Abhishek Sharma: ಮಾಯಾ ನಗರಿಯಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ಉದಯ: ಅಭಿಷೇಕ್ ದಾಖಲೆಯ ಆಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ಮುಂಬೈನ ವಾಂಖೇಡೆಯಲ್ಲಿ ದಾಖಲೆಗಳ ದಾಖಲೆಗಳನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡುವ ಅಭಿಷೇಕ್, ಭಾನುವಾರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಇವರು ಟೀಮ್ ಇಂಡಿಯಾ ತನ್ನ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ಮಾಡಿದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಗೆ ತನ್ನ ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡರು.
ಭಾನುವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಸಾಧಾರಣವಾಗಿತ್ತು. ಸಂಜು ಸ್ಯಾಮ್ಸನ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಎರಡನೇ ವಿಕೆಟ್‌ಗೆ ಆರಂಭಿಕ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ವೇಳೆ ಅಭಿಷೇಕ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಗಮನ ಸೆಳೆದರು. ಇವರು ಮುಂಬೈನಲ್ಲಿ ಬ್ಯಾಟ್ ಮಾಡುತ್ತಿದ್ದರೆ, ಇವರ ಗುರು ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಿದ ಹಾಗೆ ಅನಿಸಿತು.

ಅಂದು ಇಂಗ್ಲೆಂಡ್ ತಂಡವನ್ನು ಗುರು ಯುವರಾಜ್ ಸಿಂಗ್ ಕಾಡಿದರೆ, ಇಂದು ಅದೇ ಇಂಗ್ಲೆಂಡ್ ತಂಡವನ್ನು ಶಿಷ್ಯ ಅಭಿಷೇಕ್ ಶರ್ಮಾ ದಂಡಿಸಿದರು. ತಮ್ಮ ನೈಜ ಶೈಲಿಯ ಬ್ಯಾಟಿಂಗ್ ಮಾಡಿದ ಅಭಿಷೇಕ್ ಹಲವು ದಾಖಲೆಗಳನ್ನು ಬರೆದರು. ಇವರು ತಮ್ಮ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ಅಭಿಷೇಕ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದರು.
ಅಭಿಷೇಕ್ ಶರ್ಮಾ ತಮ್ಮ ನೈಜ ಆಟವಾಡಿ ಹಲವು ದಾಖಲೆಗಳನ್ನು ಬರೆದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಇಂಗ್ಲೆಂಡ್ ತಂಡದ ಬೌಲರ್‌ಗಳು ವಿಫಲರಾದರು. ಮೊದಲ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿದರು. ಇವರು 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ಮುಂದಿನ 50 ರನ್ ಸಿಡಿಸಲು ಅಭಿಷೇಕ್ ಶರ್ಮಾ 20 ಎಸೆತಗಳನ್ನು ತೆಗೆದುಕೊಂಡರು. ಇವರು ಒಟ್ಟಾರೆ ಮೂರುಂಕಿಯನ್ನು ಮುಟ್ಟಲು 37 ಎಸೆತಗಳನ್ನು ತೆಗೆದುಕೊಂಡರು. ಇವರ ಅಮೋಘ ಶತಕದಲ್ಲಿ 5 ಬೌಂಡರಿ, 10 ಸಿಕ್ಸರ್‌ಗಳು ಸೇರಿವೆ.
ಅಭಿಷೇಕ್ ದಾಖಲೆ
ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್ ಸೇರಿದಂತೆ 135 ರನ್ ಸಿಡಿಸಿದರು. ಈ ಮೂಲಕ ಅಭಿಷೇಕ್ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಶುಭಮನ್ ಗಿಲ್ ಅವರ ಹೆಸರಿನಲ್ಲಿತ್ತು.
ಅಭಿಷೇಕ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 247 ರನ್ ಸಿಡಿಸಿತು. ಇವರನ್ನು ಬಿಟ್ಟರೆ ಶಿವಂ ದುಬೆ 13 ಎಸೆತಗಳಲ್ಲಿ 30 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸೆ 3, ಮಾರ್ಕ್ ವುಡ್ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications