Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Abhishek Sharma: 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್

ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡಗಳು 19ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಸ್‌ಆರ್‌ಎಚ್‌ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸ್ಫೋಟಕ ಆಟವಾಡಿ ತಂಡಕ್ಕೆ ಆಧಾರವಾದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪವರ್‌ಪ್ಲೇನಲ್ಲಿ ಅರ್ಧಶತಕ ಗಳಿಸುವ ಮೂಲಕ ಅವರು ತಮ್ಮದೇ ಆದ ದಾಖಲೆಯನ್ನು ಅಳಿಸಿಹಾಕಿದರು.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಜೋಡಿ ಬಳಿಕ ಆರ್ಭಟಿಸಿತು. ಸನ್‌ ತಂಡದ ಪರ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್‌ ಶರ್ಮಾ ಅಬ್ಬರದ ಆಟವಾಡಿದರು. ಈ ಜೋಡಿ 4 ಓವರ್‌ಗಳಲ್ಲಿ 38 ರನ್‌ ಗಳಿಸಿತ್ತು. ಆದರೆ ಐದನೇ ಓವರ್ ಬೌಲ್ ಮಾಡಿದ ಮ್ಯಾಥ್ಯೂ ಶಾರ್ಟ್ 25 ರನ್‌ ನೀಡಿ ದುಬಾರಿಯಾದರು. ಈ ಮೂಲಕ ಹೈದರಾಬಾದ್ ತಂಡ 5 ಓವರ್‌ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳಿಸಿತು.

Abhishek Sharma

ರನ್‌ ಸುರಿಮಳೆ

ಶಾರ್ಟ್‌ ಮಾಡಿದ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಟ್ರಾವಿಸ್ ಹೆಡ್‌ ಸಿಂಗಲ್ ರನ್ ಪಡೆದರು. ನಂತರದ ಮೂರು ಎಸೆತಗಳಲ್ಲಿ ಎಡಗೈ ಆಟಗಾರ ಅಭಿಷೇಕ್‌ ಶರ್ಮಾ ಬೌಂಡರಿ ಬಾರಿಸಿದರು. ಅಲ್ಲದೆ ನಂತರದ ಎರಡು ಎಸೆತಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್ ಬಾರಿಸಿದ ಅಭಿಷೇಕ್ ಅಬ್ಬರಿಸಿದರು. ಈ ಮೂಲಕ ಅಭಿಷೇಕ್‌ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮದೇ ದಾಖಲೆಯನ್ನು ಉತ್ತಮವಾಗಿಸಿಕೊಂಡರು.

SRH ಪರ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್‌ಗಳು
15 ಎಸೆತಗಳು - ಅಭಿಷೇಕ್ ಶರ್ಮಾ, ಸಿಎಸ್‌ಕೆ ವಿರುದ್ಧ
16 ಎಸೆತಗಳು - ಅಭಿಷೇಕ್ ಶರ್ಮಾ, ಮುಂಬೈ ವಿರುದ್ಧ
16 ಎಸೆತಗಳು - ಟ್ರಾವಿಸ್ ಹೆಡ್, ಡೆಲ್ಲಿ ವಿರುದ್ಧ
16 ಎಸೆತಗಳು - ಟ್ರಾವಿಸ್ ಹೆಡ್, ಎಲ್‌ಎಸ್‌ಜಿ ವಿರುದ್ಧ

ಸ್ಪರ್ಧಾತ್ಮಕ ಗುರಿ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡದ ಪರ ಟ್ರಾವಿಸ್ ಹೆಡ್ (23) ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 75 ರನ್‌ ಕಾಣಿಕೆ ನೀಡಿದರು. ನಾಯಕ ಇಶಾನ್‌ ಕಿಶನ್‌ ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 59 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್‌ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಕ್ಲಾಸೆನ್‌ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 59 ರನ್ ಬಾರಿಸಿದರು. ಅಂತಿಮವಾಗಿ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ರನ್‌ ಸೇರಿಸಿತು. ಸಿಎಸ್‌ಕೆ ಪರ ಅನ್ಶುಲ್ ಕಾಂಬೋಜ್, ಜೆಮಿ ಓವರ್‌ಟನ್‌ ತಲಾ 3 ವಿಕೆಟ್ ಪಡೆದರು.

Story first published: Saturday, April 18, 2026, 21:16 [IST]
Other articles published on Apr 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+