
ಅಬುಧಾಬಿ ಟಿ10 ಲೀಗ್ 2021ನೇ ಆವೃತ್ತಿಯಲ್ಲಿ ನಾರ್ಥರ್ನ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಬುಲ್ಸ್ ವಿರುದ್ಧ 8 ವಿಕೆಟ್‌ಗಳ ಗೆಲುವನ್ನು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ನಾರ್ಥರ್ನ್ ವಾರಿಯರ್ಸ್ ನಿಗದಿತ 10 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತು. ಈ ಮೊತ್ತವನ್ನು ಕೇವಲ ಎರಡು ವಿಕೆಟ್ ಕಳೆದುಕೊಂಡು 8.2 ಓವರ್‌ಗಳಲ್ಲಿ ಬೆನ್ನಟ್ಟುವಲ್ಲಿ ನಾರ್ಥರ್ನ್ ವಾರಿಯರ್ಸ್ ಯಶಸ್ವಿಯಾಯಿತು. ಈ ಮೂಲಕ ನಾರ್ಥರ್ನ್ ವಾರಿಯರ್ಸ್ ಎರಡನೇ ಬಾರಿಗೆ ಅಬುದಾಬಿ ಟಿ10 ಲೀಗ್‌ನ ಚಾಂಪಿಯನ್ ಎನಿಸಿದೆ.
ಈ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಪಡೆದ ಆಟಗಾರರು ಹಾಗೂ ದಾಖಲೆ ಅಂಕಿಅಂಶಗಳ ಪಟ್ಟಿಯನ್ನು ನೋಡೋಣ:
ಪಂದ್ಯ ಶ್ರೇಷ್ಠ ಆಟಗಾರ: ಮಹೀಶ್ ಥೀಕ್ಷಾನಾ (ವಾರಿಯರ್ಸ್)
ಸರಣಿ ಶ್ರೇಷ್ಠ ಆಟಗಾರ: ನಿಕೋಲಸ್ ಪೂರನ್ (ವಾರಿಯರ್ಸ್)
ಟೂರ್ನಿಯ ಶ್ರೇಷ್ಠ ಯುಎಇ ಬ್ಯಾಟ್ಸ್‌ಮನ್: ಸೊಹೈಲ್ ಅಖ್ತರ್ (ಖಲಂದರ್ಸ್)
ಟೂರ್ನಿಯ ಶ್ರೇಷ್ಠ ಯುಎಇ ಕ್ರಿಕೆಟಿಗ: ಮುಹಮ್ಮದ್ ವಸೀಮ್ (ವಾರಿಯರ್ಸ್)
ಟೂರ್ನಿಯ ಶ್ರೇಷ್ಠ ಬೌಲರ್: ಕ್ರಿಸ್ ಜೋರ್ಡಾನ್ (ಖಲಂದರ್ಸ್) .
ಹೆಚ್ಚಿನ ವಿಕೆಟ್‌ಗಳು: ಜೇಮೀ ಒವರ್ಟನ್ (ಅಬುಧಾಬಿ) -
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ: ನಿಕೋಲಸ್ ಪೂರನ್-22
ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ: ಸೋಹೈಲ್ ಅಖ್ತರ್-22
ಹೈಯೆಸ್ಟ್ ಸ್ಕೋರ್: ನಿಕೋಲಸ್ ಪೂರನ್ -26 ಎಸೆತಗಳಲ್ಲಿ 89 ರನ್
ಅತಿ ಹೆಚ್ಚು ಅರ್ಧ ಶತಕ: ಮೊಹಮ್ಮದ್ ವಾಸೀಮ್-2
ಅತಿ ಹೆಚ್ಚು ವಿಕೆಟ್: ಜಾಮಿ ಓವರ್ಟನ್-12
ಟೂರ್ನಮೆಂಟ್‌ನಲ್ಲಿ ಗಳಿಸಿದ ರನ್: 6269 ರನ್
ಟೂರ್ನಿಯಲ್ಲಿ ಸಿಡಿದ ಒಟ್ಟು ಸಿಕ್ಸರ್‌ಗಳು: 356
ಟೂರ್ನಿಯಲ್ಲಿ ಸಿಡಿದ ಒಟ್ಟು ಬೌಂಡರಿಗಳು: 547
ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಸೋಹೈಲ್ ಅಖ್ತರ್-248
ಟೂರ್ನಿಯಲ್ಲಿ ಉರುಳಿದ ವಿಕೆಟ್‌ಗಳು: 242
ಉತ್ತಮ ಬೌಲಿಂಗ್ ಫಿಗರ್: ಫ್ಯಾಬಿಯನ್ ಅಲೆನ್ 4/13
ಒಟ್ಟು ಎಸೆದ ಎಸೆತಗಳು: 3456
ಒಟ್ಟು ಡಾಟ್ ಎಸೆತಗಳು: 1048
ಒಟ್ಟು ಕ್ಯಾಚ್‌ಗಳು: 171
ಒಟ್ಟು ರನ್‌ಔಟ್‌ಗಳು: 16