ಅಬಿಷೇಕ್ ಶರ್ಮಾ ಔಟ್: ಭಾರತಕ್ಕೆ ಆರಂಭಿಕ ಆಘಾತದ ನಡುವೆಯೂ ಪಾಕ್ ಬೌಲರ್‌ಗಳ ಬೆವರಿಳಿಸಿದ ಇಶಾನ್ ಕಿಶನ್
AbhiShek Sharma: ಕೊಲಂಬೊದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026 ಗುಂಪು ಎ ಹಂತದ ಮಹತ್ವದ ಪಂದ್ಯದಲ್ಲಿ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲೇ ದೊಡ್ಡ ಆಘಾತ ಎದುರಾಗಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಒಂದು ರನ್ ಗಳಿಸದೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದ್ದಾರೆ. ಆದರೂ, ಯಾವುದೇ ಭಯವಿಲ್ಲದೆ, ಬ್ಯಾಟಿಂಗ್ ಮುಂದುವರೆಸಿದ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ 77 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಘಾತದ ನಡುವೆಯೂ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮುಂದುವರೆಸಿದ್ದು, ಪಾಕ್ ಬೌಲರ್‌ಗಳ ಚಳಿ ಬಿಡಿಸುವ ಮೂಲಕ ವೇಗವಾಗಿ ರನ್ ಕಲೆಹಾಕಿದರು. ಇನ್ನೂ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಮತ್ತು ಪಾಕಿಸ್ತಾನ ನಾಯಕ ಅಘಾ ಪರಸ್ಪರ ಹ್ಯಾಂಡ್‌ಶೇಕ್ ಮಾಡಿಲ್ಲದಿರುವುದು ಗಮನ ಸೆಳೆದಿದೆ.

ಪಾಕ್ ಬೌಲರ್‌ಗಳಿಗೆ ಚಳಿ ಬಿಡಿಸಿದ ಇಶಾನ್ ಕಿಶನ್
ತಿಲಕ್ ವರ್ಮಾ ಅವರು ಶಾಂತ ರೀತಿಯಿಂದ ಆಟ ಮುಂದುವರೆಸಿದ್ದು, ಇಶಾನ್ ಕಿಶನ್ ಮಾತ್ರ ಸ್ಫೋಟಕ ಇನ್ನಿಂಗ್ ಆಡಿ ಕೇವಲ 40 ಬಾಲ್‌ಗಳಲ್ಲಿ 10 ಬೌಂಡರಿ, 3 ಸಿಕ್ಸ್‌ಗಳ ಸಹಿತ ಬರೋಬ್ಬರಿ 77 ರನ್ ಕಲೆಹಾಕಿ ವಿಕೆಟ್ ಒಪ್ಪಿದರು. ಆದರೆ, ಇವರು ಪಾಕ್ ಬೌಲರ್‌ಗಳಿಗೆ ಚಳಿ ಬಿಡಿಸಿದಂತೂ ಸತ್ಯ. ಅಷ್ಟರ ಮಟ್ಟಿಗೆ ಪ್ರತಿ ಬಾಲ್‌ಗಳನ್ನು ಬೌಂಡರಿ ಲೈನ್‌ಗೆ ತಳ್ಳುವತ್ತ ಪ್ರಯತ್ನ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದಿದ್ದು, ಸಿಡಿಲಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಇಶಾನ್ ಕಿಶನ್ ಪಾಕಿಸ್ತಾನ ಬೌಲರ್‌ಗಳ ಮೇಲೆ ದಾಳಿ ನಡೆಸುತ್ತಾ ವೇಗವಾಗಿ ರನ್ ಗಳಿಸಿದರು. ಅವರು ಕೇವಲ 40 ಬಾಲ್‌ಗಳಲ್ಲಿ 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪ್ರದರ್ಶನದ ಮೂಲಕ ಪಾಕಿಸ್ತಾನ ವಿರುದ್ಧ ಭಾರತೀಯ ಆಟಗಾರನೊಬ್ಬ ಗಳಿಸಿದ ಮೂರನೇ ಅತ್ಯಧಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಗಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.
ಅಷ್ಟೇ ಅಲ್ಲದೆ, ಈ ಇನ್ನಿಂಗ್ಸ್‌ನೊಂದಿಗೆ ಇಶಾನ್ ಕಿಶನ್ ಹಲವು ವೈಯಕ್ತಿಕ ದಾಖಲೆಗಳನ್ನು ಮುರಿದು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಅವರ ಆಕ್ರಮಣಕಾರಿ ಆಟದಿಂದ ಭಾರತ ತಂಡ ಆರಂಭದಲ್ಲೇ ಉತ್ತಮ ವೇಗ ಪಡೆದು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇಶಾನ್ ಕಿಶನ್ ಅವರ ಈ ಸ್ಫೋಟಕ ಪ್ರದರ್ಶನವು ಭಾರತ ತಂಡಕ್ಕೆ ಆತ್ಮವಿಶ್ವಾಸ ತುಂಬಿದೆ.
ಪಾಕಿಸ್ತಾನ ವಿರುದ್ಧ ಟಿ20 ಕ್ರಿಕೆಟ್ ಸ್ವರೂಪದಲ್ಲಿ ಭಾರತ ಪರ ಅತ್ಯಧಿಕ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇದ್ದಾರೆ. ಕೊಹ್ಲಿ 2022ರಲ್ಲಿ ಅಜೇಯ 82 ರನ್‌ಗಳನ್ನು ಗಳಿಸಿದರೆ, 2012ರಲ್ಲಿ ಅಜೇಯ 78 ರನ್‌ಗಳನ್ನು ಸಿಡಿಸುವ ಮೂಲಕ ಈ ದಾಖಲೆಗನ್ನು ಬರೆದಿದ್ದರು. ಇದೀಗ ಇಶಾನ್ ಕಿಶನ್ ಅವರು 77 ರನ್‌ಗಳ ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೌತಮ್ ಗಂಭೀರ್ ನಾಲ್ಕನೇ ಸ್ಥಾನ, ಅಭಿಷೇಕ್ ಶರ್ಮಾ 74 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ತಂಡದಲ್ಲಿ ಎರಡು ಪ್ರಮುಖ ಬದಲಾವಣೆ
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಸಂಜು ಸ್ಯಾಮ್ಸನ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟು, ಅಭಿಷೇಕ್ ಶರ್ಮಾ ಹಾಗೂ ಕುಲ್ದೀಪ್ ಯಾದವ್ ಅವರನ್ನು ಸೇರಿಸಿಕೊಂಡಿದೆ. ಪಾಕಿಸ್ತಾನ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ. ಪಂದ್ಯವು ಕೊಲಂಬೊದಲ್ಲಿನ ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಎಲ್ಲರ ಗಮನ ಈಗ ಈ ಹೈವೋಲ್ಟೇಜ್ ಮಹಾಸಮರದತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications