಿ ಈಚೆಗೆ ಕೆಲ ತಿಂಗಳ ಹಿಂದೆ ತಾನು ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರತಿನಿಧಿಸಲು ಕಾತರನಾಗಿರುವುದಾಗಿ ಎಬಿಡಿ ಹೇಳಿಕೊಂಡಿದ್ದರು.
2019ರ ಏಕದಿನ ವಿಶ್ವಕಪ್ ವೇಳೆ ಎಬಿಡಿ ತಾನು ನಿವೃತ್ತಿ ವಾಪಸ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾಗುವ ಇಂಗಿತ ತೋರಿಕೊಂಡಿದ್ದರು. ಆದರೆ ವಿಶ್ವಕಪ್‌ನಲ್ಲಿ ಎಬಿಡಿ ಮೈದಾನಕ್ಕಿಳಿದಿರಲಿಲ್ಲ. ವಿಶ್ವಕಪ್‌ನಲ್ಲಿ ಸೌತ್ ಆಫ್ರಿಕಾ ನೀರಸ ಪ್ರದರ್ಶನದೊಂದಿಗೆ ಟೂರ್ನಿ ಮುಗಿಸಿತ್ತು. ಅದಾಗಿ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾ ಡು ಪ್ಲೆಸಿಸ್ ಕೂಡ ಎಬಿಡಿ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ ಎಂದಿದ್ದರು.
'ಆತ (ಎಬಿಡಿ) ಖಂಡಿತಾ ಸಾಲಿನಲ್ಲಿದ್ದಾರೆ. ಫಿಟ್‌ನಲ್ಲಿರುವುದೇ ಆದರೆ ನಾನು ನನ್ನ ತಂಡದಲ್ಲಿ ಎಬಿಡಿಯನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತೇನೆ. ಯಾವುದೇ ತಂಡ ಎಬಿಡಿಯನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಡಿ ಕಾಕ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈ ವರ್ಷ ನಡೆಯಲಿದ್ದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications