ನಾನು ಇನ್ನಷ್ಟು ಬೇಗನೆ ಔಟಾಗಿದ್ರೆ ABDಯಿಂದ ಮತ್ತಷ್ಟು ರನ್ ಬರ್ತಿತ್ತು: ಫಿಂಚ್ ತಮಾಷೆ

ಶಾರ್ಜಾದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ 82 ರನ್‌ಗಳ ಅಮೋಘ ಗೆಲುವನ್ನ ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ. ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಬಗ್ಗೆ ಓಪನರ್ ಆ್ಯರೋನ್ ಫಿಂಚ್ ಮ್ಯಾಚ್ ಮಧ್ಯೆ ಕೊಂಡಾಡಿದ್ದಾರೆ.
ಪಂದ್ಯದ ಇನಿಂಗ್ಸ್ ಮಧ್ಯದಲ್ಲಿ ಈ ಬಗ್ಗೆ ವೀಕ್ಷಕವಿವರಣೆಗಾರರ ಜೊತೆಗೆ ಮಾತಿಗಳಿದ ಆರೊನ್ ಫಿಂಚ್, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿಡಿ ಅವರನ್ನು ಅತ್ಯಂತ ವಿಶೇಷ ಬ್ಯಾಟ್ಸ್‌ಮನ್ ಎಂದು ಹೊಗಳಿದ್ದಾರೆ.
"ಎಬಿಡಿ ವಿಶೇಷ ಬ್ಯಾಟ್ಸ್‌ಮನ್. ಪಿಚ್ ಹೇಗೇ ಇದ್ದರೂ ಬ್ಯಾಟಿಂಗ್ ಸುಲಭ ಎಂದಿ ತೋರಿಸಿಕೊಡುತ್ತಾರೆ. ಬಹುಶಃ ನಾನು ಮೊದಲೇ ಔಟ್ ಆಗಬೇಕಿತ್ತು. ಆಗ ಎಬಿಡಿ ಅವರಿಂದ ಮತ್ತಷ್ಟು ರನ್ ಹರಿದುಬರುತ್ತಿತ್ತು," ಎಂದು ಫಿಂಚ್ ತಮಾಷೆ ಮಾಡಿದರು.
ಇನ್ನು ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಿಂದಲೇ ಮುನ್ನುಗ್ಗಿ ಬೌಂಡರಿ ಬಾರಿಸುವ ಪ್ರಯತ್ನ ಮಾಡುತ್ತಿದ್ದ ಬಗ್ಗೆ ಮಾತನಾಡಿದ ಫಿಂಚ್, ಇದರ ಹಿಂದಿನ ರಣತಂತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ.
"ಕಳೆದ ಎರಡು ಮೂರು ಇನಿಂಗ್ಸ್‌ಗಳಲ್ಲಿ ಚೆಂಡನ್ನು ಹೆಚ್ಚು ಬಲವಾಗಿ ಹೊಡೆಯುವ ಪ್ರಯತ್ನ ಮಾಡುತ್ತಿದ್ದೆ. ಇಲ್ಲಿ ನನ್ನ ತಂತ್ರ ಬದಲಾಯಿಸಿಕೊಂಡೆ. ಚೆಂಡಿನ ನೇರದಲ್ಲು ಬಂದು ಬ್ಯಾಟ್ ಬೀಸುವ ಪ್ರಯತ್ನ ಮಾಡಿದೆ. ನಂತರ ಬ್ಯಾಟಿಂಗ್ ಕಷ್ಟವಾಯಿತು. ಹೆಚ್ಚು ಮಂದಗತಿಯ ಎಸೆತಗಳನ್ನು ಎಸೆದರು. ಆಫ್ ಕಟರ್ ಬಳಕೆ ಮಾಡಿದರು. ಬ್ಯಾಟಿಂಗ್ ಕಷ್ಟವಾಯಿತು," ಎಂದು ಫಿಂಚ್ ವಿವರಿಸಿದ್ದಾರೆ.
ಇದೇ ವೇಳೆ 194 ರನ್‌ಗಳನ್ನು ಕಾಯ್ದುಕೊಳ್ಳುವುದು ಸುಲಭವೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಫಿಂಚ್, ಆರ್‌ಸಿಬಿ ತಂಡ ಆರಂಭದಲ್ಲಿ 180 ರನ್‌ಗಳನ್ನು ಗಳಿಸುವ ಗುರಿ ಹೊಂದಿತ್ತು. ಆದರೆ ನಮ್ಮ ನಿರೀಕ್ಷೆಗೂ ಮೀರಿ ರನ್ ಬಂದಿದೆ ಎಂದು ಹೇಳಿದ್ದರು. ಆರ್‌ಸಿಬಿ ಕೆಕೆಆರ್ ಅನ್ನು 112ರನ್‌ಗಳಿಗೆ ಕಟ್ಟಿಹಾಕಿ 82ರನ್‌ಗಳ ಅಮೋಘ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications