Abhishek Sharma: ಮುಂಬೈನಲ್ಲಿ ಅಭಿಷೇಕ್ ಶರ್ಮಾ ಸುನಾಮಿಗೆ ದಾಖಲೆಗಳು ಉಡೀಸ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಭಾನುವಾರದ ಮಜೆಯನ್ನು ಹೆಚ್ಚಿಸಿದ್ದಾರೆ. ಮುಂಬೈನ ವಾಂಖೇಡೆ ಅಂಗಳದಲ್ಲಿ ಸುನಾಮಿ ಬ್ಯಾಟಿಂಗ್ ಪ್ರದರ್ಶನಕ್ಕೆ, ಎದುರಾಳಿ ಬೌಲರ್‌ಗಳು ಥಂಡಾ ಹೊಡೆದರು. ಇವರ ಪವರ್ ಫುಲ್ ಹಿಟ್ಟಿಂಗ್ ಕಂಡು ಅಭಿಮಾನಿಗಳು ಫುಲ್ ಖುಷ್. ಇಂಗ್ಲೆಂಡ್ ತಂಡದ ಯಾವುದೇ ಬೌಲರ್ ವಿರುದ್ಧವೂ ಸೂರ್ಯ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು.
ಮುಂಬೈನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ದಾಖಲೆಯ ಮೊತ್ತವನ್ನು ಕಲೆ ಹಾಕಿತು. ನೆರೆದ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡಿದ ಅಭಿಷೇಕ್ ಶರ್ಮಾ, ತಮ್ಮ ಟಿ20 ಕ್ರಿಕೆಟ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿ ಮಿಂಚಿದರು. ಇಂಗ್ಲೆಂಡ್ ವಿರುದ್ಧ ಇವರ ಸ್ಫೋಟಕ ಆಟಕ್ಕೆ ಹಲವು ದಾಖಲೆಗಳು ಅಳಿಸಿದವು. ಅವರು ಬರೆದಿರುವ ಹೊಸ ದಾಖಲೆಗಳ ಪಟ್ಟಿ ಇಲ್ಲಿದೆ.

ದಾಖಲೆಗಳ ಒಡೆಯ
ಅಭಿಷೇಕ್ ಶರ್ಮಾ ಬ್ಯಾಟಿಂಗ್ ವ್ಯಾಕರಣಗಳನ್ನು ಯುವರಾಜ್ ಸಿಂಗ್ ಅವರಲ್ಲಿ ಕಲಿತಿದ್ದಾರೆ. ಇವರ ಶಾಟ್ ಸೆಲೆಕ್ಷನ್‌ನಲ್ಲಿ ಅವರ ಛಾಪು ಕಾಣುತ್ತದೆ. ಇವರು ಐದನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಭಾರತದ ಪರ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ
12 ಎಸೆತ, ಯುವರಾಜ್ ಸಿಂಗ್, 2007, ಇಂಗ್ಲೆಂಡ್ ವಿರುದ್ಧ
17 ಎಸೆತ, ಅಭಿಷೇಕ್ ಶರ್ಮಾ, 2024, ಇಂಗ್ಲೆಂಡ್ ವಿರುದ್ಧ
18 ಎಸೆತ, ಕೆಎಲ್ ರಾಹುಲ್, 2021, ಸ್ಕಾಟ್ಲೆಂಟ್ ವಿರುದ್ಧ
18 ಎಸೆತ, ಸೂರ್ಯಕುಮಾರ್ ಯಾದವ್, 2022 ದಕ್ಷಿಣ ಆಫ್ರಿಕಾ ವಿರುದ್ಧ
2 ಎಸೆತದಲ್ಲಿ ಜಸ್ಟ್ ಮಿಸ್
ಅಭಿಷೇಕ್ ಶರ್ಮಾ ದೊಡ್ಡ ದಾಖಲೆಯನ್ನು ಜಸ್ಟ್ 2 ಎಸೆತಗಳಲ್ಲಿ ಮಿಸ್ ಮಾಡಿಕೊಂಡರು. ಇವರು ಐಸಿಸಿ ಸದಸ್ಯ ರಾಷ್ಟ್ರಗಳ ಪರ ವೇಗವಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮೊದಲು ರೋಹಿತ್ ಶರ್ಮಾ, ಡೇವಿಡ್ ಮಿಲ್ಲರ್ ಇಬ್ಬರು 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ ಶತಕ ಬಾರಿಸಿದರು.

ವೇಗದ ಶತಕ ಸಿಡಿಸಿದ ಬ್ಯಾಟರ್‌ಗಳು
35 ಎಸೆತ, ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧ
35 ಎಸೆತ, ಡೇವಿಡ್ ಮಿಲ್ಲರ್, ಬಾಂಗ್ಲಾದೇಶ ವಿರುದ್ಧ
37 ಎಸೆತ, ಅಭಿಷೇಕ್ ಶರ್ಮಾ, ಇಂಗ್ಲೆಂಡ್ ವಿರುದ್ಧ
ಸಿಕ್ಸರ್‌ಗಳ ಸುರಿಮಳೆ
ಅಭಿಷೇಕ್ ಶರ್ಮಾ ವಿಸ್ಫೋಟಕ ಆಟಕ್ಕೆ ಹಲವು ದಾಖಲೆಗಳು ನೆಲಕಚ್ಚಿದವು. ಅದರಲ್ಲಿ ಸಿಕ್ಸರ್‌ಗಳ ದಾಖಲೆ ಸಹ ಒಂದು. ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಅಭಿಷೇಕ್ ಶರ್ಮಾ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್
ಅಭಿಷೇಕ್ ಶರ್ಮಾ, 13 ಸಿಕ್ಸರ್
ರೋಹಿತ್ ಶರ್ಮಾ, 10 ಸಿಕ್ಸರ್
ಸಂಜು ಸ್ಯಾಮ್ಸನ್, 10 ಸಿಕ್ಸರ್
ತಿಲಕ್ ವರ್ಮಾ, 10 ಸಿಕ್ಸರ್
ಸೂರ್ಯಕುಮಾರ್ ಯಾದವ್, 9 ಸಿಕ್ಸರ್
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಬಾರಿಸಿದ ಹಿರಿಮೆ ಇವರದ್ದಾಗಿದೆ. ಇವರು 135 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಶುಭಮನ್‌ಗಿಲ್ ಅವರ ಹೆಸರಿನಲ್ಲಿತ್ತು. ಶುಭಮನ್ ಗಿಲ್ 126 ರನ್ ಸಿಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications