ಅಂದು ಸಚಿನ್, ವಿರಾಟ್ ಪಾಕ್ ಆಟಗಾರರನ್ನು ಕಾಡಿದ್ರೆ, ಇಂದು ಈ ಪ್ಲೇಯರ್ ಭಯ
ಭಾರತ ಹಾಗೂ ಪಾಕಿಸ್ತಾನ ತಂಡಕ್ಕೆ ಅದರದ್ದೇ ಆದ ಇತಿಹಾಸ ಇದೆ. ಈ ಎರಡೂ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ಜಿದ್ದು ಕಂಡು ಬರುತ್ತದೆ. ಆರಂಭದಲ್ಲಿ ಉಭಯ ತಂಡಗಳು ಕಣಕ್ಕೆ ಇಳಿದಾದ ಬ್ಯಾಟಿಂಗ್ ವರ್ಸಸ್ ಬೌಲಿಂಗ್ ಎಂಬ ಕಲ್ಪನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ ಅಷ್ಟೇ ಅಲ್ಲ. ಬೌಲಿಂಗ್‌ನಲ್ಲೂ ತನ್ನ ಛಾಪು ಮೂಡಿಸುತ್ತದೆ. ಈ ಮೂಲಕ ಎದುರಾಳಿಗಳಿಗೆ ತನ್ನ ಭಯವನ್ನು ಹುಟ್ಟುಹಾಕಿದೆ.
ಟೀಮ್ ಇಂಡಿಯಾ ಪರ ಅಂದು ಕಣಕ್ಕೆ ಇಳಿಯುತ್ತಿದ್ದ ಸುನಿಲ್ ಗವಾಸ್ಕರ್ ಹೆಸರು ಕೆಳಿದ್ರೆ, ಪಾಕ್ ಬೌಲರ್‌ಗಳು ಸಹ ಹೆದರುತ್ತಿದ್ದರು. ಇವರು ನಿವೃತ್ತಿ ಪಡೆದರು ಇನ್ನು ನಾವು ಮೇಲುಗೈ ಸಾಧಿಸಬಹುದು ಎಂಬ ಯೋಚನೆಯಲ್ಲಿದ್ದ ಪಾಕ್‌ಗೆ ಸಚಿನ್ ತೆಂಡೂಲ್ಕರ್ ಎಂಬ ಬ್ಯಾಟಿಂಗ್ ಮಾಂತ್ರಿಕ ಬಹುವಾಗಿ ಕಾಡಿದರು. ಇವರು ಪಾಕ್ ತಂಡದ ಹೆಸರಾಂತ ಬೌಲರ್‌ಗಳನ್ನು ತಮ್ಮ ಬ್ಯಾಟ್ ಎಂಬ ಮಂತ್ರದಂಡದಿಂದ ಬಹುವಾಗಿ ದಂಡಿಸಿದ್ದಾರೆ. ಇವರ ಕ್ರಿಕೆಟ್‌ನಿಂದ ಸನ್ಯಾಸ ಪಡೆಯುವ ವೇಳೆಗೆ ಪಾಕಿಗಳಿಗೆ ಡೆಲ್ಲಿ ಯಂಗ್ ಪ್ಲೇಯರ್ ಭಯ ಹುಟ್ಟಿತ್ತು.

ವಿರಾಟ್ ಕೊಹ್ಲಿ.. ಪಾಕಿಸ್ತಾನ ಎಂದು ನೆನಪು ಹಾರದ ಹೆಸರುಗಳಲ್ಲಿ ಇದು ಒಂದು. ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕುವುದು ಹೇಗೆ ಎಂಬುದೇ ಪಾಕ್ ಆಟಗಾರರಿಗೆ ದೊಡ್ಡ ತಲೆ ನೋವು. ಇವರು ಪಾಕ್ ತಂಡದ ಸ್ಟಾರ್ ಬೌಲರ್‌ಗಳನ್ನು ಬೆಂಬಿಡದೆ ಕಾಡಿದ್ದಾರೆ. ಇವರು ಕಳೆದ ಟಿ20 ವಿಶ್ವಕಪ್ ಬಳಿಕ ಚುಟುಕು ಫಾರ್ಮೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈಗ ಭಾರತದ ಪರ ಈ ಪ್ಲೇಯರ್ ಆಡುತ್ತಿಲ್ಲ. ಆದ್ರೂ ಪಾಕ್‌ಗೆ ನೆಮ್ಮದಿ ಮಾತ್ರ ಇಲ್ಲ. ಕಾರಣ ಟೀಮ್ ಇಂಡಿಯಾದ ಯಂಗ್ ಪ್ಲೇಯರ್.
ಆ ಯಂಗ್ ಪ್ಲೇಯರ್ ಯಾರು?
ಟೀಮ್ ಇಂಡಿಯಾದಲ್ಲಿ ಸದ್ಯ ಭವಿಷ್ಯದ ಆಟಗಾರರ ದಂಡೇ ಇದೆ. ಈ ವೇಳೆ ಎದು ಕಾಣುವ ಹೆಸರುಗಳಲ್ಲಿ ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಶುಭಮನ್ ಗಿಲ್ ಟೆಸ್ಟ್‌ನಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಎದುರಾಳಿಗಳಿಗೆ ಕಾಡುತ್ತಿದ್ದರೆ, ಅಭಿಷೇಕ್ ಶರ್ಮಾ ಚುಟುಕು ಫಾರ್ಮೆಟ್‌ನಲ್ಲಿ ಆರ್ಭಟಿಸುತ್ತಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಪಂಜಾಬ್‌ನ ಅಭಿಷೇಕ್ ತನ್ನ ಅಮೋಘ ಬ್ಯಾಟಿಂಗ್ ಕಲೆಯಿಂದ ಎದುರಾಳಿಗಳಿಗೆ ಕಾಡಿದ್ದಾರೆ. ಸದ್ಯ ಪಾಕಿಸ್ತಾನಕ್ಕೆ ಇವರ ಭಯ ಆರಂಭವಾಗಿದೆ.

ಪಾಕಿಸ್ತಾನ ತಂಡದ ಮಾಜಿ ಆಟಗಾರರ ನಾಲಿಗೆಯ ಮೇಲೂ ಈಗ ಈ ಸ್ಫೋಟಕ ಬ್ಯಾಟರ್ ಹೆಸರು ರಾರಾಜಿಸುತ್ತಿದೆ. ಇವರು ಬಿರುಸಿನ ಬ್ಯಾಟಿಂಗ್ ಮಾಡುವಲ್ಲಿ ಹೆಸರುವಾಸಿ. ಇವರು ಬೌಲರ್‌ಗಳಿಗೆ ಸೆಟ್ಲ್ ಆಗಲು ಬಿಡುವುದಿಲ್ಲ. ಸೂಪರ್ 4 ಹಂತದಲ್ಲಿ ಪಾಕ್ ತಂಡದ ಸ್ಟಾರ್ ವೇಗದ ಬೌಲರ್ ಶಾಹಿನ್ ಶಾ ಆಫ್ರಿದಿ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ನಡುಕ ಹುಟ್ಟಿಸಿದ್ದ ಅಭಿಷೇಕ್, ಮತ್ತೊಂದು ಬಿಗ್ ಇನಿಂಗ್ಸ್ ಕಟ್ಟಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪ್ಲೇಯರ್ ಒಬ್ಬನನ್ನು ಕಟ್ಟಿ ಹಾಕಿದರೆ ಸಾಕಪ್ಪ ಎಂಬ ಚಿಂತೆಯಲ್ಲಿ ಪಾಕ್ ಇದೆ. ಇದಕ್ಕೆ ಕಾರಣ ಇವರ ಸ್ಫೋಟಕ ಬ್ಯಾಟಿಂಗ್. ಇವರು ಸದ್ಯ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿರುವ ಬ್ಯಾಟರ್. ಇವರ ಆಟಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬ ಚರ್ಚೆಗಳು ಆರಂಭವಾಗಿವೆ. ಅಲ್ಲದೆ ಅಭಿಷೇಕ್ ಅವರ ಸ್ಟ್ರೈಕ್ ರೇಟ್ ಪಾಕ್ ತಲೆ ಕೆಡಿಸಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತ ವಿರುದ್ಧ ಪಾಕ್ ಯಾವ ತಂತ್ರವನ್ನು ಅನುಸರಿಸಲಿದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications