ರಿಷಭ್ ಶೆಟ್ಟಿ-ಎಬಿ ಡಿವಿಲಿಯರ್ಸ್ ಮುಖಾಮುಖಿ: ಅಭಿಮಾನಿಗಳಿಗೆ ಡಬಲ್ ಧಮಾಕದ video

ಗುರುವಾರ ಆರ್‌ಸಿಬಿ ಅಭಿಮಾನಿಗಳು ಡಬಲ್ ಖುಷಿಯಾಗಿದ್ದಾರೆ. ಆರ್‌ಸಿಬಿ ಸೂಪರ್ ಸ್ಟಾರ್ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಆರ್‌ಸಿಬಿ ಮರಳಿ ಸೇರಿದ್ದಾರೆ. ಜೊತೆಗೆ ಬ್ಲಾಕ್‌ಬಸ್ಟರ್ ಕನ್ನಡದ ಚಲನಚಿತ್ರ ಕಾಂತಾರ ಸಿನಿಮಾದ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಎಬಿಡಿಯನ್ನು ಭೇಟಿ ಮಾಡಿದ್ದು ವಿಶೇಷ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿಗೆ ಮರಳಿರುವ ಎಲ್ಲರ ನೆಚ್ಚಿನ ಸೂಪರ್‌ಸ್ಟಾರ್ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಫ್ರಾಂಚೈಸಿಗೆ ಮರಳಿದ್ದು, ಅಭಿಮಾನಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಇದಕ್ಕೂ ಮುನ್ನ ಎಬಿಡಿ ನಮ್ಮ ರಾಜ್ಯದ ಹೆಮ್ಮೆಯ ಚಿತ್ರ ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶತಕ ರಿಶಭ್ ಶೆಟ್ಟಿ ಜೊತೆಗೆ ಪ್ರೊಮೊಶನ್‌ನಲ್ಲಿ ಭಾಗಿಯಾಗಿದ್ದು, ಇಬ್ಬರು ಸ್ಟಾರ್‌ಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ರಿಷಭ್ ಶೆಟ್ಟಿ ಟ್ವೀಟ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದೊಂದು ಮ್ಯಾಚ್, ಬೇಟಿ ಮಾಡಿ ನಿಜವಾದ ಮಿಸ್ಟರ್ 360, ನಮ್ಮ ಸೂಪರ್ ಹೀರೋ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ನೋಡಿದ್ರೆ, ಇದು ಕ್ರಿಕೆಟ್ ಅಥವಾ ಕಂಬಳವೇ ಅನ್ನೋ ಕುತೂಹಲವನ್ನು ಹೆಚ್ಚಿಸಿದೆ.
ವೀಡಿಯೋದಲ್ಲಿ ಒಟ್ಟಾಗಿ ಧ್ವನಿಗೂಡಿಸಿರುವ ಸೂಪರ್‌ಸ್ಟಾರ್ಸ್
ಏಕೆಂದರೆ ಈ ಚಿಕ್ಕ ವೀಡಿಯೋದಲ್ಲಿ ಇಬ್ಬರು ಜೊತೆಯಾಗಿ ಕಂಬಳ ಕೋಣ ಒಡಿಸುವ ಮೊದಲು ಹೇಳುವ ಪದವನ್ನು ಹೇಳಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಷಭ್ ಶೆಟ್ಟಿ ಹಾಗೂ ಕ್ರಿಕೆಟ್ ಮೈದಾದನಲ್ಲಿ ಮಿಂಚು ಹರಿಸಿರುವ 360 ಡಿಗ್ರಿ ಜೊತೆಯಾಗಿ ಅಭಿಮಾನಿಗಳಿಗೆ ಹೊಸ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋ ಸೂಚನೆ ನೀಡಿದ್ದಾರೆ.
ರಿಶಬ್ ಶೆಟ್ಟಿ ಸಿನಿಮಾದ ಕಾಂತಾರ ಪ್ರೊಡಕ್ಷನ್ ಹೊಂಬಾಳೆ ಫಿಲ್ಮ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವಿಶೇಷ ವಿಡಿಯೋ ಪೋಸ್ಟ್ ಮಾಡಿದೆ. ಈ ಪೋಸ್ಟ್ ಮೂಲಕ ಹಲವು ಕೂತಹಲಕರ ಸೂಚನೆಯನ್ನು ನೀಡಿದೆ. ಆರಂಭದಲ್ಲಿ ರಿಷಬ್ ಹಾಗೂ ಎಬಿಡಿ ಜೊತೆಯಾಗಿ ಬಿಡಿಯಾ ಎಂದಿದ್ದಾರೆ. ಬಳಿಕ ಕಾಂತಾರ ಎಂದಿದ್ದಾರೆ. ಈ ವಿಡಿಯೋ ಮೂಲಕ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಚಿನ್ನಸ್ವಾಮಿ ಮೈದಾನಕ್ಕೆ ಮರಳುವುದಾಗಿ ತಿಳಿಸಿದ್ದ ಎಬಿ ಡಿವಿಲಿಯರ್ಸ್
ಆರ್‌ಸಿಬಿ ಅಭಿಮಾನಿಗಳಿಗೆ ಎಬಿಡಿ ಈ ಹಿಂದೆಯೇ ಗುಡ್‌ನ್ಯೂಸ್ ಕೊಟ್ಟಿದ್ದರು. ಮುಂದಿನ 2023ರ ಐಪಿಎಲ್ ಸೀಸನ್‌ನಲ್ಲಿ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಮೈದಾನಕ್ಕೆ ಬರಲಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದರು.
ತನ್ನ ಟ್ವೀಟ್‌ನಲ್ಲಿ ತಿಳಿಸಿರುವ ಎಬಿಡಿ ''ನಾನು ಮುಂದಿನ ವರ್ಷ ಚಿನ್ನಸ್ವಾಮಿಗೆ ಮರಳುತ್ತೇನೆ, ಆಡುವುದಕ್ಕಾಗಿ ಅಲ್ಲ, ಆದರೆ ಟ್ರೋಫಿ ಗೆಲ್ಲದಿದ್ದಕ್ಕಾಗಿ ಎಲ್ಲಾ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ ಮತ್ತು ಒಂದು ದಶಕದಿಂದ ನೀಡಿದ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದು ಡಿವಿಲಿಯರ್ಸ್ ಸೋಮವಾರ ಸ್ವತಃ ಟ್ವೀಟ್‌ನಲ್ಲಿ ತಿಳಿಸಿದ್ರು.

ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಎಬಿಡಿ
ಎಬಿಡಿಗೆ ಇಷ್ಟು ದೊಡ್ಡ ಮಟ್ಟಿನ ಫ್ಯಾನ್ ಫಾಲೋವರ್ಸ್ ಇರಲು ಕಾರಣ ಅವರ ಆನ್‌ಫೀಲ್ಡ್ ಮತ್ತು ಆಫ್‌ಫೀಲ್ಡ್ ವ್ಯಕ್ತಿತ್ವ. ಎಬಿ ಡಿವಿಲಿಯನ್ಸ್ 22 ಯಾರ್ಡ್ ಒಳಗಷ್ಟೇ ಓರ್ವ ಅದ್ಭುತ ಕ್ರಿಕೆಟಿಗನಾಗಿರಲಿಲ್ಲ. ಮೈದಾನದ ಹೊರಗೂ ಅವರ ಆಕರ್ಷಕ ವ್ಯಕ್ತಿತ್ವ, ಸೌಜನ್ಯತೆ, ವಿಶ್ವಾಸವು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಒಂದರರ್ಥದಲ್ಲಿ ಈತ ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಅಂದ್ರೆ ತಪ್ಪಾಗಲಾರದು.
ಎಬಿಡಿಯ ರೆಕಾರ್ಡ್‌ಗಳ ಕುರಿತು ಮಾತನಾಡುವುದಾದರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ 47 ಶತಕಗಳು, 109 ಅರ್ಧಶತಕಗಳನ್ನ ಒಳಗೊಂಡಂತೆ 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆ ಟಿ 20, ಲಿಸ್ಟ್-ಎ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಕೂಡ ದಿಗ್ಭ್ರಮೆಗೊಳಿಸುವಂತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications