ತಮ್ಮ ಅನೈತಿಕ ಸಂಬಂಧಗಳ ಕುರಿತಾಗಿ ಬಾಯ್ಬಿಟ್ಟ ಪಾಕ್‌ನ ಮಾಜಿ ಆಲ್‌ರೌಂಡರ್!

ಹೊಸದಿಲ್ಲಿ, ಜುಲೈ 18: ಒಂದು ಕಾಲದಲ್ಲಿ ಆಲ್‌ರೌಂಡರ್ ಇದ್ದರೆ ಹೀಗಿರಬೇಕು ಎನ್ನುವ ಮಟ್ಟಿಗೆ ಅತ್ಯಂತ ಪ್ರಭವಯುತ ಆಟಗಾರನಾಗಿದ್ದ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್, ಅಂದಿನ ನಾಯಕ ಇಂಝಮಾಮ್ ಉಲ್ ಹಕ್ ಅವರ ಆಯ್ಕೆಯ ಮೊದಲ ಆಟಗಾರ.
ತಮ್ಮ ಸೌಮ್ಯ ಸ್ವಭಾವ, ಜವಾಬ್ದಾರಿಯುತ ಬ್ಯಾಟಿಂಗ್ ಹಾಗು ಶಿಸ್ತಿನ ಬೌಲಿಂಗ್ ಮೂಲಕ ಗಮನ ಸೆಳೆದ ಆಟಗಾರ ರಝಾಕ್, ಆನ್‌ಫೀಲ್ಡ್‌ನಲ್ಲಿ ಅತಿಯಾಗಿ ವರ್ತಿಸಿದ ಘಟನೆಗಳೇ ಇಲ್ಲ ಎಂದು ಹೇಳಬಹುದು. ಆದರಿಗ ಇದೇ ಸೌಮ್ಯ ಸ್ವಭಾವದ ಆಟಗಾರನಿಂದ ಅಚ್ಚರಿಯ ಹೇಳಿಕೆಯೊಂದು ಹೊರಬಿದ್ದಿದೆ.
ಪಾಕಿಸ್ತಾನ ತಂಡದ ಪರ 265 ಏಕದಿನ ಪಂದ್ಯಗಳನ್ನು ಆಡಿರುವ ಅಬ್ದುಲ್ ರಝಾಕ್ ತಮಗೆ ಹಲವು ಅನೈತಿಕ ಸಂಬಂಧಗಳಿದ್ದವು ಎಂಬ ಅಚ್ಚರಿಯ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ. ಪಾಕಿಸ್ತಾನದ ಖಾಸಗಿ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಝಾಕ್, ತಮಗೆ ಕನಿಷ್ಠ 5ರಿಂದ 6 ಮಂದಿಯೊಂದಿಗೆ ಅನೈತಿಕ ಸಂಬಂಧವಿತ್ತು. ಅದರಲ್ಲು ಒಮ್ಮೆ ಒಂದೂವರೆ ವರ್ಷ ಕಾಲ ತಮ್ಮ ವಿವಾಹೇತರ ಸಂಬಂಧವನ್ನು ನಡೆಸಿಕೊಂಡು ಬಂದಿದ್ದಾಗಿ ರಝಾಕ್ ಹೇಳಿಕೊಂಡಿದ್ದಾರೆ.
ಇನ್ನು ಇದೇ ವೇಳೆ ನಿರೂಪಕ ಈ ಹೇಳಿಕೆಯ ಗಂಭೀರತೆಯನ್ನು ಅರಿತು ಈ ಅನೈತಿಕ ಸಂಬಂಧಗಳೆಲ್ಲಾ ವಿವಾಹಕ್ಕೂ ಮುಂಚೆ ಆಗಿರುವುದಲಕ್ಲವೇ ಎಂದೆಲ್ಲಾ ತಿಳಿಗೊಳಿಸುವ ಪ್ರಯತ್ನ ನಡೆಸಿದರಾದರೂ, ರಝಾಕ್ ತಾವು ಇವೆಲ್ಲವನ್ನೂ ವಿವಾಹದ ಬಳಿಕವೇ ಮಾಡಿರುವುದಾಗಿ ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಪಾಂಡ್ಯಗೆ ಮಾರ್ಗದರ್ಶನ ನೀಡಲು ಬಯಸಿದ್ದ ರಝಾಕ್
ಪಾಕಿಸ್ತಾನದ ಮಾಜಿ ಸ್ಟಾರ್ ಆಲ್‌ರೌಂಡರ್ ರಝಾಕ್, ಇತ್ತೀಚೆಗಷ್ಟೇ ತಾವು ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಆಗಿ ರೂಪಿಸಬಲ್ಲೆ ಎಂದು ಹೇಳಿಕೆ ನೀಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಪಂದ್ಯದ ಬಳಿಕ ಪಾಂಡ್ಯ ಅವರ ಆಟದ ಕುರಿತಾಗಿ ಮಾತನಾಡಿದ್ದ ರಝಾಕ್, "ಪಾಂಡ್ಯ ಅವರ ತಂತ್ರಗಾರಿಕೆಯಲ್ಲಿ ಕೊಂಚ ಕೊರತೆ ಇದೆ. ಬ್ಯಾಟಿಂಗ್ ವೇಳೆ ದೊಡ್ಡ ಹೊಡೆತಗಳನ್ನು ಆಡುವ ಸಂದರ್ಭದಲ್ಲಿ ಅವರ ದೇಹದ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಅವರ ಫುಟ್‌ವರ್ಕ್ ಕೂಡ ಗಮನಿಸಿದ್ದೇನೆ. ಅದರಿಂದಲೂ ಅವರು ಹಿನ್ನಡೆ ಅನುಭವಿಸುತ್ತಿದ್ದಾರೆ," ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದರು.
"ನಾನು ಅವರಿಗೆ ಕೋಚಿಂಗ್ ನೀಡುವುದಾದರೆ, ಉದಾಹರಣೆಗೆ ಯುಎಇನಲ್ಲಿ. ಅವರನ್ನು ವಿಶ್ವ ಶ್ರೇಷ್ಠ ಆಲ್‌ರೌಂಡರ್ ಮಾಡಬಲ್ಲೆ. ಪಾಂಡ್ಯ ಅವರನ್ನು ಅತ್ಯುತ್ತಮ ಆಲ್‌ರೌಂಡರ್ ಆಗಿ ಮಾಡುವ ಆಸೆ ಬಿಸಿಸಿಐಗೆ ಇದ್ದಲ್ಲಿ ನಾನು ಸದಾ ಸಿದ್ಧನಿದ್ದೇನೆ," ಎಂದು ರಝಾಕ್ ಟ್ವೀಟ್ ಮೂಲಕ ಪರೋಕ್ಷವಾಗಿ ಬಿಸಿಸಿಐ ಬಳಿ ಕೋಚಿಂಗ್ ಅವಕಾಶ ಕೋರಿದ್ದರು.

ಅಬ್ದುಲ್ ರಝಾಕ್ ಟೆಸ್ಟ್ ಸಾಧನೆ
46 ಪಂದ್ಯ
1946 ರನ್
134 ಗರಿಷ್
28.61 ಸರಾಸರಿ
03 ಶತಕ
07 ಅರ್ಧಶತಕ
100 ವಿಕೆಟ್
35ಕ್ಕೆ 5 ಶ್ರೇಷ್ಠ ಬೌಲಿಂಗ್

ಏಕದಿನ ಕ್ರಿಕೆಟ್‌ನಲ್ಲಿನ ಅಂಕಿ ಅಂಶ
265 ಪಂದ್ಯ
5080 ರನ್
112 ಗರಿಷ್
29.70 ಸರಾಸರಿ
03 ಶತಕ
23 ಅರ್ಧಶತಕ
269 ವಿಕೆಟ್
35ಕ್ಕೆ 6 ಶ್ರೇಷ್ಠ ಬೌಲಿಂಗ್

ಅಂತಾರಾಷ್ಟ್ರೀಯ ಟಿ20ಯಲ್ಲಿ ರಝಾಕ್ ಸಾಧನೆ
32 ಪಂದ್ಯ
393 ರನ್
46* ಗರಿಷ್ಠ
20.68 ಸರಾಸರಿ
116.61 ಸ್ಟ್ರೈಕ್‌ರೇಟ್
20 ವಿಕೆಟ್
13ಕ್ಕೆ 3 ಶ್ರೇಷ್ಠ ಬೌಲಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications