For Quick Alerts
ALLOW NOTIFICATIONS  
For Daily Alerts
 

ICC Rankings: ಅಭಿಷೇಕ್‌ ಶರ್ಮಾ ಇತಿಹಾಸ: ವರುಣ್‌ ಚಕ್ರವರ್ತಿ ನಂಬರ್ 1 ಬೌಲರ್

ಭಾರತದ ಆಟಗಾರರು ಸದ್ಯ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ವೇಳೆ "ಎ" ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಭಾರತ ತಂಡ ಸೂಪರ್‌ 4 ಹಂತಕ್ಕೆ ಅರ್ಹತೆ ಪಡೆದಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಸ್ಥಿರ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ತಮ್ಮ ಸ್ಥಿರ ಪ್ರದರ್ಶನದಿಂದ ಐಸಿಸಿ ಟಿ20 ಶ್ರೇಯಾಂಕದಲ್ಲಿ ಇತಿಹಾಸ ಬರೆದಿದ್ದಾರೆ. ಅಲ್ಲದೆ ವರುಣ್‌ ಚಕ್ರವರ್ತಿ ನಂಬರ್‌ 1 ಸ್ಥಾನವನ್ನು ಅಲಂಕರಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್‌ ವರುಣ್ ಚಕ್ರವರ್ತಿ 733 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಜಾಕೋಬ್ ಡಫಿ ಎರಡು ಹಾಗೂ ವೆಸ್ಟ್‌ ಇಂಡೀಸ್‌ನ ಅಕೀಲ್ ಹೊಸೇನ್ 3ನೇ ಸ್ಥಾನದಲ್ಲಿದ್ದಾರೆ.

Abhishek Sharma retains top T20I rank as Varun Chakravarthy climbs to No 1 spot

ಅಭಿಷೇಕ್‌ ಶರ್ಮಾ ಏಷ್ಯಾ ಕಪ್‌ ಟಿ20 ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇವರು ಯುಎಇ ಹಾಗೂ ಪಾಕಿಸ್ತಾನ ವಿರುದ್ಧ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಟಿ20 ಶ್ರೇಯಾಂಕದಲ್ಲಿ ನಂಬರ್‌ ಒನ್ ಬ್ಯಾಟರ್ ಆಗಿದ್ದಾರೆ. ಸದ್ಯ ಇವರು 884 ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ. ಇದು ಅಭಿಷೇಕ್ ಶರ್ಮಾ ಅವರ ಸಾರ್ವಕಾಲಿಕ ಉನ್ನತ ಶ್ರೇಯಾಂಕವಾಗಿದ್ದು, ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಆಕ್ರಮಣಕಾರಿ ಶತಕ ಬಾರಿಸಿ ಸದ್ದು ಮಾಡಿದ್ದರು. ಇವರ ಅಬ್ಬರದ ಪ್ರದರ್ಶನದ ಫಲವಾಗಿ ಶ್ರೇಯಾಂಕದಲ್ಲಿ 2ನೇ ಸ್ಥಾನ ತಲುಪಿದ್ದು 838 ರೇಟಿಂಗ್ ಪಾಯಿಂಟ ಕಲೆ ಹಾಕಿದ್ದಾರೆ.

ತಿಲಕ್, ಸೂರ್ಯ ಕುಸಿತ

ಭಾರತದ ಭರವಸೆಯ ಬ್ಯಾಟರ್ ತಿಲಕ್‌ ವರ್ಮಾ ಎರಡು ಸ್ಥಾನ ಇಳಿಕೆ ಕಂಡಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಜೋಸ್‌ ಬಟ್ಲರ್ ಇದ್ದು 794 ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಶ್ರೇಯಾಂಕದಲ್ಲೂ ಕುಸಿತ ಕಂಡಿದ್ದು, ಇವರು ಸದ್ಯ ಏಳನೇ ಸ್ಥಾನದಲ್ಲಿದ್ದಾರೆ.

Abhishek Sharma retains top T20I rank as Varun Chakravarthy climbs to No 1 spot

ಇನ್ನು ಬೌಲರ್‌ಗಳ ಶ್ರೇಯಾಂಕದಲ್ಲಿ ಕುಲ್‌ದೀಪ್‌ ಯಾದವ್ 16 ಸ್ಥಾನ ಜಿಗಿತ ಕಂಡಿದ್ದಾರೆ. ಇವರು ಯುಎಇ ವಿರುದ್ಧ 4 ಹಾಗೂ ಪಾಕಿಸ್ತಾನ ವಿರುದ್ಧ 3 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೆ ಈ ಎರಡೂ ಪಂದ್ಯಗಳಲ್ಲಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಇವರ ಸ್ಥಿರ ಪ್ರದರ್ಶನದ ಲಾಭ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲೂ ಆಗಿದೆ. ಕುಲ್‌ದೀಪ್‌ ಯಾದವ್ 604 ರೇಟಿಂಗ್ ಪಾಯಿಂಟ್‌ಗಳಂದಿಗೆ 23ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ ಒಂದು ಸ್ಥಾನ ಏರಿಕೆ ಕಂಡಿದ್ದು, 12ನೇ ಸ್ಥಾನ ಹೊಂದಿದ್ದಾರೆ. ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದು, ಮೈದನಾಕ್ಕೆ ಇಳಿಯದ ಅರ್ಷದೀಪ್‌ ಸಿಂಗ್ 5 ಸ್ಥಾನ ಕುಸಿತ ಕಂಡಿದ್ದಾರೆ.

Story first published: Wednesday, September 17, 2025, 14:54 [IST]
Other articles published on Sep 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+