WCL 2025: ಎಬಿಡಿ ಸ್ಫೋಟಕ ಶತಕ: ದಕ್ಷಿಣ ಆಫ್ರಿಕಾ ಚಾಂಪಿಯನ್
ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ. ಇವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೆ ಇವರ ಬ್ಯಾಟಿಂಗ್ ಕ್ಷಮತೆಯಲ್ಲಿ ಇನ್ನು ಯಾವುದೇ ಬದಲಾವಣೆ ಇಲ್ಲ. ಇವರಿಗೆ ವಯಸ್ಸು ಜಸ್ಟ್ ನಂಬರ್ ರೀತಿ ಕಾಣುತ್ತಿದೆ. ಎಬಿಡಿ ತಮ್ಮ 41ನೇ ವಯಸ್ಸಿನಲ್ಲೂ ಯುವಕರು ನಾಚುವಂತೆ ಬ್ಯಾಟ್ ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಅಂತಿಮ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಇವರ ಆಟದ ಪರಿಣಾಮ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪಂದ್ಯ ಗೆಲ್ಲಲು 196 ಗುರಿಯನ್ನು ಪಾಕ್ ನೀಡಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಎಬಿಡಿ ಹಾಗೂ ಹಾಶಿಮ್ ಆಮ್ಲಾ ಮೈದಾನಕ್ಕೆ ಇಳಿದರು. ಈ ಜೋಡಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಹಾಕಿಕೊಂಡಿದ್ದ ಯೋಜನೆಯಂತೆ ಬ್ಯಾಟ್ ಮಾಡಿ ಬೀಗಿತು. ಈ ಜೋಡಿ ಆರಂಭದಲ್ಲಿ ಬಿರುಸಿನ ಆಟಕ್ಕೆ ಮುಂದಾಯಿತು. ಪರಿಣಾಮ ಬಿಗ್ ಸ್ಕೋರ್ ಸಹ ಸಲೀಸಾಗಿ ಚೇಸ್ ಮಾಡಬಹುದು ಎಂಬ ಲೆಕ್ಕಾಚಾರ ಆರಂಭವಾಯಿತು. ಮೊದಲ ವಿಕೆಟ್‌ಗೆ ದಕ್ಷಿಣ ಆಫ್ರಿಕಾ 6 ಓವರ್‌ಗಳಲ್ಲಿ 72 ರನ್ ಕಲೆ ಹಾಕಿತ್ತು.

ಹಾಶಿ ಮ್ ಆಮ್ಲಾ 18 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ಎಬಿಡಿ ಜೊತೆಗೂಡಿದ ಜೆಪಿ ಡುಮಿನಿ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಮೈ ಚಳಿ ಬಿಟ್ಟು ಬ್ಯಾಟ್ ಮಾಡಿದ ಈ ಜೋಡಿ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಲು ಪಾಕ್ ಬೌಲರ್‌ಗಳು ವಿಫಲರಾದರು. ಪ್ರಸಕ್ತ ಚಾಂಪಿಯನ್ ಶಿಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿರುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಮತ್ತೊಮ್ಮೆ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ಎಬಿಡಿ 47 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಇಷ್ಟಾದ್ರೂ ತಣ್ಣಗಾಗದ ಎಬಿಡಿ 60 ಎಸೆತಗಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 120 ರನ್ ಸಿಡಿಸಿದರು. ಇನ್ನೊಬ್ಬ ಆಟಗಾರ ಜೆಪಿ ಡುಮಿನಿ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೆಯ 50 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ದಕ್ಷಿಣ ಆಫ್ರಿಕಾ ಸವಾಲಿನ ಗುರಿಯನ್ನು 16.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಮುಟ್ಟಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಶಾರ್ಜೀಲ್ ಖಾನ್ ಅರ್ಧಶತಕ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಕಾಮ್ರಾನ್ ಅಕ್ಮಲ್ (2) ಬೇಗನೆ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ಮೊಹಮ್ಮದ್ ಹಫೀಜ್ (17) ಹಾಗೂ ಆರಂಭಿಕ ಶಾರ್ಜೀಲ್ ಖಾನ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿತು. ಶಾರ್ಜೀಲ್ ಖಾನ್ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಔಟ್ ಆದರು. ಉಳಿದಂತೆ ಶೋಯಿಬ್ ಮಲಿಕ್ (20), ಉಮ್ರಾನ್ ಮಲಿಕ್ (ಅಜೇಯ 36), ಅಸಿಫ್ ಅಲಿ (28) ತಂಡದ ಮೊತ್ತವನ್ನು ಹಿಗ್ಗಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications