For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಎಬಿಡಿ ಶತಕದ ಜೊತೆಯಾಟ: ಐಪಿಎಲ್‌ನಲ್ಲಿ ಹೊಸ ಮೈಲುಗಲ್ಲು

ABD-Virat Kohli New Milestone: 3000 Plus Runs Partnership In IPL

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಕೆಕೆಆರ್ ಬೌಲರ್‌ಗಳನ್ನ ಬೆಂಡೆತ್ತಿದ್ದು, ಕ್ಯಾಪ್ಟನ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೋಡಿ ಅಮೋಘ ಜೊತೆಯಾಟದ ಜೊತೆಗೆ ಐಪಿಎಲ್‌ನಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಆ್ಯರೋನ್ ಫಿಂಚ್ 47ರನ್ ಗಳಿಸಿ ಔಟಾದ್ರೆ, ದೇವದತ್ ಪಡಿಕ್ಕಲ್ ಅದಕ್ಕೂ ಮೊದಲು 32 ರನ್‌ಗೆ ರಸೆಲ್‌ ವಿಕೆಟ್ ಒಪ್ಪಿಸಿದ್ರು.

ಮೊದಲೆರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ವಿಶ್ವದ ಇಬ್ಬರು ಶ್ರೇಷ್ಟ ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಎಬಿ ಡಿ ವಿಲಿಯರ್ಸ್‌ ಶತಕದ ಜೊತೆಯಾಟದ ಮೂಲಕ ಆರ್‌ಸಿಬಿಗೆ ಬೃಹತ್ ಮೊತ್ತವನ್ನ ಕಲೆಹಾಕಿದ್ರು.

ಎಬಿಡಿ ಅಜೇಯ 73ರನ್‌ಗಳಿಸಿದ್ರೆ, ಕೊಹ್ಲಿ ಅಜೇಯ 33 ರನ್‌ ಕಲೆಹಾಕಿದ್ರು. ಈ ಫೇವರಿಟ್ ಜೋಡಿಯು ಕೆಕೆಆರ್ ವಿರುದ್ಧ ಶತಕ ಜೊತೆಯಾಟದ ಜೊತೆಗೆ ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಕೊಹ್ಲಿ-ಎಬಿಡಿ ಐಪಿಎಲ್‌ನಲ್ಲಿ 3000ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದ ಮೈಲುಗಲ್ಲನ್ನು ತಲುಪಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅದ್ರಲ್ಲೂ ಐಪಿಎಲ್‌ನಲ್ಲಿ ಫ್ರಾಂಚೈಸಿಯಿಂದ ಪ್ರಾಂಚೈಸಿಗೆ ಹಾರುವ ಪ್ಲೇಯರ್‌ಗಳು ಕಮ್ಮಿ ಇಲ್ಲ. ಅಂತದ್ರಲ್ಲಿ ಒಂದೇ ತಂಡದಲ್ಲಿದ್ದುಕೊಂಡು ಅಭಿಮಾನಿಗಳು ಸದಾ ರಂಜಿಸುವ ಎಬಿಡಿ-ಕೊಹ್ಲಿ ಜೊತೆಯಾಟದ ಮೂಲಕವೂ ಹೊಸ ಸಾಧನೆ ಮಾಡಿದ್ದಾರೆ.

ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 194ರನ್ ಕಲೆಹಾಕಿದ್ದು, ಕೆಕೆಆರ್ ಗೆಲುವಿಗೆ 195 ರನ್ ಗುರಿ ನೀಡಿದೆ.

Story first published: Tuesday, October 13, 2020, 9:57 [IST]
Other articles published on Oct 13, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+